HomeGadag Newsಕೃತ್ಯವನ್ನು ಖಂಡಿಸಿ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಕೃತ್ಯವನ್ನು ಖಂಡಿಸಿ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘ ಗದಗ ಜಿಲ್ಲಾ ಘಟಕದ ವತಿಯಿಂದ ಕಲ್ಕತ್ತಾದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಘೋರ ಕೃತ್ಯವನ್ನು ಖಂಡಿಸಿ ಐ.ಎಮ್.ಎ.ಯನ್ನು ಬೆಂಬಲಿಸಿ ಪ್ರತಿಭಟನೆಯನ್ನು ನಡೆಸಲಾಯಿತು.

ಐ.ಎಮ್.ಎ.ಹಾಲ್‌ನಿಂದ ಗದಗ ಜಿಲ್ಲಾಧಿಕಾರಿಗಳ ಕಛೇರಿಗೆ ನಡಿಗೆಯ ಮೂಲಕ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಲು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷರಾದ ಮಹೇಶ ಮುರಗಿ, ಕಾರ್ಯದರ್ಶಿ ಕೃಷ್ಣಾ ದಾಸರ, ಖಜಾಂಚಿ ಶ್ರೀಕಂಠಯ್ಯ ಹಿರೇಮಠ, ಸದಸ್ಯರಾದ ಶ್ರೀಕಾಂತ ಮುಂಡಾಸದ, ಎಮ್.ಎಚ್. ದಂಡೊತಿ, ಸಂತೋಷ ವಾಗ್ಮಾರೆ, ವಿನಯಕುಮಾರಯ್ಯ, ಮಂಜುನಾಥ ಎಚ್., ಪವನಕುಮಾರ, ನಾಗರಾಜ ನೀಲಗುಂದ, ಮಂಜುನಾಥ ಬಂಕಾಪೂರ, ಸತೀಶ ನಿಲುಗಲ್, ಪ್ರಸನ್ನಕುಮಾರ, ಇರ್ಷಾದ, ಮಲ್ಲಿಕಾರ್ಜುನ ಹಾಳಕೇರಿ, ಶಫಿ, ಯೂನೂಸ್ ಟೆಕ್ಕೇದ, ಪರಶುರಾಮ, ರಾಜು ರೋಣದ, ಸಂತೋಷ ಮುಂತಾದವರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img