HomeGadag Newsಕಿಶೋರಿಯರಿಗೆ ಕಲಿಕಾ ಕಿಟ್ ವಿತರಣೆ

ಕಿಶೋರಿಯರಿಗೆ ಕಲಿಕಾ ಕಿಟ್ ವಿತರಣೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಅಕ್ಕನ ಬಳಗ ಸಭಾ ಭವನದಲ್ಲಿ ಮಿಲಾನ್ ಫೌಂಡೇಶನ್ ಹಾಗೂ ಬಾಗಲಕೋಟೆ ಜಿಲ್ಲೆಯ ಗರ್ಲ್ ಐಕಾನ್ ವತಿಯಿಂದ ಹೆಣ್ಣು ಮಕ್ಕಳಿಗೆ ಕೌಶಲ್ಯ ತರಬೇತಿ ಹಾಗೂ ಶಿಕ್ಷಣ ಪೂರಕವಾದ ಕಲಿಕಾ ಕಿಟ್ ವಿತರಿಸಲಾಯಿತು.

ಸಂಯೋಜಕಿ ರೂಪಾ ಮರಿಗೌಡ್ರ ಮಾತನಾಡಿ, ಮಿಲಾನ್ ಪೌಂಡೇಶನ್ 2007ರಲ್ಲಿ ಅಸ್ತಿತ್ವಕ್ಕೆ ಬಂದಿತು. ಈ ಸಂಸ್ಥೆಯು ಕಿಶೋರಿಯರ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚು ಪ್ರೋತ್ಸಾಹಿಸಲಿದೆ. ಮಹಿಳೆಯರ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಅವರ ಕನಸುಗಳನ್ನು ನನಸಾಗಿಸುವಲ್ಲಿ ಈ ಸಂಸ್ಥೆಯು ಸಹಾಯಕವಾಗಿದೆ ಎಂದರು.

ಸಂಯೋಜಕಿ ಪೂಜಾ ಗಡಗಿ ಮಾತನಾಡಿ, ಗ್ರಾಮೀಣ ಅದರಲ್ಲೂ ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅನುಕೂಲ ಆಗಲೆಂದು ಆಯಾ ಕೋರ್ಸ್ಗಳಿಗೆ ಅನುಗುಣವಾಗಿ ಸ್ಕಾಲರ್‌ಶಿಪ್, ಮೊಬೈಲ್, ಬುಕ್ಸ್, ಬ್ಯಾಗ್, ಡ್ರೆಸ್ ಕಿಟ್‌ಗಳನ್ನು ಸಹ ನೀಡಲಾಗುತ್ತಿದೆ. ಗರ್ಲ್ ಐಕಾನ್ ಮಹಿಳೆಯರು ಅಭಿವೃದ್ಧಿ ಹೊಂದಲು ಸುರಕ್ಷಿತ ಮತ್ತು ಸಮಾನ ವೇದಿಕೆ ಕಲ್ಪಿಸಿ ಕೊಡುವಲ್ಲಿ ಪ್ರಯತ್ನ ನಡೆಸಿದೆ ಎಂದರು.

ಗದಗ ಹಾಗೂ ಬಾಗಲಕೋಟೆ ಜಿಲ್ಲೆಯಿಂದ ಬಂದ 90ಕ್ಕೂ ಅಧಿಕ ಹೆಣ್ಣು ಮಕ್ಕಳಿಗೆ ಮೊಬೈಲ್, ಬುಕ್ಸ್, ಬ್ಯಾಗ್, ಪೆನ್ ಇತ್ಯಾದಿಗಳನ್ನು ಉಚಿತವಾಗಿ ನೀಡಲಾಯಿತು. ಸರಿತಾ, ರಕ್ಷಿತಾ, ಸಾವಕ್ಕ, ಕೊಂತೆಮ್ಮ, ಪವಿತ್ರಾ, ಸ್ನೇಹಾ, ಸಿಂಧು, ಸೌಮ್ಯ, ದೀಪಾ, ಶಿವಲೀಲಾ, ಅಮೂಲ್ಯ, ಪವಿತ್ರಾ, ತೇಜಸ್ವಿ, ಸಕ್ಕೂಬಾಯಿ ಸೇರಿದಂತೆ ಅನೇಕ ಸಿಬ್ಬಂದಿಗಳು, ಗರ್ಲ್ ಐಕಾನ್ಸ್ ಹಾಗೂ ಪಾಲಕರು ಉಪಸ್ಥಿತರಿದ್ದರು. ಸರಿತಾ ಸ್ವಾಗತಿಸಿದರು. ಲಕ್ಷ್ಮಿ ಪವಾರ್ ನಿರೂಪಿಸಿದರು. ಹುಲಿಗೆಮ್ಮ ವಂದಿಸಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img