HomeGadag Newsಉಚಿತ ಆರೋಗ್ಯ ಚಿಕಿತ್ಸಾ ಶಿಬಿರ

ಉಚಿತ ಆರೋಗ್ಯ ಚಿಕಿತ್ಸಾ ಶಿಬಿರ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಆಯುಷ್ ಆರೋಗ್ಯ ಕ್ಷೇಮ ಕೇಂದ್ರದ ವತಿಯಿಂದ ಅಂತೂರ ಬೆಂತೂರಿನ ದುರ್ಗಮ್ಮದೇವಿ ದೇವಸ್ಥಾನದಲ್ಲಿ ಹಿರಿಯ ನಾಗರಿಕರಿಗೆ ಬಿಪಿ, ಮಧುಮೇಹ ಪರೀಕ್ಷೆ, ಆರೋಗ್ಯ ತಪಾಸಣಾ ಶಿಬಿರವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ಉದ್ಘಾಟನೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರಕಾಶಗೌಡ ಪಾಟೀಲ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಎಂ.ಎಸ್. ಉಪ್ಪಿನ್ ನೆರವೇರಿಸಿದರು. ಪ್ರಾಸ್ತಾವಿಕವಾಗಿ ಡಾ. ಎಂ.ಎಸ್. ಉಪ್ಪಿನ ಮಾತನಾಡಿ, ಪ್ರಾಚೀನ ಪದ್ಧತಿಯಾದ ಆಯುರ್ವೇದ ಬಳಸಿ ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಸಲಹೆ ನೀಡಿದರು.

ಡಾ.ಅಶೋಕ ಮತ್ತಿಗಟ್ಟಿಯವರು ಆರೋಗ್ಯ ಕಾಪಾಡಿಕೊಳ್ಳಲು ಯೋಗದ ಆಹಾರದ ಬಗ್ಗೆ ಮಾಹಿತಿ ನೀಡಿದರು. ಡಾ. ಸಂಜೀವ ನಾರಪ್ಪನವರು ಡೆಂಗ್ಯೂ ಮುಂಜಾಗ್ರತಾ ಕ್ರಮವಾಗಿ ಹೋಮಿಯೋಪತಿಯ ಔಷಧಿ ತೆಗೆದುಕೊಳ್ಳಲು ತಿಳಿಸಿದರು.

ಡಾ. ಅಶೋಕ್ ಮತ್ತಿಗಟ್ಟಿ. ಡಾ. ಸಂಜೀವ ನಾರಪ್ಪನವರ್, ಡಾ. ಕಮಲಾಕರ್ ಅರಳೆ, ಡಾ. ಫಿಲೋಮಿನಾ ರೋಗಿಗಳ ತಪಾಸಣೆ ನಡೆಸಿ ಸೂಕ್ತ ಸಲಹೆ-ಚಿಕಿತ್ಸೆ ನೀಡಿದರು. ಕಾರ್ಯಕ್ರಮದಲ್ಲಿ ಸಿಎಚ್‌ಓ ಸುದಿನ್ ರೋಗಿಗಳಿಗೆ ಬಿ.ಪಿ, ಶುಗರ್ ಪರೀಕ್ಷಿಸಿದರು. ಅಂದಾನಪ್ಪ ಚಿಂಚಲಿ, ಭೀಮಪ್ಪ ಬಿರಿಸಲ, ಆಯುಷ್ ಸಿಬ್ಬಂದಿ ಬಸವರಾಜ ಮಳ್ಳಿ ಹಾಗು ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದರು.

ಡಾ. ಕಮಲಾಕರ್ ಅರಳೆ ಸ್ವಾಗತಿಸಿದರು. ಶೋಭಾ ಸೂರಣಗಿ ಪ್ರಾರ್ಥಿಸಿದರು. ಶರಣಯ್ಯ ದೊಡ್ಡಯ್ಯಪ್ಪನವರ್ ನಿರೂಪಿಸಿದರು. ಡಾ. ಫಿಲೋಮಿನಾ ಡಾ. ಫಿಲೋಮಿನಾ ವಂದಿಸಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img