HomeBengaluru Newsಮುಷ್ಕರದ ಬೆನ್ನಲ್ಲೇ ಸಿಹಿಸುದ್ದಿ: BMTC ನೌಕರರಿಗೆ 11 ತಿಂಗಳ ಹಿಂಬಾಕಿ ವೇತನ ರಿಲೀಸ್‌!

ಮುಷ್ಕರದ ಬೆನ್ನಲ್ಲೇ ಸಿಹಿಸುದ್ದಿ: BMTC ನೌಕರರಿಗೆ 11 ತಿಂಗಳ ಹಿಂಬಾಕಿ ವೇತನ ರಿಲೀಸ್‌!

For Dai;y Updates Join Our whatsapp Group

Spread the love

ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ನೌಕರರ ವೇತನ ಹೆಚ್ಚಳ ಹಾಗೂ ಹಿಂಬಾಕಿ ಪಾವತಿ ವಿಚಾರವಾಗಿ ಸರ್ಕಾರ ಮತ್ತು ನೌಕರರ ನಡುವಿನ ಚರ್ಚೆ ಮುಂದುವರಿದಿರುವ ನಡುವೆಯೇ ಬಿಎಂಟಿಸಿ ನೌಕರರಿಗೆ ಸಿಹಿಸುದ್ದಿ ಲಭಿಸಿದೆ.

ಬಿಎಂಟಿಸಿ ನೌಕರರ ಖಾತೆಗೆ 11 ತಿಂಗಳ ಹಿಂಬಾಕಿ ವೇತನವನ್ನು ಸರ್ಕಾರ ಜಮೆ ಮಾಡಿದೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ. ಇದರಿಂದ ನೌಕರರಿಗೆ ಭಾಗಶಃ ಆರ್ಥಿಕ ಪರಿಹಾರ ಸಿಕ್ಕಂತಾಗಿದೆ.

ರಾಜ್ಯ ಸರ್ಕಾರ ಇತ್ತೀಚೆಗೆ 4 ಸಾರಿಗೆ ನಿಗಮಗಳ ನೌಕರರಿಗೆ 26 ತಿಂಗಳ ಹಿಂಬಾಕಿ ಪಾವತಿಗೆ ಒಪ್ಪಿಗೆ ನೀಡಿದ್ದು, ಮೊದಲ ಹಂತದಲ್ಲಿ ಸುಮಾರು 450 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿತ್ತು. ಅದರ ಮುಂದುವರಿದ ಭಾಗವಾಗಿ ಇಂದು ಬಿಎಂಟಿಸಿ ನೌಕರರಿಗೆ ಹಿಂಬಾಕಿ ಹಣ ಜಮೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇದೇ ವೇಳೆ ಉಳಿದ ಮೂರು ಸಾರಿಗೆ ನಿಗಮಗಳ ನೌಕರರಿಗೂ ಹಂತ ಹಂತವಾಗಿ ಹಿಂಬಾಕಿ ಪಾವತಿ ಪ್ರಕ್ರಿಯೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ 15 ತಿಂಗಳ ಹಿಂಬಾಕಿ ಪಾವತಿ ಬಾಕಿಯಿದೆ ಎಂದು ಮೂಲಗಳು ಹೇಳಿವೆ.

ಈ ನಡುವೆ ಮೇ 20 ರಿಂದ ಅನಿರ್ಧಿಷ್ಟಾವಧಿ ಮುಷ್ಕರದ ಎಚ್ಚರಿಕೆ ನೀಡಿರುವ ಸಾರಿಗೆ ನೌಕರರ ಹೋರಾಟ ಮತ್ತಷ್ಟು ತೀವ್ರಗೊಂಡಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!