HomeEntertainmentಸಿನಿಮಾದಲ್ಲಿ ಕೋಟಿ ಕೋಟಿ.. ಸಿಎಂ ಆಗಿ ಲಕ್ಷಗಳಲ್ಲಿ ಸಂಬಳ: ವಿಜಯ್‌ಗೆ ಸಿಗೋ ಪವರ್‌ಫುಲ್ ಸೌಲಭ್ಯಗಳು ಯಾವೆಲ್ಲಾ?

ಸಿನಿಮಾದಲ್ಲಿ ಕೋಟಿ ಕೋಟಿ.. ಸಿಎಂ ಆಗಿ ಲಕ್ಷಗಳಲ್ಲಿ ಸಂಬಳ: ವಿಜಯ್‌ಗೆ ಸಿಗೋ ಪವರ್‌ಫುಲ್ ಸೌಲಭ್ಯಗಳು ಯಾವೆಲ್ಲಾ?

For Dai;y Updates Join Our whatsapp Group

Spread the love

ತಮಿಳುನಾಡಿನ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿರುವ ದಳಪತಿ ವಿಜಯ್, ಚಿತ್ರರಂಗದ ಭಾರೀ ಸಂಭಾವನೆ ಬಿಟ್ಟು ಈಗ ಆಡಳಿತದ ಜವಾಬ್ದಾರಿ ಹೊತ್ತಿದ್ದಾರೆ. ಸಿಎಂ ಆದ ಬಳಿಕ ಅವರಿಗೆ ಸಿಗುವ ಸಂಬಳ ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ಹೊರಬಿದ್ದಿದೆ.

ತಮಿಳುನಾಡು ಮುಖ್ಯಮಂತ್ರಿಗೆ ಮೂಲ ವೇತನವಾಗಿ ತಿಂಗಳಿಗೆ 2,05,000 ರೂಪಾಯಿ ಸಿಗುತ್ತದೆ. ವಿವಿಧ ಭತ್ಯೆಗಳನ್ನು ಸೇರಿಸಿದರೆ ಒಟ್ಟು ಸಂಬಳ ಸುಮಾರು 2.85 ಲಕ್ಷ ರೂಪಾಯಿಗೆ ಏರಲಿದೆ. ವಾರ್ಷಿಕವಾಗಿ ಸುಮಾರು 34.20 ಲಕ್ಷ ರೂಪಾಯಿ ಆದಾಯ ಸಿಗಲಿದೆ.

ಒಂದು ಸಿನಿಮಾಕ್ಕೆ 100ರಿಂದ 200 ಕೋಟಿ ರೂಪಾಯಿ ವರೆಗೆ ಸಂಭಾವನೆ ಪಡೆಯುತ್ತಿದ್ದ ವಿಜಯ್, ಇದೀಗ ಸರ್ಕಾರಿ ಹುದ್ದೆಯ ಸಂಬಳಕ್ಕೆ ಬದಲಾಗಿರುವುದು ಅಭಿಮಾನಿಗಳಲ್ಲಿ ಚರ್ಚೆ ಹುಟ್ಟುಹಾಕಿದೆ.

ಸಿಎಂ ಆಗಿರುವ ವಿಜಯ್ ಅವರಿಗೆ ಸರ್ಕಾರಿ ಬಂಗಲೆ, ಕ್ಯಾಂಪ್ ಆಫೀಸ್, ಬುಲೆಟ್ ಪ್ರೂಫ್ ವಾಹನ, ಬೆಂಗಾವಲು ಪಡೆ ಹಾಗೂ ಅಧಿಕೃತ ಪ್ರವಾಸ ವೆಚ್ಚ ಸೇರಿದಂತೆ ಹಲವು ಸೌಲಭ್ಯಗಳು ದೊರೆಯಲಿವೆ. ಜೊತೆಗೆ Z+ ಭದ್ರತೆಯಡಿ 24 ಗಂಟೆಗಳ ಪೊಲೀಸ್ ಕಾವಲು ಕೂಡ ಇರಲಿದೆ.

ನಿವೃತ್ತಿಯ ನಂತರವೂ ಪಿಂಚಣಿ, ವೈದ್ಯಕೀಯ ಸೌಲಭ್ಯ, ರೈಲು ಪ್ರಯಾಣ ಹಾಗೂ ಕಚೇರಿ ಸಿಬ್ಬಂದಿ ಸೌಲಭ್ಯಗಳು ಮುಂದುವರಿಯಲಿದ್ದು, ಸಿನಿಮಾ ಸೂಪರ್‌ಸ್ಟಾರ್ ಇದೀಗ ಪವರ್‌ಫುಲ್ ರಾಜಕೀಯ ನಾಯಕರಾಗಿ ಹೊಸ ಅಧ್ಯಾಯ ಆರಂಭಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!