HomeKarnataka Newsವಾಟ್ಸಪ್ʼನ ಹೊಸ ವೈಶಿಷ್ಟ್ಯ ಕುರಿತು ಕೇಂದ್ರ ಸರ್ಕಾರಕ್ಕೆ ಕಳವಳ: ಪ್ರತಿಕ್ರಿಯೆ ಸಲ್ಲಿಸಲು ಮೆಟಾಗೆ ಮತ್ತೆ ಮೂರು...

ವಾಟ್ಸಪ್ʼನ ಹೊಸ ವೈಶಿಷ್ಟ್ಯ ಕುರಿತು ಕೇಂದ್ರ ಸರ್ಕಾರಕ್ಕೆ ಕಳವಳ: ಪ್ರತಿಕ್ರಿಯೆ ಸಲ್ಲಿಸಲು ಮೆಟಾಗೆ ಮತ್ತೆ ಮೂರು ದಿನಗಳ ಕಾಲಾವಕಾಶ

For Dai;y Updates Join Our whatsapp Group

ನವದೆಹಲಿ: ವಾಟ್ಸಪ್‌ನಲ್ಲಿ ಪರಿಚಯಿಸಲು ಉದ್ದೇಶಿಸಿರುವ ‘ಯೂಸರ್‌ನೇಮ್’ (Username) ವೈಶಿಷ್ಟ್ಯದ ಕುರಿತು ಉದ್ಭವಿಸಿರುವ ಆತಂಕಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸಲು ಟೆಕ್ ದೈತ್ಯ ಮೆಟಾಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಮೂರು ದಿನಗಳ ಕಾಲಾವಕಾಶ ನೀಡಿದೆ.

ಹೆಚ್ಚುವರಿ ಸಮಯ ನೀಡುವಂತೆ ಮೆಟಾ ಮನವಿ ಮಾಡಿದ್ದ ಹಿನ್ನೆಲೆ ಸರ್ಕಾರ ಈ ಅವಕಾಶ ಕಲ್ಪಿಸಿದೆ. ಈ ಮಧ್ಯೆ, ಎಲ್ಲಾ ಕಳವಳಗಳು ಮತ್ತು ತಾಂತ್ರಿಕ ವಿಚಾರಗಳು ಇತ್ಯರ್ಥವಾಗುವವರೆಗೆ ಭಾರತದಲ್ಲಿ ವಾಟ್ಸಪ್‌ನ ಹೊಸ ಯೂಸರ್‌ನೇಮ್ ವೈಶಿಷ್ಟ್ಯವನ್ನು ಜಾರಿಗೆ ತರುವುದಿಲ್ಲ ಎಂದು ಮೆಟಾ ಕೇಂದ್ರ ಸರ್ಕಾರಕ್ಕೆ ಭರವಸೆ ನೀಡಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ವಾರ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸಮನ್ಸ್ ನೀಡಿದ ಬಳಿಕ ಮೆಟಾ ಪ್ರತಿನಿಧಿಗಳು ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು.

ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಬಹಿರಂಗಪಡಿಸದೇ, ಯೂಸರ್‌ನೇಮ್ ಮೂಲಕ ಇತರರೊಂದಿಗೆ ಸಂಪರ್ಕ ಸಾಧಿಸುವ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಹೊಸ ವೈಶಿಷ್ಟ್ಯವನ್ನು ವಾಟ್ಸಪ್ ಪರೀಕ್ಷಿಸುತ್ತಿದೆ. ಶೀಘ್ರದಲ್ಲೇ ಭಾರತದಲ್ಲೂ ಇದನ್ನು ಪರಿಚಯಿಸುವ ಯೋಜನೆ ಹೊಂದಿದ್ದರೂ, ಅದರ ಸುರಕ್ಷತೆ ಮತ್ತು ದುರ್ಬಳಕೆಯ ಸಾಧ್ಯತೆಗಳ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಕಳವಳ ವ್ಯಕ್ತಪಡಿಸಿದೆ.

ಯೂಸರ್‌ನೇಮ್ ವ್ಯವಸ್ಥೆಯಿಂದ ನಕಲಿ ಖಾತೆಗಳನ್ನು ಸೃಷ್ಟಿಸುವುದು, ಪ್ರಸಿದ್ಧ ವ್ಯಕ್ತಿಗಳ ಹೆಸರಿನಲ್ಲಿ ವಂಚನೆ ನಡೆಸುವುದು, ಗುರುತಿನ ಕಳವು ಹಾಗೂ ಸೈಬರ್ ಅಪರಾಧಗಳ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಆತಂಕವನ್ನು ಸರ್ಕಾರ ವ್ಯಕ್ತಪಡಿಸಿದೆ. ಒಂದೇ ರೀತಿಯ ಅಥವಾ ಗೊಂದಲ ಉಂಟುಮಾಡುವ ಯೂಸರ್‌ನೇಮ್‌ಗಳನ್ನು ಬಳಸಿಕೊಂಡು ಸಾರ್ವಜನಿಕರನ್ನು ದಾರಿ ತಪ್ಪಿಸುವ ಸಾಧ್ಯತೆಯೂ ಇದೆ ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

ಈ ವಿಷಯ ಸಾರ್ವಜನಿಕ ವಲಯದಲ್ಲಿಯೂ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಹಿನ್ನೆಲೆಯಲ್ಲಿ, ಎಲ್ಲಾ ಭದ್ರತಾ ಮತ್ತು ಗೌಪ್ಯತಾ ವಿಚಾರಗಳ ಕುರಿತು ಸಮಾಲೋಚನೆ ಪೂರ್ಣಗೊಳ್ಳುವವರೆಗೆ ಭಾರತದಲ್ಲಿ ಈ ಹೊಸ ವೈಶಿಷ್ಟ್ಯವನ್ನು ಜಾರಿಗೆ ತರದಂತೆ ಮೆಟಾ ತಾತ್ಕಾಲಿಕವಾಗಿ ತಡೆಹಿಡಿದಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img