ನಕಲಿ ಮೇಲ್ ಬಳಸಿ ಮೋಸ: 2.11 ಕೋಟಿ ರೂ. ವಂಚಿಸಿದ ಆರೋಪಿ ಅರೆಸ್ಟ್!

0
Spread the love

ಬಳ್ಳಾರಿ:- ನಕಲಿ ಮೇಲ್ ಬಳಸಿ 2.11 ಕೋಟಿ ರೂ. ವಂಚಿಸಿದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Advertisement

ಆರೋಪಿಯನ್ನು ಮಧ್ಯ ಪ್ರದೇಶದವರೆಗೂ ಹೋಗಿ ಹಿಡಿದುಕೊಂಡು ಬಂದಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಅಜಯ್ ಕುಮಾರ್ ಜೈಸ್ವಾಲ್ ಎಂದು ಗುರುತಿಸಲಾಗಿದೆ. ಕಲ್ಲಿದ್ದಲು ಸಪ್ಲೆ ಮಾಡುವ ಕಂಪನಿಗೆ 2.11 ಕೋಟಿ ರೂ. ವಂಚಿಸಿದ್ದಾನೆ.

ಹಿಂದುಸ್ತಾನ್ ಕ್ಯಾಲ್ಸೀನ್ಡ್ ಮೆಟಲ್ ಪ್ರೈವೇಟ್ ಲಿಮಿಟೆಟ್ ಕಂಪನಿಯೂ ಅಗರ್ವಾಲ್ ಕೋಲ್ ಕಾರ್ಪೋರೇಷನ್ ಕಂಪನಿಯಿಂದ ಕಲ್ಲಿದ್ದಲು ಖರೀದಿಸಿತ್ತು. ಹೀಗಾಗಿ ಹಿಂದುಸ್ತಾನ್ ಕಂಪನಿ ಅಗರ್ವಾಲ್ ಕಂಪನಿಗೆ 2.11 ಕೋಟಿ ಹಣ ಕೊಡಬೇಕಿತ್ತು. ಇದರ ಬಗ್ಗೆ ಮಾಹಿತಿ ಪಡೆದಿದ್ದ ಖದೀಮ ಅಜಯ್, ಅಗರ್ವಾಲ್ ಕಂಪನಿಯ ನಕಲಿ ಇಮೇಲ್ ತಯಾರಿಸಿ ಕಂಪನಿಯ ಬ್ಯಾಂಕ್ ಖಾತೆ ನಂಬರ್ ಚೇಂಜ್ ಆಗಿದೆ ಎಂದು ಹಿಂದುಸ್ತಾನ್‌ಗೆ ಕಳಿಸಿ ವಂಚನೆ ಮಾಡಿದ್ದ.

ಹಿಂದುಸ್ತಾನ್ ಕಂಪನಿಯವರು ಅಜಯ್ ಕುಮಾರ್ ಜೈಸ್ವಾಲ್ ಕಳಿಸಿದ್ದ ಅಕೌಂಟ್ ನಂಬರ್‌ಗೆ ಹಣ ಹಾಕಿದ್ದರು. ತನ್ನ ಖಾತೆಗೆ ಬಂದ ಹಣವನ್ನ ಇತರೆ 18 ಖಾತೆಗಳಿಗೆ ಹಾಕಿ ಡ್ರಾ ಮಾಡಿದ್ದ. ಸೆಪ್ಟೆಂಬರ್ 3 ರಂದು ಹಣ ವಂಚನೆ ಗೊತ್ತಾಗಿ, ಬಳ್ಳಾರಿ ಸೈಬರ್ ಠಾಣೆಗೆ ಹಿಂದುಸ್ತಾನ್ ಕಂಪನಿಯಿಂದ ದೂರು ದಾಖಲಾಗಿದೆ.

ಕೂಡಲೇ ಬಳ್ಳಾರಿ ಎಸ್ಪಿ ಶೊಭಾ ರಾಣಿ ಅವರಿಂದ ಪ್ರಕರಣ ಭೇದಿಸಲು ಡಿಎಸ್‌ಪಿ ಸಂತೋಷ್ ನೇತೃತ್ವದ ತಂಡ ರಚನೆ ಮಾಡಿ ಕೆವೈಸಿ ಹಾಗೂ ಹಣ ವರ್ಗಾವಣೆಯಾದ ಖಾತೆ ಜಾಡು ಹಿಡಿದು ಹೊರಟಿತ್ತು. ಆರೋಪಿ ಮಧ್ಯಪ್ರದೇಶದ ಸಿದ್ದಿ ಜಿಲ್ಲೆಯಲ್ಲಿ ಅಡಗಿದ್ದು ಪೊಲೀಸರು ಬಂಧಿಸಿದ್ದಾರೆ. ಈತನ ಹಿಂದೆ ದೆಹಲಿ ಮೂಲದ ಕುಖ್ಯಾತ ವ್ಯಕ್ತಿಯ ಕೈವಾಡ ಶಂಕೆಯಾಗಿದೆ.

ಪೊಲೀಸರ ತನಿಖೆ ಚುರುಕು ಆರೋಪಿಯಿಂದ 1.21 ಕೋಟಿ ರೂ. ನಗದು, ಅಲ್ಲದೇ ಆರೋಪಿ ಬೇರೆ ಬೇರೆ ಖಾತೆಗೆ ಹಾಕಿದ್ದ 27.97 ಲಕ್ಷ ರೂ. ಹಣ ಫ್ರೀಜ್ ಮಾಡಿಸಿದರು. ಒಟ್ಟಾರೆ ಸದ್ಯಕ್ಕೆ ಪೊಲೀಸರು 1.49 ಕೋಟಿ ರೂ. ವಶಕ್ಕೆ ಪಡೆದಿದ್ದು, ಇನ್ನುಳಿದ 62 ಲಕ್ಷ ರೂ. ಬಗ್ಗೆ ತನಿಖೆ ನಡೆಸುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here