ಸರ್ಕಾರ ಎಚ್ಚೆತ್ತುಕೊಂಡು HMPV ವೈರಸ್ ಹರಡುವುದನ್ನು ತಡೆಯಲು ಮುಂದಾಗಬೇಕು: ಅಶ್ವಥ್ ನಾರಾಯಣ್‌

0
Spread the love

ಬೆಂಗಳೂರು: ಚೀನಾದಲ್ಲಿ ಕಾಡುತ್ತಿರುವ ಹ್ಯೂಮನ್ ಮೆಟಾನ್ಯೂಮೋ ವೈರಸ್ ಭಾರತಕ್ಕೂ ಕಾಲಿಟ್ಟಿದ್ದು, ಬೆಂಗಳೂರಿನಲ್ಲಿ ಟ್ರಾವೆಲ್‌ ಹಿಸ್ಟರಿ ಇಲ್ಲದ ಎರಡು ಪ್ರಕರಣಗಳು ಪತ್ತೆಯಾಗಿದೆ. ಇನ್ನೂ ಈ ವಿಚಾರವಾಗಿ ಬಿಜೆಪಿ ಶಾಸಕ ಡಾ ಸಿಎನ್ ಅಶ್ವಥ್ ನಾರಾಯಣ್‌ ಪ್ರತಿಕ್ರಿಯಿಸಿದ್ದಾರೆ.

Advertisement

ನಗರದಲ್ಲಿ ಮಾತನಾಡಿದ ಅವರು, ವೈರಸ್ ಬಗ್ಗೆ ತಾನೇನೂ ಹೇಳಲಾಗಲ್ಲ, ಅದು ಯಾವ ವೇರಿಯಂಟ್ ಮತ್ತು ಕೊರೋನಾ ವೈರಸ್ ರೂಪಾಂತರ ಹೊಂದಿರಬಹುದುದಾದ ಸಾಧ್ಯತೆಯನ್ನು ಪತ್ತೆ ಮಾಡಲು ರಾಜ್ಯದಲ್ಲಿ ಸಾಕಷ್ಟು ವೈರಾಲಜಿ ಸಂಸ್ಥೆಗಳಿವೆ ಎಂದರು.

ಇನ್ನೂ ಗಾಢ ನಿದ್ರೆಯಲ್ಲಿರುವ ಸರ್ಕಾರ ಎಚ್ಚೆತ್ತುಕೊಂಡು ವೈರಸ್ ಹರಡುವುದನ್ನು ತಡೆಯಲು ಮುಂದಾಗಬೇಕು, ಸರ್ಕಾರಕ್ಕೆ ಸೇವಾ ಶುಲ್ಕ ಸಂಗ್ರಹಿಸುವುಷ್ಟೇ ಗೊತ್ತು ಸೇವೆ ಒದಗಿಸುವುದು ಗೊತ್ತಿಲ್ಲ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here