HomeGadag Newsಸ್ವಯಂ ಉದ್ಯೋಗಕ್ಕೂ ಆದ್ಯತೆ ನೀಡಿ: ಶಾರದಾ ಮಹಾಂತಶೆಟ್ಟರ

ಸ್ವಯಂ ಉದ್ಯೋಗಕ್ಕೂ ಆದ್ಯತೆ ನೀಡಿ: ಶಾರದಾ ಮಹಾಂತಶೆಟ್ಟರ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಇಂದಿನ ದಿನಗಳಲ್ಲಿ ಎಲ್ಲರಿಗೂ ಉದ್ಯೋಗ, ಅದರಲ್ಲೂ ಸರಕಾರಿ ಉದ್ಯೋಗಗಗಳು ದೊರೆಯುವದು ವಿರಳ. ಅದಕ್ಕಾಗಿ ಸ್ವಯಂ ಉದ್ಯೋಗಗಳಿಗೂ ಯುವಕ, ಯುವತಿಯರು ಆದ್ಯತೆ ನೀಡಿ. ಅದರಲ್ಲಿಯೇ ಕೌಶಲ್ಯವನ್ನು ಹೊಂದಿ ಯಶಸ್ವಿಯಾಗಬೇಕು ಎಂದು ಶಾರದಾ ಮಹಾಂತಶೆಟ್ಟರ ಹೇಳಿದರು.

ಅವರು ಪಟ್ಟಣದ ವಿಶ್ವ ಗ್ರಾಮೀಣ ಅಭಿವೃದ್ಧಿ ಮತ್ತು ತರಬೇತಿ ಸಂಸ್ಥೆಯ ವತಿಯಿಂದ  ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ವಿವಿಧ ತರಬೇತಿಗಳ ಮುಕ್ತಾಯ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಬಸವರಾಜ ಸಂಗಪ್ಪಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿ, ಸರಕಾರದ ಅನೇಕ ಉಚಿತ ತರಬೇತಿ ಕಾರ್ಯಕ್ರಮಗಳನ್ನು ನಮ್ಮ ಸಂಸ್ಥೆಯ ವತಿಯಿಂದ ಯಶಸ್ವಿಯಾಗಿ ನಡೆಸಲಾಗುತ್ತಿದ್ದು, ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ತರಬೇತಿ ಹೆಚ್ಚು ಅನೂಕೂಲವಾಗಲಿದೆ ಎಂದರು.

ಅತಿಥಿಗಳಾಗಿ ಜಯಶ್ರೀ ಮಳ್ಳಿಗೇರಿ, ಲತಾ ತಟ್ಟಿ, ಲಕ್ಷಮ್ಮ ಆದಿ ಮುಂತಾದವರು ಪಾಲ್ಗೊಂಡಿದ್ದರು. ಮೇಕಪ್ ಕ್ಲಾಸ್ ಶಿಕ್ಷಕಿ ಶಮೀನಾಬಾನು ಲಕ್ಮೇಶ್ವರ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲರಾದ ಗೌರಿ ಸಂಗಪ್ಪಶೆಟ್ಟರ ಸ್ವಾಗತಿಸಿದರು. ಅಂಕಿತಾ ಅರಳಿ ನಿರೂಪಿಸಿದರು. ಚಿತ್ರಾ ಯಾಳಗಿ ವಂದಿಸಿದರು.

 

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img