HomeGadag Newsಪ್ರವಚನ ಬದುಕಿನಲ್ಲಿ ಬದಲಾವಣೆ ತರಲಿ : ಎಚ್.ಕೆ. ಪಾಟೀಲ

ಪ್ರವಚನ ಬದುಕಿನಲ್ಲಿ ಬದಲಾವಣೆ ತರಲಿ : ಎಚ್.ಕೆ. ಪಾಟೀಲ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ರಾಮಾಯಣ, ಮಹಾಭಾರತದಲ್ಲಿನ ಮೌಲ್ಯಗಳ ಪುನರುತ್ಥಾನಕ್ಕೆ ಅಧ್ಯಾತ್ಮಿಕ ಲೋಕದಲ್ಲಿ ದಿಟ್ಟತನ ಬರಬೇಕಾಗಿದೆ ಎಂದು ಕಾನೂನು, ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಸೋಮವಾರ ಇಲ್ಲಿನ ಶ್ರೀ ಸದಾಶಿವಾನಂದ ಗಾರ್ಡನ್‌ನಲ್ಲಿ ಕುಮಾರವ್ಯಾಸ ಪ್ರವಚನ ಸಂಚಾಲನಾ ಸಮಿತಿ ಹಮ್ಮಿಕೊಂಡಿದ್ದ ಶ್ರೀಮದ್ ಭಗವದ್ಗೀತಾ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಗತ್ತಿನಲ್ಲಿ ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಯನ್ನು ಅತಿಹೆಚ್ಚು ಜನ ನೋಡಿರುವ ದಾಖಲೆಯಿದೆ. ಜಾತಿ, ಧರ್ಮ, ಮತ-ಪಂಥ ಮರೆತು ಎಲ್ಲರೂ ಅವುಗಳನ್ನು ನೋಡಿದ್ದಾರೆ. ಆದರೆ ಅದರ ಪರಿಣಾಮವನ್ನು ಅಳತೆ ಮಾಡಿದಾಗ ನಿರಾಸೆ ಮೂಡಿಸುತ್ತದೆ. ಸದೃಢ ಪ್ರಜಾಪ್ರಭುತ್ವ ಹೊಂದಿರುವ ಭಾರತದಲ್ಲಿ ರಾಮಾಯಣ, ಮಹಾಭಾರತದ ಮಾತುಗಳನ್ನು ಗಾಳಿಗೆ ತೂರಿರುವುದು ವಿಷಾದದ ಸಂಗತಿ ಎಂದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಡಾ. ಪಾವಗಡ ಪ್ರಕಾಶರಾವ್, ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ಅಭಿನವ ಶಿವಾನಂದ ಸ್ವಾಮೀಜಿ, ಪುನೀತ್ ಮಹಾರಾಜರು ವಹಿಸಿದ್ದರು. ರೋಣ ಶಾಸಕ ಜಿ.ಎಸ್. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಶಾಸಕ ವೀರಣ್ಣ ಚರಂತಿಮಠ, ಡಿ.ಆರ್. ಪಾಟೀಲ, ನಿವೃತ್ತ ನ್ಯಾಯಾಧೀಶ ಎಸ್.ಕೆ. ಪಲ್ಲೇದ, ಗುರುರಾಜ ಬಳಗಾನೂರ, ಜೆ.ಕೆ. ಜಮಾದಾರ ಉಪಸ್ಥಿತರಿದ್ದರು. ಡಾ. ಎಸ್.ಬಿ. ಶೆಟ್ಟರ್ ಅಧ್ಯಕ್ಷತೆ ವಹಿಸಿದ್ದರು. ಡಾ. ಕಲ್ಲೇಶ ಮೂರಶಿಳ್ಳಿನ ಕಾರ್ಯಕ್ರಮ ನಿರ್ವಹಿಸಿದರು.

ಭಾರತದಲ್ಲಿ ನಡೆಯುವಷ್ಟು ಧಾರ್ಮಿಕ ಕಾರ್ಯಕ್ರಮಗಳು ಬೇರೆ ಯಾವುದೇ ದೇಶದಲ್ಲಿ ನಡೆಯುವುದಿಲ್ಲ. ಆದರೂ ಭಾರತೀಯರ ಬದುಕಿನಲ್ಲಿ ಪರಿಣಾಮ ಬೀರಿಲ್ಲ. ಆದರೆ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿರುವ ಗದಗ ನೆಲದಲ್ಲಿ ಪಾವಗಡ ಪ್ರಕಾಶರಾವ್ ಅವರ ಪ್ರವಚನ ಜನರ ಬದುಕಿನಲ್ಲಿ ಬದಲಾವಣೆ ತರಲಿ. ಮೌಲ್ಯಗಳ ಪುನರುತ್ಥಾನಗೊಂಡು ಜನರ ಜ್ಞಾನ ಕ್ಷಿತಿಜವನ್ನು ವಿಸ್ತರಿಸಲಿ ಎಂದು ಸಚಿವ ಎಚ್.ಕೆ. ಪಾಟೀಲ ಆಶಿಸಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img