ಕೊಪ್ಪಳ: ಒಂದು ವಾರದಲ್ಲಿ ಗೇಟ್ ದುರಸ್ತಿ ಮಾಡಲಾಗುತ್ತದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಡ್ಯಾಂ ಬಗ್ಗೆ ಈಗಾಗಲೇ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಡ್ಯಾಂ ಮೇಲೆ ನಿಂತು ಸಂಪೂರ್ಣವಾಗಿ ವೀಕ್ಷಣೆ ಮಾಡಿದ್ದೇನೆ. ರಾತ್ರಿ ವೇಳೆ 10 ಗೇಟ್ ಕಾರ್ಯ ನಿರ್ವಹಣೆ ಮಾಡುತ್ತಿದ್ದವು. ಗೇಟ್ ನಂಬರ್ 19ರ ಚೈನ್ ಕಟ್ ಆಗಿ ಗೇಟ್ ಕಳಚಿ ಬಿದ್ದಿದೆ. ಹೀಗಾಗಿ ವಿಜಯನಗರ ಬಳ್ಳಾರಿಯ ಎಲ್ಲಾ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ ಎಂದು ತಿಳಿಸಿರು.
ಮೊದಲು ರೈತರನ್ನು ಬದುಕಿಸಬೇಕು, ರೈತರನ್ನು ಉದ್ಧಾರ ಮಾಡೋದಕ್ಕೆ ಅನೇಕ ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ತುಂಗಭದ್ರಾ ಜಲಾಶಯವು 105 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ನೀರು ಹೆಚ್ಚಿಗೆ ಇದ್ದಿದ್ದರಿಂದ ನೀರನ್ನು ನದಿಗೆ ಬಿಡಲಾಗಿದೆ. ಒಂದೇ ಗೇಟ್‌ನಲ್ಲಿ ಹೆಚ್ಚು ನೀರು ಹೋದಾಗ ಸಮಸ್ಯೆ ಆಗುತ್ತೆ, ಹೀಗಾಗಿ 98 ಸಾವಿರ ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. ಒಂದೇ ಗೇಟ್‌ನಲ್ಲಿ 35 ಸಾವಿರ ಕ್ಯೂಸೆಕ್ ಹೋಗುತ್ತಿದೆ ಎಂದರು.