Homecultureಬಣ್ಣದ ಹೊಂಡ ತುಳುಕಿಸಿದ ಯುವಕರು

ಬಣ್ಣದ ಹೊಂಡ ತುಳುಕಿಸಿದ ಯುವಕರು

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಇಲ್ಲಿಯ ಪ್ಯಾಟಿ ಹನುಮಂತ ದೇವರ ಜಾತ್ರೆಯ ಅಂಗವಾಗಿ ಯುವಕರು ಸಂಭ್ರಮದಿಂದ ಬಣ್ಣದ ಹೊಂಡ ತುಳುಕಿಸುವ ಮೂಲಕ ಯುಗಾದಿ ಹಬ್ಬವನ್ನು ಆಚರಿಸಿದರು.

ದೇವಸ್ಥಾನದ ಮುಂದೆ 10 ಅಡಿ ಆಳವಾಗಿ ತೆಗೆದಿದ್ದ ಹೊಂಡದಲ್ಲಿ ನೀರು ತುಂಬಿಸಿ ಅದರಲ್ಲಿ ಬಣ್ಣವನ್ನು ಬೆರೆಸಲಾಗಿತ್ತು. ದಾರ್ಮಿಕ ವಿಧಿ-ವಿಧಾನಗಳೊಂದಿಗೆ ಮುತ್ತೈದೆಯರು ಪೂಜೆ ಸಲ್ಲಿಸಿದ ನಂತರ ದೇವಸ್ಥಾನದ ಪೂಜಾರಿ ಮೊದಲು ಹೊಂಡದಲ್ಲಿ ಜಿಗಿದ ನಂತರ ಗ್ರಾಮದ ಯುವಕರು ಹೊಂಡವನ್ನು ತುಳುಕಿಸುತ್ತಾ ಸಂಭ್ರಮಿಸಿದರು.

ಇದಕ್ಕೂ ಪೂರ್ವ ಬೆಳಿಗ್ಗೆ ಮಾರುತಿ ದೇವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವದರೊಂದಿಗೆ ಅಭಿಷೇಕ, ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ತಳಿರು ತೋರಣಗಳಿಂದ ಸಿಂಗರಿಸಿದ್ದ ದೇವಸ್ಥಾನಕ್ಕೆ ಆಗಮಿಸಿದ ಗ್ರಾಮದ ಭಕ್ತರು ದರ್ಶನ ಪಡೆದು ನೈವೇದ್ಯ ಅರ್ಪಿಸಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img