HomeDharwadಸಿದ್ಧಾಂತ ಶಿಖಾಮಣಿ ಮನುಕುಲದ ಬೆಳಕು : ರಂಭಾಪುರಿ ಜಗದ್ಗುರುಗಳು

ಸಿದ್ಧಾಂತ ಶಿಖಾಮಣಿ ಮನುಕುಲದ ಬೆಳಕು : ರಂಭಾಪುರಿ ಜಗದ್ಗುರುಗಳು

Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ಸಕಲ ಜೀವಾತ್ಮರಿಗೂ ಅನ್ವಯವಾಗಬಹುದಾದ ಆಧ್ಯಾತ್ಮ ಚಿಂತನೆಯ ಮೇರು ಮೌಲ್ಯಗಳ ನಿರೂಪಣೆಯೊಂದಿಗೆ ಸಾತ್ವಿಕ, ಸತ್ಯ ಶುದ್ಧ ಜೀವನ ವಿಧಾನ ಹೊಂದುವಲ್ಲಿ ಮಾರ್ಗದರ್ಶನ ಮಾಡುವ ಶ್ರೇಷ್ಠ ಶಾಸ್ತç ಗ್ರಂಥ ಸಿದ್ಧಾಂತ ಶಿಖಾಮಣಿಯು ಮನುಕುಲದ ಮಹಾ ಬೆಳಕಾಗಿದೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶ್ರೀ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಪ್ರತಿಪಾದಿಸಿದರು.
ಅವರು ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಪ್ರಥಮ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮೋತ್ತೇಜಕ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಸಿದ್ಧಾಂತ ಶಿಖಾಮಣಿಯಲ್ಲಿ ಎಲ್ಲಿಯೂ ನಿರ್ದಿಷ್ಟವಾಗಿ ವೀರಶೈವರನ್ನಷ್ಟೇ ಕೇಂದ್ರೀಕರಿಸಿ ವಿಷಯ ನಿರೂಪಣೆ ಮಾಡದೇ ಸಕಲರ ಲೇಸನ್ನು ಬಯಸಲಾಗಿದೆ. ಎಲ್ಲ ನೆಲೆಗಳಲ್ಲಿ ಮಾನವನ ಮಹೋನ್ನತಿಯನ್ನು ಸಿದ್ಧಾಂತ ಶಿಖಾಮಣಿ ಬಯಸಿದೆ. ಸರ್ವ ಜನಾಂಗಗಳ ಸಮೃದ್ಧಿಯನ್ನು ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಹಾಗೂ ಪಂಚಪೀಠಗಳು ಬಯಸುತ್ತ ಬಂದಿವೆ ಎಂದರು.
ಧರ್ಮ, ಜಾತಿ, ಭಾಷೆ, ಪ್ರಾಂತ್ಯಗಳ ಹೆಸರಿನಲ್ಲಿ ದುಷ್ಟ ಶಕ್ತಿಗಳು ಬದುಕಿನ ಸ್ನೇಹ ಭಾವನೆಯನ್ನು ಕಲುಷಿತಗೊಳಿಸುತ್ತಿವೆ. ಈ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಆಲೋಚನೆ ಮಾಡಿ ಹೆಜ್ಜೆ ಹಾಕಬೇಕಾಗಿದೆ.
ಭಾರತೀಯ ಸಂಸ್ಕೃತಿ, ಸಂಸ್ಕಾರ, ಧರ್ಮ ಪರಂಪರೆ, ಆಧ್ಯಾತ್ಮದ ಘನತೆಯನ್ನು ಮರೆಯದೇ ದೇಶಾಭಿಮಾನದಿಂದ ಎಲ್ಲವನ್ನೂ ಸ್ಮರಣೆಯಲ್ಲಿಟ್ಟುಕೊಳ್ಳಬೇಕಾದ ಅಗತ್ಯವಿದೆ. ಅಮ್ಮಿನಭಾವಿ ಪಂಚಗೃಹ ಹಿರೇಮಠದ ಹಿರಿಯ ಮತ್ತು ಕಿರಿಯ ಶ್ರೀಗಳವರು ಆದರ್ಶ ಗುರು-ಶಿಷ್ಯರಾಗಿ ಭಕ್ತಗಣದ ವಿಕಾಸಕ್ಕೆ ಹತ್ತು-ಹಲವು ವಿಧಾಯಕ ಚಿಂತನೆಯನ್ನು ಅಳವಡಿಸುತ್ತಿರುವುದು ತಮಗೆ ಖುಷಿ ತಂದಿದೆ ಎಂದು ರಂಭಾಪುರಿ ಜಗದ್ಗುರುಗಳು ಹೇಳಿದರು.
ಸುಳ್ಳದ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮೈಸೂರು ಅರಮನೆ ಜಪದಕಟ್ಟಿಮಠದ ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕಿರಿಯ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಉಪದೇಶಾಮೃತ ನೀಡಿದರು. ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ವಿಜಯನಗರ ಜಿಲ್ಲೆ ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಕಲಬುರ್ಗಿ ಜಿಲ್ಲೆ ಬೆಳಗುಂಪಾ ಬೃಹನ್ಮಠದ ಅಭಿನವ ಪರ್ವತೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಂಗೊಳ್ಳಿಯ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಸತ್ತಿಗೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಇದ್ದರು.
ಗುರುರಕ್ಷೆ
ತಾ.ಪಂ ಮಾಜಿ ಸದಸ್ಯ ಸುರೇಂದ್ರ ದೇಸಾಯಿ, ಮುಂಬಯಿ ನಗರದ ಅಣು ವಿಜ್ಞಾನಿ ಎಸ್.ಆರ್. ಶಿವಯ್ಯನಮಠ, ಎನ್.ಜಿ. ಪಾಟೀಲ, ಬಸಯ್ಯ ಚಿಕ್ಕಮಠ, ಬಸವರಾಜ ಕಲ್ಯಾಣಪುರ, ಬಸವರಾಜ ಹೊಂಗಲಮಠ, ಇಂದುಮತಿ ಸುಣಕದಮಠ, ಲೋಚನಸಿಂಗ್ ಭಾತಖಂಡೆ, ರುದ್ರಮ್ಮ ಬಸಯ್ಯ ಗುಡಿ, ಗೂಳಪ್ಪ ಉಂಡೋಡಿ, ಮಂಜುನಾಥ ಲಿಗಾಡೆ ಅವರಿಗೆ ಗುರುರಕ್ಷೆ ನೀಡಿ ಆಶೀರ್ವದಿಸಲಾಯಿತು. ಡಾ. ಗುರುಮೂರ್ತಿ ಯರಗಂಬಳಿಮಠ ಸ್ವಾಗತಿಸಿದರು. ವಿವಿಧ ಮಠಾಧೀಶರು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಉಭಯ ಶ್ರೀಗಳನ್ನು ಗೌರವಿಸಿದರು. ಶ್ರೇಯಾಂಶ ದೇಸಾಯಿ, ಬಸವರಾಜ ಇಟಗಿ, ಸೋಮಲಿಂಗಶಾಸ್ತಿç ಗುಡ್ಡದಮಠ ಇತರರು ಇದ್ದರು.

Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!