HomeGadag Newsಪ್ರೌಢಶಾಲಾ ಸಹಕಾರ ಸಂಘದ ಚುನಾವಣೆ

ಪ್ರೌಢಶಾಲಾ ಸಹಕಾರ ಸಂಘದ ಚುನಾವಣೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಸರಕಾರಿ ಪ್ರೌಢಶಾಲಾ ಹಾಲಿ ಮತ್ತು ನಿವೃತ್ತ ನೌಕರರ ಪತ್ತಿನ ಸಹಕಾರ ಸಂಘ ಗದಗ ಸಂಸ್ಥೆಗೆ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಗದಗ ಗ್ರಾಮೀಣ ಘಟಕದ ಅಧ್ಯಕ್ಷ ಬಿ.ಎಫ್. ಪೂಜಾರ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಗಳಾಗಿ ಸಹಕಾರ ಇಲಾಖೆಯ ಬೇವಿನಕಟ್ಟಿಯವರು ಕಾರ್ಯನಿರ್ವಹಿಸಿದರು.

ಈ ಸಂದರ್ಭದಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಗದಗ ಶಹರ ಘಟಕದ ಅಧ್ಯಕ್ಷ ಎಸ್.ಸಿ. ನಾಗರಳ್ಳಿ, ಸಂಘದ ಗೌರವ ಕಾರ್ಯದರ್ಶಿ ಬಿ.ಎಚ್. ಯಲ್ಲಪ್ಪಗೌಡ್ರ, ಉಪಾಧ್ಯಕ್ಷ ಎಮ್.ಆರ್. ಇಂಗಳಳ್ಳಿ, ಆಡಳಿತ ಮಂಡಳಿಯ ನಿರ್ದೇಶಕರಾದ ಎಮ್.ಎಸ್. ಕುಚಬಾಳ, ಎಮ್.ಎಮ್. ಹಳಪೇಟಿ, ಶ್ರೀಕಾಂತ ಬಡ್ಡೂರ, ಎಮ್.ಎಫ್. ಪಾಟೀಲ, ಎ.ಟಿ. ಮೇಗಡಿ, ಕೆ.ಎ. ಉಪ್ಪಿನ, ಎಮ್.ಎಸ್. ಧಾರವಾಡ, ಬಿ.ಪಿ. ಪೊಲೀಸಪಾಟೀಲ, ಎ.ಜಿ. ಅಳವಂಡಿ, ಆರ್.ಜಿ. ನಾಯ್ಕರ ಉಪಸ್ಥಿತರಿದ್ದರು.

ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ರವಿರಾಜ ಪವಾರ, ಎಮ್.ಎ. ಯರಗುಡಿ, ಮುತ್ತು ಗಾರವಾಡ, ಪಿ.ಪಿ. ಟಿಕಾರೆ ಮುಂತಾದವರು ಭಾಗವಹಿಸಿ, ಶುಭ ಕೋರಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img