ವಿಜಯಸಾಕ್ಷಿ ಸುದ್ದಿ, ಗದಗ
2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬರಗಾಲದಿಂದ ಉಂಟಾದ ಬೆಳೆ ಹಾನಿಗೆ ಪರಿಹಾರವಾಗಿ ಗದಗ ಜಿಲ್ಲೆಯ 56,787 ರೈತರ ಖಾತೆಗಳಿಗೆ ಮೊದಲ ಹಂತದಲ್ಲಿ ತಲಾ ₹2,500ರಂತೆ ಒಟ್ಟು ₹14.19 ಕೋಟಿ ಜಮೆ ಮಾಡಲಾಗಿದೆ.
ಜಿಲ್ಲೆಯ ಒಟ್ಟು 56,787 ರೈತರಿಗೆ ₹14,19,67,500 ಪರಿಹಾರ ಮೊತ್ತವನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ತಾಲೂಕುವಾರು ವಿವರದಂತೆ ಗದಗದಲ್ಲಿ 13,859, ಗಜೇಂದ್ರಗಡದಲ್ಲಿ 6,514, ಲಕ್ಷ್ಮೇಶ್ವರದಲ್ಲಿ 5,206, ಮುಂಡರಗಿಯಲ್ಲಿ 5,851, ನರಗುಂದದಲ್ಲಿ 7,232, ರೋಣದಲ್ಲಿ 12,222 ಹಾಗೂ ಶಿರಹಟ್ಟಿಯಲ್ಲಿ 5,903 ರೈತರ ಖಾತೆಗಳಿಗೆ ಪರಿಹಾರ ಜಮೆಯಾಗಿದೆ.
ಇನ್ನುಳಿದ ಅರ್ಹ ರೈತರ ಖಾತೆಗಳಿಗೆ ಬೆಳೆ ಪರಿಹಾರ ಜಮೆ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










