ಕೆನಡಾ: ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಜಸ್ಟಿನ್ ಟ್ರುಡೊ

0
Spread the love

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ತಮ್ಮ ಲಿಬರಲ್ ಪಕ್ಷದೊಳಗೆ ಭಿನ್ನಾಭಿಪ್ರಾಯಗಳನ್ನು ಎದುರಿಸುತ್ತಿರುವ ಕಾರಣ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ದಟ್ಟವಾಗಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಲು ಪ್ರಧಾನಿ ಕಚೇರಿ ಹಿಂದೇಟು ಹಾಕಿದೆ.

Advertisement

ಲಿಬರಲ್ ಪಕ್ಷವು ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೂ ಟ್ರುಡೊ ಹಂಗಾಮಿ ಪ್ರಧಾನಿಯಾಗಿ ಉಳಿಯುತ್ತಾರೆಯೇ ಅಥವಾ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಹೋಗಲಿದ್ದಾರೆ ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ

ಸಮೀಕ್ಷೆಗಳ ಪ್ರಕಾರ, ಪ್ರಸ್ತುತ ಅವರು ತಮ್ಮ ಪ್ರಮುಖ ಪ್ರತಿಸ್ಪರ್ಧಿ ಕನ್ಸರ್ವೇಟಿವ್ ಪಕ್ಷದ ಪಿಯರೆ ಪೊಯಿಲಿವ್ರೆಗಿಂತ 20 ಪಾಯಿಂಟ್‌ಗಳಿಂದ ಹಿಂದುಳಿದಿದ್ದಾರೆ. ರಾಷ್ಟ್ರೀಯ ಕಾಕಸ್ ಸಭೆಯಲ್ಲಿ ಟ್ರುಡೊ ಬಂಡಾಯ ಎದುರಿಸಬೇಕಾಗಬಹುದು ಎಂದು ಪಕ್ಷಕ್ಕೆ ಸಂಬಂಧಿಸಿದ ಮೂಲಗಳು ತಿಳಿಸಿವೆ.

ಪ್ರಸ್ತುತ ಲಿಬರಲ್ ಪಕ್ಷವು ಕೆನಡಾ ಸಂಸತ್ತಿನ ಹೌಸ್ ಆಫ್ ಕಾಮನ್ಸ್‌ನಲ್ಲಿ 153 ಸಂಸದರನ್ನು ಹೊಂದಿದೆ. ಕೆನಡಾದ ಹೌಸ್ ಆಫ್ ಕಾಮನ್ಸ್‌ನಲ್ಲಿ 338 ಸ್ಥಾನಗಳಿವೆ. ಇದರಲ್ಲಿ ಬಹುಮತವು 170 ಆಗಿದೆ.

ಕೆಲವು ತಿಂಗಳ ಹಿಂದೆ, ಟ್ರೂಡೊ ಸರ್ಕಾರದ ಮಿತ್ರ ಪಕ್ಷವಾದ ನ್ಯೂ ಡೆಮಾಕ್ರಟಿಕ್ ಪಾರ್ಟಿ (ಎನ್‌ಡಿಪಿ) ತನ್ನ ಬೆಂಬಲವನ್ನು ಹಿಂಪಡೆದಿತ್ತು. ಎನ್‌ಡಿಪಿ ಖಲಿಸ್ತಾನಿ ಪರ ಕೆನಡಾದ ಸಿಖ್ ಸಂಸದ ಜಗ್ಮೀತ್ ಸಿಂಗ್ ಅವರ ಪಕ್ಷವಾಗಿದೆ.

ಮೈತ್ರಿ ಮುರಿದುಹೋದ ಕಾರಣ, ಟ್ರೂಡೊ ಸರ್ಕಾರವು ಅಲ್ಪಮತಕ್ಕೆ ಇಳಿಯಿತು. ಆದಾಗ್ಯೂ, ಅಕ್ಟೋಬರ್ 1 ರಂದು ನಡೆದ ಬಹುಮತದ ಪರೀಕ್ಷೆಯಲ್ಲಿ, ಟ್ರುಡೊ ಅವರ ಲಿಬರಲ್ ಪಕ್ಷವು ಮತ್ತೊಂದು ಪಕ್ಷದ ಬೆಂಬಲವನ್ನು ಪಡೆದುಕೊಂಡಿತ್ತು.

2013ರಲ್ಲಿ ಲಿಬರಲ್ ಪಾರ್ಟಿಯು ತೀವ್ರ ಬಿಕ್ಕಟ್ಟಿನಲ್ಲಿದ್ದಾಗ ಹಾಗೂ ಹೌಸ್ ಆಫ್ ಕಾಮನ್ಸ್ ನಲ್ಲಿ ಮೂರನೆಯ ಸ್ಥಾನಕ್ಕೆ ಕುಸಿದಿದ್ದಾಗ ಜಸ್ಟಿನ್ ಟ್ರೂಡೊ ಲಿಬರಲ್ ಪಾರ್ಟಿಯ ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದರು.


Spread the love

LEAVE A REPLY

Please enter your comment!
Please enter your name here