HomeGadag Newsಹಿರಿಯ ಸಿಬ್ಬಂದಿಯ ವೃತ್ತಿ ನಿಷ್ಠೆ ಮಾದರಿಯಾಗಲಿ

ಹಿರಿಯ ಸಿಬ್ಬಂದಿಯ ವೃತ್ತಿ ನಿಷ್ಠೆ ಮಾದರಿಯಾಗಲಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಹಿರಿಯ ಸಿಬ್ಬಂದಿಯ ವೃತ್ತಿ ಗೌರವ, ನಿಷ್ಠೆ, ಅನುಭವ ಕಿರಿಯ ಸಿಬ್ಬಂದಿ ವರ್ಗಕ್ಕೆ ಮಾದರಿಯಾಗಿರಲಿ ಎಂದು ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ಗದಗ ಜಿಲ್ಲಾ ಕಾರ್ಯಾಧ್ಯಕ್ಷ ವೆಂಕಟೇಶ್ ಡಿ.ರಾಮಗಿರಿ ನುಡಿದರು.

ಗದಗ-ಬೆಟಗೇರಿ ನಗರಸಭೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕೆ.ಟಿ. ಯಾದವಾಡ ಅವರ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡುತ್ತಾ, ಮಾತೃ ಸ್ವರೂಪರಾದ ಕೆ.ಟಿ. ಯಾದವಾಡ ತಮ್ಮ ಸೇವೆಯುದ್ದಕ್ಕೂ ಸಾಕಷ್ಟು ಒತ್ತಡ, ಸವಾಲುಗಳನ್ನು ತಾಳ್ಮೆಯಿಂದ ನಿಭಾಯಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ಬಣ್ಣಿಸಿದರು.

ಪರಿಸರ ಅಭಿಯಂತರ ಆನಂದ ಬದಿ ಹಾಗೂ ಅನಂತ ಪುಣೇಕರ ನಿವೃತ್ತರ ಸೇವೆಯನ್ನು ಕೊಂಡಾಡಿದರು. ಪೌರಾಯುಕ್ತರ ಪರವಾಗಿ ಕಾರ್ಯಾಲಯದ ವ್ಯವಸ್ಥಾಪಕ ಪರುಶುರಾಮ ಶೇರಖಾನೆ ನಿವೃತ್ತರನ್ನು ಸತ್ಕರಿಸಿ, ಗೌರವಿಸಿ, ಸರ್ವ ಸಿಬ್ಬಂದಿಯ ಅಭಿಮಾನ ನಿವೃತ್ತ ಸಿಬ್ಬಂದಿಯ ಸೇವಾ ನಿಷ್ಠೆಯನ್ನು ಗುರುತಿಸುತ್ತದೆ ಎಂದರಲ್ಲದೆ, ಅವರ ನಿವೃತ್ತ ಜೀವನ ಸುಖಕರವಾಗಿರಲೆಂದು ಶುಭ ಹಾರೈಸಿದರು. ಸಿದ್ದು ಹುಣಸಿಮರದ ಸರ್ವರನ್ನು ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img