HomeHaveriಗ್ಯಾರಂಟಿ ಹೆಸರಲ್ಲಿ ಕಾಂಗ್ರೆಸ್ ಮೋಸ ಮಾಡಿದೆ : ತಾರಾ ಅನುರಾಧ

ಗ್ಯಾರಂಟಿ ಹೆಸರಲ್ಲಿ ಕಾಂಗ್ರೆಸ್ ಮೋಸ ಮಾಡಿದೆ : ತಾರಾ ಅನುರಾಧ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಹಾವೇರಿ : ಕಾಂಗ್ರೆಸ್‌ನವರು ಗ್ಯಾರಂಟಿ ಹೆಸರಲ್ಲಿ ಅತ್ತೆಗೆ ಕೊಟ್ಟು ಸೊಸೆಗೆ ಮೋಸ ಮಾಡಿದ್ದಾರೆ ಎಂದು ಚಿತ್ರನಟಿ ಹಾಗೂ ವಿ.ಪ ಮಾಜಿ ಸದಸ್ಯೆ ತಾರಾ ಅನುರಾಧ ಹೇಳಿದರು.

ಅವರು ಹಾವೇರಿ ಲೋಕಸಭಾ ಕ್ಷೇತ್ರದ ಹಾನಗಲ್ ತಾಲೂಕಿನ ಅಕ್ಕಿ ಆಲೂರಿನಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಏರ್ಪಡಿಸಿದ್ದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.

ಇಡೀ ದೇಶವನ್ನು ತನ್ನ ಪರಿವಾರ ಎಂದು ಕರೆದ ಏಕೈಕ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿಯವರು. ಮೋದಿ ಅವರ ಹೆಸರಲ್ಲೆ ಮತ ಕೇಳುತ್ತಿದ್ದೀರಾ ಎನ್ನುತ್ತಾರೆ. ಇಡೀ ವಿಶ್ವವೇ ಅವರನ್ನು ಕರೆದು ಗೌರವಿಸುತ್ತಿದೆ. ಅಂತವರ ಹೆಸರಿನಲ್ಲಿ ಮತ ಕೇಳುವುದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ನವರು ಬಸ್‌ನಲ್ಲಿ ಮಹಿಳೆಯರಿಗೆ ಮಾತ್ರ ಫ್ರೀ ಎಂದು ಹೇಳಿ ಗಂಡಸರಿಗೆ ಡಬಲ್ ರೇಟ್ ಹಾಕಿದ್ದಾರೆ.

ಸಂಸಾರ ಅಂದ ಮೇಲೆ ಗಂಡ, ಹೆಂಡತಿ, ಮಕ್ಕಳು ಎಲ್ಲರೂ ಇರುತ್ತೇವೆ. ವಿದ್ಯುತ್ ಫ್ರೀ ಎಂದು ಹೇಳಿ ಎರಡು ಪಟ್ಟು ಬಿಲ್ ಹೆಚ್ಚಳ ಮಾಡಿದ್ದಾರೆ. ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img