• About
  • Advertise
  • Privacy & Policy
  • Contact
Friday, November 27, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Gadag News

800 ಕುಟುಂಬಗಳ ಬಹುದಿನಗಳ ಕನಸು ನನಸು| ನಮೂನೆ-3 ವಿತರಿಸಿದ ಶಾಸಕ ಎಚ್.ಕೆ. ಪಾಟೀಲ

Vijaya Sakshi News Desk by Vijaya Sakshi News Desk
November 27, 2026
in Gadag News
0
SHARES
0
VIEWS
Share on Facebook

ಬಡವರ ಬದುಕಿಗೆ ಹಕ್ಕಿನ ಭದ್ರತೆ, ಸ್ವಾಭಿಮಾನದ ಬೆಳಕು

ವಿಜಯಸಾಕ್ಷಿ ಸುದ್ದಿ, ಗದಗ

ವರ್ಷಗಳಿಂದ ವಾಸವಿದ್ದ ಜಾಗಕ್ಕೆ ಅಧಿಕೃತ ಹಕ್ಕು ದೊರೆತಾಗ ಬಡ ಕುಟುಂಬಗಳ ಬದುಕಿನಲ್ಲಿ ಸ್ವಾಭಿಮಾನ ಮತ್ತು ನೆಮ್ಮದಿಯ ಹೊಸ ಅಧ್ಯಾಯ ಆರಂಭವಾಗುತ್ತದೆ. ಮನೆ ಹಾಗೂ ಜಾಗದ ಹಕ್ಕು ಕೇವಲ ದಾಖಲೆಯಲ್ಲ, ಅದು ಕುಟುಂಬಗಳ ಭವಿಷ್ಯಕ್ಕೆ ಭದ್ರತೆ ಒದಗಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.

ನಗರದ ಕಾಟನ್ ಸೇಲ್ಸ್ ಸೊಸೈಟಿ ಆವರಣದಲ್ಲಿರುವ ಶಾಸಕರ ಕಚೇರಿಯಲ್ಲಿ ಗುರುವಾರ ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ವಿವಿಧ ಆಶ್ರಯ ಯೋಜನೆಗಳಡಿ ಆಯ್ಕೆಯಾದ ಫಲಾನುಭವಿಗಳಿಗೆ ನಮೂನೆ-3 ಹಾಗೂ ಪರಿಚಯ ಪತ್ರ ವಿತರಿಸಿ ಅವರು ಮಾತನಾಡಿದರು. ಜವಳಗಲ್ಲಿ ಮತ್ತು ಸುಗುಗಾಡುಸಿದ್ಧರ ಕಾಲೋನಿ ಸೇರಿದಂತೆ ಸುಮಾರು 800 ಫಲಾನುಭವಿಗಳಿಗೆ ಅಧಿಕೃತ ದಾಖಲೆಗಳನ್ನು ವಿತರಿಸಲಾಯಿತು.

ಜವಳಗಲ್ಲಿಯಲ್ಲಿ ಹಲವು ಕುಟುಂಬಗಳು ವರ್ಷಗಳಿಂದ ವಾಸವಿದ್ದರೂ ಜಾಗದ ಮಾಲೀಕತ್ವದ ದಾಖಲೆಗಳಿರಲಿಲ್ಲ. ಇದರಿಂದ ಮೂಲಸೌಕರ್ಯ ಕಲ್ಪಿಸುವುದಕ್ಕೂ ತೊಡಕಾಗಿತ್ತು. ಬಡ ಕುಟುಂಬಗಳಿಗೆ ಹಕ್ಕು ದೊರಕಿಸಿಕೊಡುವ ಉದ್ದೇಶದಿಂದ ಹೈಕೋರ್ಟ್‌ವರೆಗೂ ಹೋರಾಟ ನಡೆಸಬೇಕಾಯಿತು. ಇದೀಗ ಜವಳಗಲ್ಲಿಯ 352 ಕುಟುಂಬಗಳಿಗೆ ಅಧಿಕೃತ ದಾಖಲೆ ದೊರಕಿಸುವ ಪ್ರಯತ್ನ ಯಶಸ್ವಿಯಾಗಿದೆ. ಇದರಿಂದ ಅವರು ತಮ್ಮ ಜಾಗದಲ್ಲಿ ಯಾವುದೇ ಆತಂಕವಿಲ್ಲದೆ ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗಿದೆ ಎಂದರು.

ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಮಾತನಾಡಿ, ನಮೂನೆ-3 ಮೂಲಕ ದೊರೆತ ಆಸ್ತಿಯನ್ನು ಮಾರಾಟ ಮಾಡದೆ ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕು. ಮಕ್ಕಳ ಭವಿಷ್ಯಕ್ಕೆ ಭದ್ರ ನೆಲೆಯಾಗಿಸಿಕೊಳ್ಳಬೇಕು. ಸುಗುಗಾಡುಸಿದ್ಧರ ಕಾಲೋನಿಯ 152 ಕುಟುಂಬಗಳಿಗೆ ದಾಖಲೆ ದೊರೆಯುತ್ತಿರುವುದು ಸಂತಸದ ಸಂಗತಿ. ಬಡವರ ಸೇವೆ ಮಾಡುವುದೇ ದೇವರ ಸೇವೆ ಮಾಡಿದಂತೆ. ಅರ್ಹರಿಗೆ ಸರ್ಕಾರಿ ಸೌಲಭ್ಯ ತಲುಪಿಸುವುದೇ ನಿಜವಾದ ಜನಸೇವೆ ಎಂದರು.

ಕಾರ್ಯಕ್ರಮದಲ್ಲಿ ಮುಖಂಡರಾದ ವಾಸಣ್ಣ ಕುರುಡಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಚಿ, ಪ್ರಭು ಬುರುಬುರೆ, ನಗರಸಭೆ ಸದಸ್ಯರಾದ ನಮಾಜಿ, ವಿಭೂತಿ, ಪೌರಾಯುಕ್ತ ರಾಜರಾಮ್ ಪವಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಕಾರ್ಯಕ್ರಮ ನಿರ್ವಹಿಸಿದರು.

ಮನೆ ಮತ್ತು ಜಾಗದ ಅಧಿಕೃತ ಹಕ್ಕು ಬಡ ಕುಟುಂಬಗಳ ಭವಿಷ್ಯಕ್ಕೆ ಭದ್ರತೆ ನೀಡುವುದರ ಜತೆಗೆ ಸ್ವಾಭಿಮಾನದಿಂದ ಬದುಕುವ ಆತ್ಮವಿಶ್ವಾಸವನ್ನೂ ತುಂಬುತ್ತದೆ.

— ಎಚ್.ಕೆ. ಪಾಟೀಲ, ಶಾಸಕ

Tags: BeneficiariesForm 3 DistributionGadagGadag Betageri City Municipalitygadag newshk patilHousing Schemejavalagallikarnataka politicsProperty RightsSugugadusiddhar ColonyVijayasakshi
ShareSendShare
Previous Post

ಇನ್ಮುಂದೆ ಪ್ಯಾಕೆಟ್ ಆಹಾರ ಖರೀದಿಸುವ ಮುನ್ನ ಎಚ್ಚರ! ಸಕ್ಕರೆ, ಉಪ್ಪು, ಕೊಬ್ಬಿನ ಪ್ರಮಾಣ ತಿಳಿಸುವ ಹೊಸ ಲೇಬಲ್‌ಗೆ ಸುಪ್ರೀಂ ಸೂಚನೆ

Next Post

ಗದಗ|56,787 ರೈತರ ಖಾತೆಗೆ ₹14.19 ಕೋಟಿ ಬೆಳೆ ಪರಿಹಾರ

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
ಗದಗ|56,787 ರೈತರ ಖಾತೆಗೆ ₹14.19 ಕೋಟಿ ಬೆಳೆ ಪರಿಹಾರ

ಗದಗ|56,787 ರೈತರ ಖಾತೆಗೆ ₹14.19 ಕೋಟಿ ಬೆಳೆ ಪರಿಹಾರ

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಗದಗದಲ್ಲಿ ಆಹಾರದ ಹೆಸರಿನಲ್ಲಿ ಜನರ ಆರೋಗ್ಯದ ಜೊತೆ ಚೆಲ್ಲಾಟ! ಖಾರದಪುಡಿ ಘಟಕ ಸೀಜ್, ಹೋಟೆಲ್‌ನಲ್ಲಿ ಕೊಳೆತ ಮೀನು ಮಾಂಸ ಪತ್ತೆ

ಗದಗದಲ್ಲಿ ಆಹಾರದ ಹೆಸರಿನಲ್ಲಿ ಜನರ ಆರೋಗ್ಯದ ಜೊತೆ ಚೆಲ್ಲಾಟ! ಖಾರದಪುಡಿ ಘಟಕ ಸೀಜ್, ಹೋಟೆಲ್‌ನಲ್ಲಿ ಕೊಳೆತ ಮೀನು ಮಾಂಸ ಪತ್ತೆ

November 19, 2026
ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

November 4, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಗದಗ|56,787 ರೈತರ ಖಾತೆಗೆ ₹14.19 ಕೋಟಿ ಬೆಳೆ ಪರಿಹಾರ

ಗದಗ|56,787 ರೈತರ ಖಾತೆಗೆ ₹14.19 ಕೋಟಿ ಬೆಳೆ ಪರಿಹಾರ

November 27, 2026

800 ಕುಟುಂಬಗಳ ಬಹುದಿನಗಳ ಕನಸು ನನಸು| ನಮೂನೆ-3 ವಿತರಿಸಿದ ಶಾಸಕ ಎಚ್.ಕೆ. ಪಾಟೀಲ

November 27, 2026
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರತಿಭಟನೆ ಕೇಸ್‌ಗಳಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್: ವಿದ್ಯಾರ್ಥಿಗಳ ಮೇಲಿದ್ದ ಎಲ್ಲಾ ಎಫ್‌ಐಆರ್ ರದ್ದು

ಇನ್ಮುಂದೆ ಪ್ಯಾಕೆಟ್ ಆಹಾರ ಖರೀದಿಸುವ ಮುನ್ನ ಎಚ್ಚರ! ಸಕ್ಕರೆ, ಉಪ್ಪು, ಕೊಬ್ಬಿನ ಪ್ರಮಾಣ ತಿಳಿಸುವ ಹೊಸ ಲೇಬಲ್‌ಗೆ ಸುಪ್ರೀಂ ಸೂಚನೆ

November 26, 2026
ಧಾರವಾಡ ಹೋರಾಟದ ಫಲಿತಾಂಶ! 32 ಇಲಾಖೆಯಲ್ಲಿ 24 ಸಾವಿರಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳ ಭರ್ತಿ ಘೋಷಣೆ

ರಾಜ್ಯದಲ್ಲಿ ಮತ್ತೆ ಐಎಎಸ್ ಅಧಿಕಾರಿಗಳ ವರ್ಗಾವಣೆ; ಮಹೇಶ್ವರ ರಾವ್‌ಗೆ ಹೊಸ ಜವಾಬ್ದಾರಿ!

November 26, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಗದಗ|56,787 ರೈತರ ಖಾತೆಗೆ ₹14.19 ಕೋಟಿ ಬೆಳೆ ಪರಿಹಾರ

ಗದಗ|56,787 ರೈತರ ಖಾತೆಗೆ ₹14.19 ಕೋಟಿ ಬೆಳೆ ಪರಿಹಾರ

November 27, 2026

800 ಕುಟುಂಬಗಳ ಬಹುದಿನಗಳ ಕನಸು ನನಸು| ನಮೂನೆ-3 ವಿತರಿಸಿದ ಶಾಸಕ ಎಚ್.ಕೆ. ಪಾಟೀಲ

November 27, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper