ಬೆಂಗಳೂರು: ಕಳೆದ ರಾತ್ರಿ ದೆಹಲಿಯಲ್ಲಿ ನಡೆದ ನಿಗೂಢ ಸ್ಫೋಟಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯೇ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಹೊರಗಿನ ಶಕ್ತಿಗಳು ನಮ್ಮ ತಾಳ್ಮೆ ಪರೀಕ್ಷೆ ಮಾಡುತ್ತವೆ. ಭಯೋತ್ಪಾದಕ ಕೃತ್ಯ ಮಾಡ್ತಿರೋರನ್ನು ಆ ಧರ್ಮದವರು ಖಂಡಿಸಬೇಕು,
ಪುಲ್ವಾಮಾ ದಾಳಿಯಾದ ಮೇಲೆ ಭಾರತ ಎಚ್ಚೆತ್ತುಕೊಂಡಿದೆ. ಅವರಿಗೆ ತಕ್ಕ ಪಾಠ ಕಲಿಸುವ ಕೆಲಸ ಮೋದಿ ಮಾಡಿದ್ದಾರೆ. ಇನ್ನು ಅನೇಕ ನುಸುಳುಕೋರರು ಭಾರತದಲ್ಲಿದ್ದಾರೆ. ಅವರನ್ನು ಹುಡುಕಿ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಘಟನೆಯನ್ನ ಪ್ರತಿಯೊಬ್ಬ ಪ್ರಜೆ ಖಂಡಿಸುತ್ತಾನೆ. ನಾನು ಖಂಡಿಸುತ್ತೇನೆ. ಯಾರು ಕೃತ್ಯಕ್ಕೆ ಕೈ ಜೋಡಿಸಿದ್ದಾರೆ ಅವರನ್ನ ಬಂಧಿಸಬೇಕು. ಶಿಕ್ಷೆ ಕೊಡಿಸಬೇಕು. ಯಾರ ಕೈವಾಡ ಇದೆ ಅವರ ವಿರುದ್ಧವೂ ಕ್ರಮ ಆಗಬೇಕು. ಕರ್ನಾಟಕ ಸರ್ಕಾರ ಹೇಗೆ ನಡೆದುಕೊಳುತ್ತಿದೆ.
ಜೈಲಿನಲ್ಲಿ ಇದ್ದರೂ ರಕ್ಷಣೆ ಕೊಡ್ತಿದೆ. ಇಂತಹ ಮನಸ್ಥಿತಿ ಇರೋರು ದೇಶದಲ್ಲಿ ಇರೋದು ಒಳ್ಳೆಯದಲ್ಲ. ಭಯೋತ್ಪಾದಕತೆ ಅನ್ನೋದು ಒಂದು ಧರ್ಮ. ಅದನ್ನ ಹತ್ತಿಕ್ಕೋ ಕೆಲಸ ಮಾಡಬೇಕು ಎಂದಿದ್ದಾರೆ.


