• About
  • Advertise
  • Privacy & Policy
  • Contact
Saturday, November 7, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Art and Literature

ಮಾತಲ್ಲ… ಕಾರ್ಯದಲ್ಲೇ ಗುರುತಾದ ಡಾ. ನಾಗಲಕ್ಷ್ಮಿ ಚೌಧರಿ

Vijaya Sakshi News Desk by Vijaya Sakshi News Desk
August 6, 2026
in Art and Literature
ಮಾತಲ್ಲ… ಕಾರ್ಯದಲ್ಲೇ ಗುರುತಾದ ಡಾ. ನಾಗಲಕ್ಷ್ಮಿ ಚೌಧರಿ
0
SHARES
2
VIEWS
Share on Facebook

ಸಮಾಜದಲ್ಲಿ ಕೆಲವರು ಕೇವಲ ಹುದ್ದೆಯಿಂದ ಗುರುತಿಸಿಕೊಳ್ಳುತ್ತಾರೆ. ಆದರೆ ಕೆಲವರು ತಮ್ಮ ಸೇವೆ, ಸರಳತೆ ಮತ್ತು ಸಮಾಜಮುಖಿ ಕಾರ್ಯಗಳ ಮೂಲಕ ಹುದ್ದೆಗೇ ಗೌರವ ತಂದುಕೊಡುತ್ತಾರೆ. ಅಂತಹ ಅಪರೂಪದ ವ್ಯಕ್ತಿತ್ವಗಳಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಪ್ರಮುಖರು.

ವೈದ್ಯೆಯಾಗಿಯೂ, ಸಮಾಜಸೇವಕಿಯಾಗಿಯೂ, ಮಹಿಳಾ ಹೋರಾಟಗಾರ್ತಿಯಾಗಿಯೂ ಗುರುತಿಸಿಕೊಂಡಿರುವ ಅವರು, ತಮ್ಮ ಮಾತಿಗಿಂತ ಕಾರ್ಯಗಳ ಮೂಲಕವೇ ಜನರ ಮನಸ್ಸು ಗೆದ್ದಿದ್ದಾರೆ. ಯಾವುದೇ ಜವಾಬ್ದಾರಿ ವಹಿಸಿಕೊಂಡರೂ ಅದನ್ನು ಜನಸೇವೆಯ ಅವಕಾಶವೆಂದು ಪರಿಗಣಿಸುವ ಅವರ ಕಾರ್ಯವೈಖರಿ ಎಲ್ಲರಿಗೂ ಮಾದರಿಯಾಗಿದೆ.

ತಂದೆಯ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಡಾ. ನಾಗಲಕ್ಷ್ಮಿ ಚೌಧರಿ ಅವರು ಇಂದು ರಾಜ್ಯದ ಸಾವಿರಾರು ಮಹಿಳೆಯರ ವಿಶ್ವಾಸದ ಧ್ವನಿಯಾಗಿ ಹೊರಹೊಮ್ಮಿದ್ದಾರೆ. ಗ್ರಾಮೀಣ ಭಾಗದಲ್ಲಿಯೂ ನ್ಯಾಯ, ಸಮಾನತೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಬೆಳೆಸಿದ ತಮ್ಮ ತಂದೆಯ ಹಾದಿಯಲ್ಲಿಯೇ ಅವರು ಸಾಗುತ್ತಿರುವುದು ಗಮನಾರ್ಹ.

ವೈದ್ಯಕೀಯ ವೃತ್ತಿಯಲ್ಲಿ ಸೇವೆ ಸಲ್ಲಿಸಿದ ನಂತರ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಅವರು, ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಮಹಿಳೆಯರ ಸುರಕ್ಷತೆ, ಆರೋಗ್ಯ, ಕಾನೂನು ಅರಿವು, ಮಹಿಳಾ ದೌರ್ಜನ್ಯ ತಡೆ ಹಾಗೂ ಸಂತ್ರಸ್ತರಿಗೆ ನ್ಯಾಯ ಒದಗಿಸುವ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ, ಮಹಿಳೆಯರ ಅಹವಾಲುಗಳನ್ನು ಆಲಿಸುವುದು, ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಶೀಲಿಸುವುದು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡುವುದು ಅವರ ಕಾರ್ಯಶೈಲಿಯ ವಿಶೇಷತೆ. ಹೀಗಾಗಿ ಅನೇಕ ಮಹಿಳೆಯರಿಗೆ ಅವರು ಧೈರ್ಯದ ಪ್ರತೀಕವಾಗಿದ್ದಾರೆ.

ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಅವರು, ಜೀವನದಲ್ಲಿ ಗುರಿಯ ಮಹತ್ವ, ಶಿಕ್ಷಣದ ಮೌಲ್ಯ, ಮಹಿಳೆಯರ ಆತ್ಮರಕ್ಷಣೆ, ಆತ್ಮವಿಶ್ವಾಸ ಹಾಗೂ ಕಾನೂನು ಅರಿವಿನ ಬಗ್ಗೆ ನೀಡುವ ಸಂದೇಶಗಳು ಯುವಜನತೆಗೆ ಹೊಸ ಚೈತನ್ಯ ತುಂಬುತ್ತವೆ. ಅವರ ಮಾತುಗಳಲ್ಲಿ ಒಬ್ಬ ಅಧಿಕಾರಿಯ ಕಠಿಣತೆಗಿಂತ, ಒಬ್ಬ ತಾಯಿಯ ಕಾಳಜಿ ಹೆಚ್ಚಾಗಿ ಕಾಣಿಸುತ್ತದೆ.

ಇಂದಿನ ಸಮಾಜದಲ್ಲಿ ಮತ್ತೊಬ್ಬರ ನೋವಿಗೆ ಸ್ಪಂದಿಸುವ ಮನಸ್ಸುಳ್ಳ ವ್ಯಕ್ತಿಗಳು ವಿರಳವಾಗುತ್ತಿರುವ ಸಂದರ್ಭದಲ್ಲಿ, ಅನಾಥರು, ಬಡವರು ಹಾಗೂ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಆಸರೆಯಾಗುತ್ತಿರುವ ಡಾ. ನಾಗಲಕ್ಷ್ಮಿ ಚೌಧರಿ ಅವರಂತಹ ವ್ಯಕ್ತಿತ್ವಗಳು ಸಮಾಜಕ್ಕೆ ಅತ್ಯಗತ್ಯ. ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಇಂತಹ ಸೇವಾ ಮನೋಭಾವದ ನಾಯಕತ್ವ ಹೆಚ್ಚಾದರೆ ಸಮಾಜ ಇನ್ನಷ್ಟು ಸುಂದರವಾಗಲಿದೆ.

ಯುವಜನತೆ ಕೇವಲ ಯಶಸ್ಸಿನ ಹಿಂದೆ ಓಡುವುದಕ್ಕಿಂತ ಸಮಾಜದ ಬಗ್ಗೆ ಕಾಳಜಿ ಹೊಂದಿದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂಬ ಸಂದೇಶವನ್ನು ಅವರ ಬದುಕು ಸಾರುತ್ತದೆ. ಸೇವೆ, ಪ್ರಾಮಾಣಿಕತೆ ಮತ್ತು ಮಾನವೀಯತೆಯ ಮೂಲಕವೂ ಯಶಸ್ಸು ಸಾಧಿಸಬಹುದು ಎಂಬುದನ್ನು ಅವರು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟಿದ್ದಾರೆ.

ಡಾ. ನಾಗಲಕ್ಷ್ಮಿ ಚೌಧರಿ ಅವರು ಇನ್ನಷ್ಟು ಆರೋಗ್ಯದಿಂದ, ಉತ್ಸಾಹದಿಂದ ರಾಜ್ಯದ ಮಹಿಳೆಯರ ಹಾಗೂ ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸಲಿ. ಅವರ ಸೇವಾ ಪಯಣ ಇನ್ನಷ್ಟು ಯಶಸ್ವಿಯಾಗಲಿ. ಅವರ ಆದರ್ಶಗಳು ಯುವಜನತೆಗೆ ಸ್ಫೂರ್ತಿಯಾಗಿ, ಸಮಾಜದಲ್ಲಿ ಇನ್ನಷ್ಟು ಸೇವಾ ಮನೋಭಾವದ ವ್ಯಕ್ತಿತ್ವಗಳು ರೂಪುಗೊಳ್ಳಲಿ ಎಂಬುದು ನನ್ನ ಹಾರೈಕೆ.

  • ಮೇಘನಾ ಎಸ್. ಮುದ್ದಿ
    ವಿದ್ಯಾರ್ಥಿನಿ,
    ಶ್ರೀಮತಿ ಎಂ.ಬಿ. ಹುಯಿಲಗೋಳ ಬಿ.ಎಡ್. ಶಿಕ್ಷಣ ಮಹಾವಿದ್ಯಾಲಯ, ಗದಗ

Tags: BreakingNewsgadagnewsKarnatakaVijayasakshivijayasakshinews
ShareSendShare
Previous Post

ಗಣೇಶೋತ್ಸವಕ್ಕೆ PoP ಗಣೇಶ ಮೂರ್ತಿಗಳಿಗೆ ಬ್ರೇಕ್: ಮಣ್ಣಿನ ಗಣಪತಿಗೆ ಮಾತ್ರ ಅವಕಾಶ ನೀಡುವಂತೆ ಈಶ್ವರ ಖಂಡ್ರೆ ಸೂಚನೆ

Next Post

ಮೋದಿ ವಿದೇಶ ಪ್ರವಾಸದ ಲೆಕ್ಕ ಕೊಟ್ಟ ಕೇಂದ್ರ: 23 ದೇಶಗಳ ಭೇಟಿಗೆ ₹180 ಕೋಟಿ ಖರ್ಚು!

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
11 ಗಂಟೆಗೆ ಮೋದಿ ಮೆಗಾ ಘೋಷಣೆ! 51 ಸಾವಿರ ಯುವಕರಿಗೆ ಇಂದು ಸರ್ಕಾರಿ ಉದ್ಯೋಗದ ಗಿಫ್ಟ್

ಮೋದಿ ವಿದೇಶ ಪ್ರವಾಸದ ಲೆಕ್ಕ ಕೊಟ್ಟ ಕೇಂದ್ರ: 23 ದೇಶಗಳ ಭೇಟಿಗೆ ₹180 ಕೋಟಿ ಖರ್ಚು!

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

November 4, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ವಿಪಕ್ಷಗಳ ಬಳಿ ದಾಖಲೆ ಇಲ್ಲ, ಅಬಕಾರಿ ಸಚಿವರ ರಾಜೀನಾಮೆಗೆ ಅವಶ್ಯಕತೆ ಇಲ್ಲ; ಶಾಸಕ ಹೆಚ್.ಸಿ. ಬಾಲಕೃಷ್ಣ

‘ಬಿಜೆಪಿಯಲ್ಲಿ ಸಿಎಂ ಆಗುವ ಗಂಡಸರು ಇಲ್ವಾ?’; ಹೆಚ್‌ಡಿಕೆ ವಿರುದ್ಧ ಬಾಲಕೃಷ್ಣ ವಾಗ್ದಾಳಿ

November 7, 2026
ರೇಣುಕಾಸ್ವಾಮಿ ಕೇಸ್‌ಗೆ ಬಿಗ್ ಟ್ವಿಸ್ಟ್: ಪ್ರದೋಷ್ ಬಳಿಕ ರವಿಶಂಕರ್, ವಿನಯ್ ಕೂಡ ಮಾಫಿ ಸಾಕ್ಷಿಗೆ ಮನವಿ

ನಟ ದರ್ಶನ್‌ಗೆ ಜೈಲಿನಲ್ಲೇ ಫಿಸಿಯೋಥೆರಪಿ ಚಿಕಿತ್ಸೆ; ನ್ಯಾಯಾಲಯದಿಂದ ಷರತ್ತುಬದ್ಧ ಅನುಮತಿ

November 7, 2026
ಬೆಂಗಳೂರಿನಲ್ಲಿ ಅಮಾನವೀಯ ಕೃತ್ಯ! ಹಣ, ಚಿನ್ನದ ಉಂಗುರಕ್ಕಾಗಿ ವೃದ್ಧೆಯ ಕೊಲೆ

ಬೆಂಗಳೂರಿನಲ್ಲಿ ಅಮಾನವೀಯ ಕೃತ್ಯ! ಹಣ, ಚಿನ್ನದ ಉಂಗುರಕ್ಕಾಗಿ ವೃದ್ಧೆಯ ಕೊಲೆ

November 7, 2026
ಜೇವರ್ಗಿಯಿಂದ ಯಾದಗಿರಿಗೆ ಬರುತ್ತಿದ್ದ ಕಾರು ಅಪಘಾತ; ನಾಲ್ವರು ಯುವಕರ ದಾರುಣ ಅಂತ್ಯ!

ಜೇವರ್ಗಿಯಿಂದ ಯಾದಗಿರಿಗೆ ಬರುತ್ತಿದ್ದ ಕಾರು ಅಪಘಾತ; ನಾಲ್ವರು ಯುವಕರ ದಾರುಣ ಅಂತ್ಯ!

November 7, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ವಿಪಕ್ಷಗಳ ಬಳಿ ದಾಖಲೆ ಇಲ್ಲ, ಅಬಕಾರಿ ಸಚಿವರ ರಾಜೀನಾಮೆಗೆ ಅವಶ್ಯಕತೆ ಇಲ್ಲ; ಶಾಸಕ ಹೆಚ್.ಸಿ. ಬಾಲಕೃಷ್ಣ

‘ಬಿಜೆಪಿಯಲ್ಲಿ ಸಿಎಂ ಆಗುವ ಗಂಡಸರು ಇಲ್ವಾ?’; ಹೆಚ್‌ಡಿಕೆ ವಿರುದ್ಧ ಬಾಲಕೃಷ್ಣ ವಾಗ್ದಾಳಿ

November 7, 2026
ರೇಣುಕಾಸ್ವಾಮಿ ಕೇಸ್‌ಗೆ ಬಿಗ್ ಟ್ವಿಸ್ಟ್: ಪ್ರದೋಷ್ ಬಳಿಕ ರವಿಶಂಕರ್, ವಿನಯ್ ಕೂಡ ಮಾಫಿ ಸಾಕ್ಷಿಗೆ ಮನವಿ

ನಟ ದರ್ಶನ್‌ಗೆ ಜೈಲಿನಲ್ಲೇ ಫಿಸಿಯೋಥೆರಪಿ ಚಿಕಿತ್ಸೆ; ನ್ಯಾಯಾಲಯದಿಂದ ಷರತ್ತುಬದ್ಧ ಅನುಮತಿ

November 7, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper