HomeGadag Newsಬದುಕಲು ಎಲ್ಲರಿಗೂ ಸಮಾನ ಅವಕಾಶವಿದೆ

ಬದುಕಲು ಎಲ್ಲರಿಗೂ ಸಮಾನ ಅವಕಾಶವಿದೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ವಿಶೇಷಚೇತನರಿಗೆ ಅಗತ್ಯವಿರುವ ಶಿಕ್ಷಣ, ಆರೋಗ್ಯ, ಕೌಶಲ್ಯ ತರಬೇತಿ ಮತ್ತು ಉದ್ಯೋಗ ನೀಡುವುದರೊಂದಿಗೆ ಅವರಲ್ಲಿರುವ ನ್ಯೂನತೆ ಪರಿಗಣಿಸದೆ ಅವರಲ್ಲಿರುವ ಸಾಮರ್ಥ್ಯ ಗುರುತಿಸಿ, ಪ್ರೋತ್ಸಾಹಿಸಿ ಅವರಲ್ಲಿ ನಂಬಿಕೆ, ಆತ್ಮ ವಿಶ್ವಾಸ ಮೂಡಿಸುವ ಮೂಲಕ ಸಮಾಜ ಮುಖ್ಯ ವಾಹಿನಿಗೆ ತರುತ್ತಿರುವುದು ಶ್ಲಾಘನೀಯ ಎಂದು ಪೂಜ್ಯ ಮ.ನಿ.ಪ್ರ. ಶ್ರೀ ಶಾಂತಲಿಂಗ ಮಹಾಸ್ವಾಮಿಗಳು ನುಡಿದರು.

ನಗರದ ಕರ್ನಾಟಕ ಭವನದಲ್ಲಿ ನಡೆದ ಗದಗ ಜಿಲ್ಲಾ ಅಲ್ಪಸಂಖ್ಯಾತರ ಹಾಗೂ ಅಲ್ಪಸಂಖ್ಯಾತ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್ ನ 5ನೇ ವರ್ಷದ ವಾರ್ಷಿಕೋತ್ಸವ ನಿಮಿತ್ತ ವಿಶೇಷಚೇತನರ ಅಭಿವೃದ್ಧಿಗಾಗಿ ವಿಶ್ವ ಕಲ್ಯಾಣ ಸಂಸ್ಥೆಗೆ ಧನ ಸಹಾಯ, ವೀಲ್ ಚೇರ್ ವಿತರಣೆ, ವಿಶೇಷಚೇತನರ ಸಮ್ಮೇಳನ ಹಾಗೂ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಹಾಜಿ ಅಬ್ದುಲಖಾದರ ಸನ್ನುಬಾಯಿ, ಫಾದರ್ ಎ.ಎಸ್. ಪ್ರವೀಣಕುಮಾರ ಮಾತನಾಡಿ, ಸಮಾಜದಲ್ಲಿ ಬದುಕಲು ಎಲ್ಲರೂ ಸಮಾನ ಅವಕಾಶವನ್ನು ಹೊಂದಿದ್ದಾರೆ. ಇವರ ಸೇವೆ ಮಾಡುವುದರ ಮೂಲಕ ನಮ್ಮಲ್ಲಿರುವ ಪಾಪ ಕರ್ಮಾದಿಗಳನ್ನು ಕಳೆದುಕೊಳ್ಳಲು ಸಾಧ್ಯವೆಂದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಮಾಹಾಂತೇಶ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಜಿ.ಎಮ್. ದಂಡಿನ, ಅಂಜುಮನ್ ಇಸ್ಲಾಂ ಪಾಲಿಟೆಕ್ನಿಕ್ ಅಧ್ಯಕ್ಷ ಜಾಕೀರ ಹುಸೇನ ಎ.ಮುಜಾವರ, ಬಸವದಳದ ಅಧ್ಯಕ್ಷ ವಿ.ಕೆ. ಕರಿಗೌಡರ, ಲಿಂಗಾಯತ ಮಹಾಸಭಾ ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ, ಗಿರಿಧರಸಿಂಗ್ ಬ್ಯಾಳಿ, ವಿರೋಧ ಪಕ್ಷದ ಉಪನಾಯಕ ಬರಕತಅಲಿ ಮುಲ್ಲಾ, ಮಾಜಿ ಅಧ್ಯಕ್ಷೆ ರುದ್ರಮ್ಮ ಕೆರಕಲಮಟ್ಟಿ, ಅಂಜುಮನ್ ಇಸ್ಲಾಂ ಕಮಿಟಿ ಮಾಜಿ ಅಧ್ಯಕ್ಷ ಅಕ್ಷರಸಾಬ ಬರ್ಬಚಿ, ಲೆಕ್ಕ ಪರಿಶೋಧಕ ಕೆ.ಎಸ್. ಚೆಟ್ಟಿ ಮಾತನಾಡಿದರು.
ಗಿರಿಧರಸಿಂಗ್ ಬ್ಯಾಳಿ, ಬಸಬಣ್ಣೆಪ್ಪ ಚಿಂಚಲಿ ವಿಶ್ವ ಕಲ್ಯಾಣ ಸಂಸ್ಥೆಗೆ 5001 ರೂ ದೇಣಿಗೆ ನೀಡಿದರು, ಚನ್ನಪ್ಪ ಸತ್ಯಪ್ಪನವರ 2001 ರೂ ದೇಣಿಗೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಎಮ್.ಸಿ. ಶೇಖ ಮಾತನಾಡಿ, ನಮ್ಮ ಟ್ರಸ್ಟ್ ವತಿಯಿಂದ ಧನ ಸಹಾಯ, ವೀಲ್ ಚೇರ್, ಹಾಗೂ ಸಾಧನ ಸಲಕರಣೆಗಳನ್ನು ನೀಡುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಈ ಸಂಸ್ಥೆಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸಹಾಯ ಸಹಕಾರ ನೀಡುತ್ತೇವೆಂದು ಹೇಳಿದರು.

ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯವಾದಿ ಎಮ್.ಎಮ್. ಕೂಕನೂರ, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಜಿ.ಎಮ್. ದಂಡಿನರನ್ನು ವಿಶ್ವ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಹದ್ದಣ್ಣವರ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಅಸ್ಲಂ ನೇರೆಗಲ್ಲ, ವಿಫೂಲ್ ಲುಥಿಯಾ, ಜಗದೀಶ ಬಿದರೂರ, ಮಂಜುನಾಥ ಆಸಂಗಿ, ಫಾರೂಖ ಹುಬ್ಬಳ್ಳಿ, ವಿರೇಶ ಭಂಗಿ, ಸುರೇಶ ಲಮಾಣಿ, ಅರುಣ ಕರಡಿ, ನೀಲಪ್ಪ ಕಟಗಿ, ಭಿಮಪ್ಪ ಹದ್ದಣ್ಣವರು, ಪಾರ್ವತಿ ಎಸ್.ಎಚ್ ಮುಂತಾದವರು ಉಪಸ್ಥಿತರಿದ್ದರು. ಎಸ್.ಎ. ಟೋಪಿವಾಲ ಸ್ವಾಗತಿಸಿದರು. ಮಂಜುನಾಥ ಹದ್ದಣ್ಣವರ ನಿರೂಪಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರಣ್ಣ ಬಳಗಾನೂರ ಮಾತನಾಡಿ, ವಾರ್ಷಿಕೋತ್ಸವದ ನಿಮಿತ್ತ ಎಮ್.ಸಿ. ಶೇಖರು ವಿಶೇಷಚೇತನರ ಅಭಿವೃದ್ಧಿಗಾಗಿ ವಿಶ್ವ ಕಲ್ಯಾಣ ಸಂಸ್ಥೆಗೆ ಧನ ಸಹಾಯ, ಸಾಧನ ಸಲಕರಣೆಗಳನ್ನು ನೀಡುತ್ತಿರುವುದು ಶ್ಲಾಘನೀಯ. ಶೀಘ್ರದಲ್ಲಿ ಸಚಿವರ ಗಮನಕ್ಕೆ ತಂದು ಸಂಸ್ಥೆಗೆ ಶಾಲಾ ವಾಹನವನ್ನು ಕೊಡಿಸುವುದಾಗಿ ಹೇಳಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img