ನೀವು ಹೆಚ್ಚು ಜಂಕ್​ಫುಡ್ಸ್​ ಸೇವಿಸ್ತೀರಾ!? ಹಾಗಿದ್ರೆ ಹುಷಾರ್ ಮಾನಸಿಕ ಆರೋಗ್ಯಕ್ಕೂ ಇದು ಡೇಂಜರ್!

0
Spread the love

ನಿಮ್ಮ ಆರೋಗ್ಯವನ್ನು ಕಾಪಾಡಲು ಆರೋಗ್ಯಕರ ಆಹಾರ ಕ್ರಮ ಅತ್ಯವಶ್ಯಕ. ತೂಕ ಇಳಿಸಿಕೊಳ್ಳುವ ಪ್ರಶ್ನೆಯೇ ಇರಲಿ, ನಿಮ್ಮ ಆರೋಗ್ಯ ಸುಧಾರಿಸಿಕೊಳ್ಳುವ ಪ್ರಶ್ನೆಯೇ ಇರಲಿ ಆಹಾರದ ಪ್ರಾಮುಖ್ಯತೆ ಮಹತ್ವದ್ದು. ನಾವು ತಿನ್ನುವ ಆಹಾರ ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರುತ್ತದೆ. ಆಧುನಿಕ ಕಾಲದಲ್ಲಿ ಹೊಸ ಹೊಸ ಕಾಯಿಲೆಗಳು ಹುಟ್ಟುಕೊಳ್ಳುತ್ತಿದ್ದು ಇವೆಲ್ಲವೂ ನಮ್ಮ ಆಹಾರ ವಿಷಪೂರಿತವಾಗಿರುವುದರಿಂದ , ಜತೆಗೆ ದೇಹಕ್ಕೆ ಒಗ್ಗದ ಆಹಾರ ಸೇವಿಸುವುದರಿಂದಲೇ ಆಗಿದೆ. ಅದರಲ್ಲೊಂದು ಜಂಕ್ ಫುಡ್.

Advertisement

ಇಂದಿನ ಒತ್ತಡದ ಬದುಕಿನಲ್ಲಿ ನೀವು ದೇಹಕ್ಕೆ ಕೆಲಸ ಕೊಡುವುದಕ್ಕಿಂತ ಮೆದುಳಿಗೆ ಹೆಚ್ಚು ಕೆಲಸ ಕೊಡುತ್ತೀರಿ, ಹೀಗಾಗಿ ನೀವು ತೆಗೆದುಕೊಳ್ಳುವ ಆಹಾರಗಳ ಕಡೆಗೆ ಗಮನಹರಿಸುವುದು ಉತ್ತಮ, ನೀವು ಆತುರಾತುರದಲ್ಲಿ ತಿನ್ನುವ ಜಂಕ್​ಫುಡ್ಸ್​ಗಳು ನಿಮ್ಮ ಮಾನಸಿಕ ಆರೋಗ್ಯವನ್ನು ಹದಗೆಡಿಸಬಹುದು.

ನಿಮ್ಮ ಕರುಳಿನ ಆರೋಗ್ಯ ಹಾಗೂ ನಿಮ್ಮ ಮೆದುಳಿನ ಆರೋಗ್ಯ ಎರಡಕ್ಕೂ ಒಂದಕ್ಕೊಂದು ಸಂಬಂಧವಿದೆ, ನೀವು ಅಲ್ಟ್ರಾ ಪ್ರೊಸೆಸ್ಡ್​ ಆಹಾರವನ್ನು ತಿನ್ನುವ ಅಭ್ಯಾಸವಿದ್ದರೆ ಖಂಡಿತವಾಗಿಯೂ ನೀವು ಖಿನ್ನತೆಗೆ ಜಾರುವ ಅಪಾಯ ಹೆಚ್ಚಿರುತ್ತದೆ. ಕರುಳು ಮತ್ತು ಮೆದುಳು ನಿರಂತರವಾಗಿ ನರಗಳು ಮತ್ತು ರಾಸಾಯನಿಕ ಸಂಕೇತಗಳ ಸಂಕೀರ್ಣ ಜಾಲದ ಮೂಲಕ ಸಂವಹನ ನಡೆಸುತ್ತವೆ.

ಮೆದುಳು ಆಹಾರದ ಜೀರ್ಣಕ್ರಿಯೆಗೆ ತಯಾರಾಗಲು ಕರುಳನ್ನು ಸಂಕೇತಿಸುತ್ತದೆ, ಆದರೆ ಒತ್ತಡವು ವಾಕರಿಕೆ ಅಥವಾ ಅತಿಸಾರದಂತಹ ಜಠರಗರುಳಿನ ರೋಗಲಕ್ಷಣಗಳನ್ನು ಉಂಟುಮಾಡುವ ಸಂಕೇತಗಳನ್ನು ಪ್ರಚೋದಿಸುತ್ತದೆ. ಅದರ ಭಾಗವಾಗಿ, ಕರುಳಿನ ಸೂಕ್ಷ್ಮಾಣುಜೀವಿ – ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಬ್ಯಾಕ್ಟೀರಿಯಾ, ವೈರಸ್‌ಗಳು ಮತ್ತು ಶಿಲೀಂಧ್ರಗಳ ಸಂಗ್ರಹ – ಮೆದುಳಿನ ಕ್ರಿಯೆಯ ಮೇಲೆ ಪ್ರಭಾವ ಬೀರುವ ಮತ್ತು ಮನಸ್ಥಿತಿಯ ಮೇಲೆ ಪರಿಣಾಮ ಬೀರುವ ರಾಸಾಯನಿಕಗಳನ್ನು ಉತ್ಪಾದಿಸುತ್ತದೆ.

ನೀವು ಫೈಬರ್​ಯುಕ್ತ ಆಹಾರವನ್ನು ಹೆಚ್ಚು ಸೇವಿಸಿಬೇಕು, ಹಣ್ಣುಗಳು, ತರಕಾರಿಗಳ ಬಳಕೆ ಹೆಚ್ಚಿರಲಿ, ಪ್ರೋಟಿನ್ ಕೂಡ ದೇಹಕ್ಕೆ ಹೆಚ್ಚು ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಆಫ್ ಹೆಲ್ತ್​ ಪ್ರಕಾರ, ಜಂಕ್ ಫುಡ್ ಬೊಜ್ಜು, ಟೈಪ್ 2 ಡಯಾಬಿಟಿಸ್, ಹೃದ್ರೋಗ, ಜೀರ್ಣಕಾರಿ ಸಮಸ್ಯೆಗಳು, ಅಧಿಕ ರಕ್ತದೊತ್ತಡ ಮತ್ತು ಖಿನ್ನತೆ ಸೇರಿದಂತೆ ಅನೇಕ ನಕಾರಾತ್ಮಕ ಆರೋಗ್ಯ ಪರಿಣಾಮಗಳನ್ನು ಉಂಟುಮಾಡಬಹುದು.

ಯುವಕರು ತಮ್ಮ ಜೀವನವನ್ನು ಸುಧಾರಿಸಲು ಕೆಲಸ ಮಾಡುವಾಗ, ಅವರ ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯವನ್ನು ನೋಡಿಕೊಳ್ಳಲು ಯೋಗ ಮತ್ತು ಧ್ಯಾನದ ಸಹಾಯವನ್ನು ಪಡೆಯುವುದು ಉತ್ತಮ. ಈ ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವಾಗ ತೂಕ ಹೆಚ್ಚಾಗುವುದು ಅಥವಾ ಹೃದಯ ಬಡಿತದ ಅಡಚಣೆಯಂತಹ ಅಡ್ಡ ಪರಿಣಾಮಗಳ ಸಾಧ್ಯತೆಗಳಿರುತ್ತವೆ.


Spread the love

LEAVE A REPLY

Please enter your comment!
Please enter your name here