HomeDharwadಹುಬ್ಬಳ್ಳಿ-ಧಾರವಾಡ: ತಾತ್ಕಾಲಿಕವಾಗಿ ವಾಹನಗಳ ಮಾರ್ಗ ಬದಲಾವಣೆ

ಹುಬ್ಬಳ್ಳಿ-ಧಾರವಾಡ: ತಾತ್ಕಾಲಿಕವಾಗಿ ವಾಹನಗಳ ಮಾರ್ಗ ಬದಲಾವಣೆ

Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ಲೋಕಸಭೆ ಚುನಾವಣೆ ನಾಮಪತ್ರ ಸಲ್ಲಿಕೆ ನಿಮಿತ್ತ ಏ. 15ರಿಂದ ಏ. 18ರವರೆಗೆ ಧಾರವಾಡ ನಗರದಲ್ಲಿ ತಾತ್ಕಾಲಿಕವಾಗಿ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಮಹಾನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಳಗಾವಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೋಗುವ ವಾಹನಗಳು-ಜುಬ್ಲಿ ಸರ್ಕಲ್, ಸಿಎಸ್‌ಐ ಕಾಲೇಜ್ ರೋಡ್, ಲೈನ್ ಬಜಾರ ಮುಖಾಂತರ ಎನ್.ಟಿ.ಟಿ.ಎಫ್ ಕ್ರಾಸ್‌ನಿಂದ ಹುಬ್ಬಳ್ಳಿ ಕಡೆಗೆ ಹೋಗಬೇಕು. ಸವದತ್ತಿ ಕಡೆಯಿಂದ ಧಾರವಾಡ ಕಡೆಗೆ ಬರುವ ವಾಹನಗಳು-ಡಿಪೋ ಸರ್ಕಲ್, ಗೊಲ್ಲರ ಓಣಿ ಕ್ರಾಸ್, ಕಮಲಾಪೂರ ಉಸುಕಿನ ಅಡ್ಡಾ, ಮರಾಠಾ ಕಾಲನಿ ರೋಡ್ ಮುಖಾಂತರ ಹೋಗಬೇಕು.

ನವಲಗುಂದ ಕಡೆಯಿಂದ ಧಾರವಾಡ ಕಡೆಗೆ ಬರುವ ವಾಹನಗಳು-ಚರಂತಿಮಠ ಗಾರ್ಡನ್ ಕ್ರಾಸ್, ಕಾಮನಕಟ್ಟಿ ಕೂಟ, ಹೊಸ ಯಲ್ಲಾಪೂರ ಸರ್ಕಲ್, ಸುಣ್ಣದ ಬಟ್ಟಿ ರೋಡ್ ಮೂಲಕ ಲಘು ವಾಹನಗಳು ಮತ್ತು ಹೆಬ್ಬಳ್ಳಿ ಅಗಸಿ, ಡಿಪೋ ಸರ್ಕಲ್, ಗೊಲ್ಲರ ಓಣಿ, ಮರಾಠಾ ಕಾಲನಿ ರೋಡ್ ಮೂಲಕ ಬಸ್ಸುಗಳು ಹೋಗಬೇಕು.

ಹಳಿಯಾಳ ಕಡೆಯಿಂದ ಧಾರವಾಡ ಕಡೆಗೆ ಬರುವ ವಾಹನಗಳು-ದಾಸನಕೊಪ್ಪ ಸರ್ಕಲ್, ಜರ್ಮನ್ ಸರ್ಕಲ್, ಉಪನಗರ ಪಿ.ಎಸ್ ಮೂಲಕ ಹೋಗಬೇಕು. ಗೋವಾ ಕಡೆಯಿಂದ ಧಾರವಾಡ ಕಡೆಗೆ ಬರುವ ವಾಹನಗಳು-ಜರ್ಮನ್ ಸರ್ಕಲ್, ಹಳೇ ಎಸ್.ಪಿ ಆಪೀಸ್ ಕ್ರಾಸ್, ನಾಯಕ ಅಡ್ಡಾ ಕ್ರಾಸ್, ಹಳೇ ಬಸ್ ನಿಲ್ದಾಣ ಮೂಲಕ ಹೋಗಬೇಕು.

ಹುಬ್ಬಳ್ಳಿ ಮತ್ತು ಕಲಘಟಗಿ ಕಡೆಯಿಂದ ಧಾರವಾಡ ಕಡೆಗೆ ಬರುವ ವಾಹನಗಳು-ಕೋರ್ಟ್ ಸರ್ಕಲ್, ಕಾಸ್ಮಸ್ ಕ್ಲಬ್ ರೋಡ್, ಲೈನ್ ಬಜಾರ, ಸಿಎಸ್‌ಐ ಕಾಲೇಜ್ ರೋಡ್ ಮತ್ತು ಬಾಗಲಕೋಟ್ ಪೆಟ್ರೋಲ್ ಪಂಪ್, ಮಹಿಷಿ ರೋಡ್, ಎಮ್ಮಿಕೇರಿ ಕ್ರಾಸ್, ಹೆಡ್ ಪೋಸ್ಟ್ ಆಫೀಸ್, ಕೋರ್ಟ್ ಸರ್ಕಲ್ ಮೂಲಕ ಸಂಚರಿಸಬೇಕೆAದು ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!