Home Gadag News ದೈಹಿಕ ಸಾಮರ್ಥ್ಯ ಹೆಚ್ಚಿಸಲು ಕ್ರಿಕೆಟ್ ಸಹಕಾರಿ

ದೈಹಿಕ ಸಾಮರ್ಥ್ಯ ಹೆಚ್ಚಿಸಲು ಕ್ರಿಕೆಟ್ ಸಹಕಾರಿ

0
ದೈಹಿಕ ಸಾಮರ್ಥ್ಯ ಹೆಚ್ಚಿಸಲು ಕ್ರಿಕೆಟ್ ಸಹಕಾರಿ
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ: ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಹೆಚ್ಚಿಸಲು ಕ್ರಿಕೆಟ್ ಸಹಕಾರಿಯಾಗುವುದು ಎಂದು ಹಜರೇಸಾಬ ಲಾಡಸಾಬನವರ ಹೇಳಿದರು.

ಅವರು ಪಟ್ಟಣದ ಆರ್.ಎನ್. ದೇಶಪಾಂಡೆ ಕಾಲೇಜು ಮೈದಾನದಲ್ಲಿ 6ನೇ ವರ್ಷದ ಮುಳಗುಂದ ಪ್ರೀಮಿಯರ್ ಲೀಗ್ ಕ್ರಿಕೆಟ್ ಉದ್ಘಾಟಿಸಿ ಮಾತನಾಡಿ, ಕ್ರೀಡೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸುವುದು ಮುಖ್ಯವಾಗಿದ್ದು, ಮುಳಗುಂದ ಪ್ರೀಮಿಯರ್ ಲೀಗ್ ಪ್ರತಿವರ್ಷ ಅತ್ಯಂತ ಯಸಶ್ವಿಯಾಗಿ ನಡೆದುಕೊಂಡು ಬಂದಿದೆ. ಕ್ರೀಡೆಯಲ್ಲಿ ಪ್ರತಿಯೊಬ್ಬರು ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಹೆಚ್ಚುತ್ತದೆ ಎಂದರು.

ಹಜರೇಸಾಬ ಲಾಡಸಾಬನವರ, ಸದಾನಂದ ಚವಡಿ, ಆಶೀಫ್ ನದ್ದಿಮುಲ್ಲಾ, ಚಾಂದಸಾಬ ಮುಳಗುಂದ, ರಫೀಕ್ ಸುಂಕದ, ರಫೀಕ್ ಶಿರಬಡಗಿ, ಮೈಬುಬಸಾಬ ಮಕಾಂದಾರ, ಇಸ್ಮಾಯಿಲ್ ಖಾಗದ, ಆರೀಫ್ ತಿಪ್ಪೆಸಾಬನವರ, ಈರಣ್ಣಾ ಮಜ್ಜಿಗುಡ್ಡ, ಮಲ್ಲು ಸಣ್ಣತಮ್ಮಣ್ಣವರ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here