• About
  • Advertise
  • Privacy & Policy
  • Contact
Monday, November 2, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home hubballi

ಹಬ್ಬಗಳ ಆಚರಣೆಯಿಂದ ಮನೋವಿಕಾಸ : ದಿವ್ಯಪ್ರಭು ಜಿ.ಆರ್.ಜೆ.

News Desk by News Desk
October 9, 2024
in hubballi
Festival of `Lingaraja Nagar Dussehra-2024'
0
SHARES
0
VIEWS
Share on Facebook

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ನಮ್ಮ ಭಾರತೀಯ ಹಬ್ಬಗಳ ಆಚರಣೆಗಳಲ್ಲಿ ವ್ಯಕ್ತಿಯ ಮನೋವಿಕಾಸದ ಉದ್ದೇಶ ಅಡಗಿದೆ. ಅವುಗಳ ಸಮರ್ಪಕ ಆಚರಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಹೇಳಿದರು.

ಇಲ್ಲಿನ ಲಿಂಗರಾಜ ನಗರ ದಸರಾ-2024ರ ಉತ್ಸವದಲ್ಲಿ ಮಂಗಳವಾರ ಸಂಜೆ ದಾಂಡಿಯಾಗೆ ಚಾಲನೆ ನೀಡುವ ಮುನ್ನ ಮಾತನಾಡಿದ ಜಿಲ್ಲಾಧಿಕಾರಿಗಳು, ಶಿವರಾತ್ರಿ ಒಂದು ದಿನದ ಹಬ್ಬ. ಶಿವನಿಂದ ಶುರುವಾಗಿ ನವರಾತ್ರಿಯ ಒಂಬತ್ತು ದಿನಗಳ ಶಕ್ತಿ ತುಂಬುವ ಹಬ್ಬದ ಆಚರಣೆ ನಮ್ಮದಾಗಿದೆ. ಮಹಿಳೆಯರು ಝೀರೋ ಅಲ್ಲ. ಅವರು ಕೌಟುಂಬಿಕ ವ್ಯವಸ್ಥೆಯ ಜೀವಾಳವಾಗಿದ್ದಾರೆ. ವಿಜಯದಶಮಿಯ ಉದ್ದೇಶ ವಿವಿಧ ಅವತಾರಗಳಿಗೆ ಪೂಜೆ ಸಲ್ಲಿಸುವ ಮೂಲಕ ಕುಟುಂಬದಲ್ಲಿ ಸಮೃದ್ಧಿ-ಶಾಂತಿ ನೆಲೆಸುವಂತೆ ಮಾಡುವುದಾಗಿದೆ ಎಂದರು.

ದಾಂಡಿಯಾದಂತಹ ಶಾರೀರಿಕ ಚಟುವಟಿಕೆಗಳ ಉದ್ದೇಶ ಕೇವಲ ಮೋಜು ಮಾಡುವುದಲ್ಲ. ಆಟ ಆಡುತ್ತ ದೇವಿಗೆ ಭಕ್ತಿ ಸಮರ್ಪಿಸುವ, ಆ ಮೂಲಕ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸಿಕೊಳ್ಳುವ ಘನ ಉದ್ದೇಶ ಇಂತಹ ಆಚರಣೆಗಳ ಹಿಂದೆ ಅಡಗಿದೆ. ನಾವೆಲ್ಲ ದೇವಿಯ ಮುಂದೆ ಮಕ್ಕಳಾಗಿದ್ದು, ಆ ತಾಯಿಯ ಮೂಲಕ ಸೃಷ್ಟಿ-ಸ್ಥಿತಿ-ಲಯಗಳ ಸಂಕೇತವಾದ ಬ್ರಹ್ಮ-ವಿಷ್ಣು-ಮಹೇಶ್ವರರನ್ನು ಅರ್ಥೈಸಿಕೊಳ್ಳಬೇಕಿದೆ. ಒಳ್ಳೆಯ ರೀತಿಯಲ್ಲಿ ಬದುಕಲು ವಿವೇಕ ಬೇಕು, ಆ ವಿವೇಕದ ಸಂಕೇತವಾಗಿರುವ ಸರಸ್ವತಿಯ ಪೂಜೆಯೂ ದಸರಾದ ಕೊನೆಯ ಮೂರು ದಿನಗಳಲ್ಲಿ ನಡೆಯುತ್ತದೆ ಎಂದು ವಿಶ್ಲೇಷಿಸಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಜಗತ್ತಿನಲ್ಲಿ ಭಾರತದ ಸಂಸ್ಕೃತಿ ವಿಶೇಷವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತ ಮಾತೆ ಜಗನ್ಮಾತೆ ಆಗುತ್ತಿದ್ದಾಳೆ ಎಂದರು.

ಇದೇ ಸಂದರ್ಭದಲ್ಲಿ ಅತ್ಯುತ್ತಮ ಜಿಲ್ಲಾಧಿಕಾರಿ ಪ್ರಶಸ್ತಿ ಪಡೆದ ದಿವ್ಯಪ್ರಭು ಜಿ.ಆರ್.ಜೆ. ಅವರನ್ನು ಲಿಂಗರಾಜ ನಗರದ ಮಹಿಳೆಯರು ಉಡಿ ತುಂಬಿ, ಸನ್ಮಾನಿಸಿದರು. ಕಾರ್ಯಕ್ರಮವನ್ನು ಸಂಗಮೇಶ ಮೆಣಸಿನಕಾಯಿ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಕಾರ್ಪೊರೇಟರ್‌ಗಳಾದ ಉಮೇಶಗೌಡ ಕೌಜಗೇರಿ, ರಾಜಣ್ಣ ಕೊರವಿ, ದಸರಾ ಸಮಿತಿಯ ಪದಾಧಿಕಾರಿಳಾದ ಜಿ.ವಿ. ವಳಸಂಗ, ರಾಜಣ್ಣ ಬತ್ಲಿ, ಸಾಹೇಬಗೌಡ ಪೊಲೀಸಪಾಟೀಲ್, ಎಸ್.ಎಂ. ತೊಗರ್ಸಿ, ಗಿರಿಜಾ ಸಂಗೊಳ್ಳಿ, ನಿರ್ಮಲಾ ಝಳಕಿ ಸೇರಿದಂತೆ ಬಡಾವಣೆಯ ಸಾವಿರಾರು ನಾಗರಿಕರು ಉಪಸ್ಥಿತರಿದ್ದರು.

ಐ.ಎ.ಎಸ್. ತಯಾರಿಗೆ ಓದಿರುವ ಪುಸ್ತಕಗಳಿಗಿಂತ ಐ.ಎ.ಎಸ್. ನಂತರ ಹೆಚ್ಚಿನ ಪುಸ್ತಕಗಳನ್ನು ಓದುತ್ತಿರುವುದಾಗಿ ಹೇಳಿದ ಜಿಲ್ಲಾಧಿಕಾರಿ ದಿವ್ಯ ಪ್ರಭು, ಮಕ್ಕಳ ಮೇಲೆ ತಮ್ಮ ಯಾವುದೇ ರೀತಿಯ ಕನಸುಗಳನ್ನು, ಒತ್ತಡಗಳನ್ನು ಹೇರಬಾರದು ಎಂದು ಪಾಲಕರಿಗೆ ಮನವಿ ಮಾಡಿದರು. ಜ್ಞಾನಕ್ಕೆ ಮಿತಿ ಇಲ್ಲ, ಕೊನೆ ಇಲ್ಲ. ಮಕ್ಕಳಿ ಪಠ್ಯ-ಪುಸ್ತಕಗಳ ಜೊತೆಗೆ ಇತರ ಪುಸ್ತಕಗಳನ್ನೂ ಓದುವಂತೆ ಪ್ರೊತ್ಸಾಹಿಸಬೇಕು ಎಂದು ಪಾಲಕರಿಗೆ ಕಿವಿಮಾತು ಹೇಳಿದರು.

Tags: Dharwad District Collector Divya Prabhu G.R.J.Festival of `Lingaraja Nagar Dussehra-2024'GadaggadaganewsHubballiLatestNewsupdatenews
ShareSendShare
Previous Post

ನಟಿ ರಚಿತಾರಾಮ್ ಅಸಿಸ್ಟೆಂಟ್ ಬಳಸುತ್ತಿದ್ದ ಕಾರು ಜಪ್ತಿ ಮಾಡಿದ ಪೊಲೀಸರು: ಕಾರಣ ತಿಳಿಯಿರಿ!

Next Post

ಬೈಕ್ ವ್ಹೀಲಿಂಗ್ ತಡೆದ ಕಾನ್ಸ್‌ಟೇಬಲ್‌ಗೆ ಹಲ್ಲೆ ನಡೆಸಿದ ರೌಡಿಶೀಟರ್! ವಿಡಿಯೋ ಇದೆ…

News Desk

News Desk

Next Post

ಬೈಕ್ ವ್ಹೀಲಿಂಗ್ ತಡೆದ ಕಾನ್ಸ್‌ಟೇಬಲ್‌ಗೆ ಹಲ್ಲೆ ನಡೆಸಿದ ರೌಡಿಶೀಟರ್! ವಿಡಿಯೋ ಇದೆ...

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
Kangana Ranaut: ಮತ್ತೆ ಹಾರರ್ ಸಿನಿಮಾದಲ್ಲಿ ಕಂಗನಾ ರಣೌತ್! ರಾಣಾ ದಗ್ಗುಬಾಟಿ ನಿರ್ಮಾಣದ ‘ಸ್ಕೇರಿ ಪಿಕ್ಚರ್’ ಘೋಷಣೆ

Kangana Ranaut: ಮತ್ತೆ ಹಾರರ್ ಸಿನಿಮಾದಲ್ಲಿ ಕಂಗನಾ ರಣೌತ್! ರಾಣಾ ದಗ್ಗುಬಾಟಿ ನಿರ್ಮಾಣದ ‘ಸ್ಕೇರಿ ಪಿಕ್ಚರ್’ ಘೋಷಣೆ

November 2, 2026
ಬೆಳಗ್ಗೆ ಕೇವಲ 30 ನಿಮಿಷ ಮೀಸಲಿಡಿ; ಆರೋಗ್ಯ ಕಾಪಾಡಲು ಈ 5 ಅಭ್ಯಾಸಗಳನ್ನು ರೂಢಿಸಿಕೊಳ್ಳಿ!

ಬೆಳಗ್ಗೆ ಕೇವಲ 30 ನಿಮಿಷ ಮೀಸಲಿಡಿ; ಆರೋಗ್ಯ ಕಾಪಾಡಲು ಈ 5 ಅಭ್ಯಾಸಗಳನ್ನು ರೂಢಿಸಿಕೊಳ್ಳಿ!

November 2, 2026
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಎಂಬಿ ಪಾಟೀಲ್

ಕೃಷ್ಣಾ ನದಿಯ 40 ಟಿಎಂಸಿ ನೀರು ಮಹಾರಾಷ್ಟ್ರಕ್ಕೆ ಬೇಕಂತೆ! ಕರ್ನಾಟಕದ ಹಿತಾಸಕ್ತಿಗೆ ಧಕ್ಕೆ ಎಂದ ಎಂ.ಬಿ. ಪಾಟೀಲ್!

November 2, 2026
ಇನ್ಮುಂದೆ ಟೀ, ಕಾಫಿಗೂ ಹೆಚ್ಚು ಹಣ ಕೊಡಬೇಕು; ಹೊಸ ದರ ಇಂದಿನಿಂದಲೇ ಜಾರಿ!

ಇನ್ಮುಂದೆ ಟೀ, ಕಾಫಿಗೂ ಹೆಚ್ಚು ಹಣ ಕೊಡಬೇಕು; ಹೊಸ ದರ ಇಂದಿನಿಂದಲೇ ಜಾರಿ!

November 2, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

Kangana Ranaut: ಮತ್ತೆ ಹಾರರ್ ಸಿನಿಮಾದಲ್ಲಿ ಕಂಗನಾ ರಣೌತ್! ರಾಣಾ ದಗ್ಗುಬಾಟಿ ನಿರ್ಮಾಣದ ‘ಸ್ಕೇರಿ ಪಿಕ್ಚರ್’ ಘೋಷಣೆ

Kangana Ranaut: ಮತ್ತೆ ಹಾರರ್ ಸಿನಿಮಾದಲ್ಲಿ ಕಂಗನಾ ರಣೌತ್! ರಾಣಾ ದಗ್ಗುಬಾಟಿ ನಿರ್ಮಾಣದ ‘ಸ್ಕೇರಿ ಪಿಕ್ಚರ್’ ಘೋಷಣೆ

November 2, 2026
ಬೆಳಗ್ಗೆ ಕೇವಲ 30 ನಿಮಿಷ ಮೀಸಲಿಡಿ; ಆರೋಗ್ಯ ಕಾಪಾಡಲು ಈ 5 ಅಭ್ಯಾಸಗಳನ್ನು ರೂಢಿಸಿಕೊಳ್ಳಿ!

ಬೆಳಗ್ಗೆ ಕೇವಲ 30 ನಿಮಿಷ ಮೀಸಲಿಡಿ; ಆರೋಗ್ಯ ಕಾಪಾಡಲು ಈ 5 ಅಭ್ಯಾಸಗಳನ್ನು ರೂಢಿಸಿಕೊಳ್ಳಿ!

November 2, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper