ಜಾತ್ರಾ ಮಹೋತ್ಸವದ ನಿಮಿತ್ತ ಭೂತಾಯಿಗೆ ಹಾಲೆರದ ಭಕ್ತರು

0
dyamavva
Spread the love

ವಿಜಯಸಾಕ್ಷಿ ಸುದ್ದಿ, ರೋಣ : ಗ್ರಾಮ ದೇವತೆ ದ್ಯಾಮವ್ವ ದೇವಿಯ ಜಾತ್ರಾ ಮಹೋತ್ಸವದ ನಿಮಿತ್ತ ಭೂತಾಯಿಗೆ ಹಾಲೆರೆಯುವ, 501 ಮಹಿಳೆಯರಿಂದ ಕುಂಭಮೇಳ ಕಾರ್ಯಕ್ರಮ ನೆರವೇರಿತು.

Advertisement

ದ್ಯಾಮವ್ವ ದೇವಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ಮೊದಲ ದಿನ ಸೀಮೆ ಹದ್ದಿನ ಜಮೀನುಗಳಿಗೆ ಹಾಲು ಎರೆಯಲಾಯಿತು. ನಂತರ ಗ್ರಾಮದ ಮಾರುತೇಶ್ವರ ದೇವಸ್ಥಾನದಿಂದ ಗ್ರಾಮ ದೇವತೆಯ ಭಾವಚಿತ್ರದೊಂದಿಗೆ 501 ಮಹಿಳೆಯರಿಂದ ಕುಂಭಮೇಳ ನಡೆಯಿತು. ಭಕ್ತರು ಶನಿವಾರ ಮಧ್ಯರಾತ್ರಿಯಿಂದ ರವಿವಾರ ಬೆಳಗಿನ ಜಾವದವರೆಗೂ ಭೂತಾಯಿಗೆ ಹಾಲು ಎರೆಯುವ ಕಾರ್ಯದಲ್ಲಿ ತೊಡಗಿದ್ದರು.

ಶಿರಹಟ್ಟಿ ತಾಲೂಕಿನ ಸುಕ್ಷೇತ್ರ ವರವಿ ಮೌನೇಶ್ವರ ಸನ್ನಿಧಾನದ ಹೊಳೆಯಿಂದ ತರಲಾಗಿದ್ದ ಜಲದೊಂದಿಗೆ ಕ್ಷೀರಾಭಿಷೇಕವನ್ನು ಭಕ್ತರು ನೆರವೇರಿಸಿದರು. ಜಾತ್ರಾ ಮಹೋತ್ಸವದ ನಿಮಿತ್ತ ಏ. 15ರಂದು ಗ್ರಾಮದೇವತೆಯ ಚಳ್ಳಾಟ ನಡೆಯಲಿದೆ. ಈ ಸಂಧರ್ಭದಲ್ಲಿ ದೇವಿಯು ಗ್ರಾಮದ ಸರ್ವ ಭಕ್ತರಿಗೆ ದರ್ಶನ ನೀಡಲಿದ್ದು, ದೇವಿಯ ದರ್ಶನ ಸಂದರ್ಭದಲ್ಲಿ ಗ್ರಾಮದ ಒಳಗಡೆ ವಾಹನ ಸಂಚಾರವನ್ನು ನಿಷೇದಿಸಲಾಗುತ್ತದೆ.


Spread the love

LEAVE A REPLY

Please enter your comment!
Please enter your name here