ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಮಧ್ಯಭಾಗದಲ್ಲಿರುವ ಐತಿಹಾಸಿಕ ರೋಟರಿ ಸರ್ಕಲ್ಗೆ ರೋಟರಿ ಕ್ಲಬ್ ಗದಗ-ಬೆಟಗೇರಿಯ ಸದಸ್ಯರು ನವೀಕರಣ ಕಾರ್ಯ ಕೈಗೊಂಡು ಹೊಸ ರೂಪ ನೀಡಿದ್ದಾರೆ.
ನವೀಕರಣ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ರೋಟರಿ ಕ್ಲಬ್ನ ಮಾಜಿ ಅಧ್ಯಕ್ಷರಾದ ರೊ. ಡಾ. ರಾಜಶೇಖರ ಎಸ್. ಬಳ್ಳಾರಿ, 1970ರ ದಶಕದಲ್ಲಿ ರೋಟರಿ ಸಂಸ್ಥೆ ಗದಗ-ಬೆಟಗೇರಿಯು ಕೈಗೊಂಡಿದ್ದ ಸಾಮಾಜಿಕ ಸೇವಾ ಕಾರ್ಯಗಳನ್ನು ಗುರುತಿಸಿ ನಗರದ ಮಧ್ಯಭಾಗದಲ್ಲಿರುವ ಈ ವೃತ್ತಕ್ಕೆ ‘ರೋಟರಿ ಸಂಸ್ಥೆ ಗದಗ-ಬೆಟಗೇರಿ ಸರ್ಕಲ್’ ಎಂದು ನಾಮಕರಣ ಮಾಡಲಾಗಿತ್ತು ಎಂದು ತಿಳಿಸಿದರು.
ಕಾಲಾನಂತರ ಈ ವೃತ್ತವು ‘ರೋಟರಿ ಸರ್ಕಲ್’ ಎಂದೇ ಜನಪ್ರಿಯತೆ ಪಡೆದುಕೊಂಡಿತು. ಈ ಸರ್ಕಲ್ ನಿರ್ಮಾಣಕ್ಕೆ ಸಂಸ್ಥೆಯ ಮಾಜಿ ಅಧ್ಯಕ್ಷರಾದ ದಿವಂಗತ ವಿ.ಆರ್. ಮಾಳೆಕೊಪ್ಪಮಠ ಅವರು ಪ್ರಮುಖ ಕೊಡುಗೆ ನೀಡಿದ್ದರು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಸರ್ಕಲ್ನ ಮಹತ್ವವನ್ನು ಉಳಿಸಿಕೊಂಡು ಅದರ ನವೀಕರಣ ಕಾರ್ಯ ಕೈಗೊಂಡಿರುವುದು ಸಂತಸದ ಸಂಗತಿಯಾಗಿದೆ. ಈ ಕಾರ್ಯದಲ್ಲಿ ಶ್ರಮಿಸಿದ ಎಲ್ಲ ರೋಟರಿ ಸದಸ್ಯರಿಗೆ ಅವರು ಶುಭಾಶಯ ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಗದಗ-ಬೆಟಗೇರಿಯ ಅಧ್ಯಕ್ಷರಾದ ರೊ. ಡಾ. ಪ್ರದೀಪ ಉಗಲಾಟ, ಕಾರ್ಯದರ್ಶಿ ರೊ. ಅಕ್ಷಯ ಶೆಟ್ಟಿ, ಸದಸ್ಯರಾದ ರೊ. ಬಾಲಕೃಷ್ಣ ಕಾಮತ್, ರೊ. ಚನ್ನವೀರಪ್ಪ ಹುಣಶಿಕಟ್ಟಿ, ರೊ. ಚಂದ್ರಮೌಳಿ ಜಾಲಿ, ರೊ. ಎಚ್.ಎಸ್. ಪಾಟೀಲ, ರೊ. ಶ್ರೀಧರ ಧರ್ಮಾಯತ, ರೊ. ವಿಶ್ವನಾಥ ಯಳಮಲಿ, ರೊ. ಸುರೇಶ ಕುಂಬಾರ, ರೊ. ಶ್ರೀಧರ ಸುಲ್ತಾನಪುರ, ರೊ. ಡಾ. ಧನೇಶ ದೇಸಾಯಿ, ರೊ. ಡಾ. ಪ್ರಕಾಶ ಡಿ. ಕೊಲೋಳಗಿ, ರೊ. ಡಾ. ಉಮೇಶ ಪುರದ, ರೊ. ಎನ್.ಡಿ. ಜೈನ್, ರೊ. ಎಸ್.ಎಸ್. ಹೊಸಳ್ಳಿಮಠ, ರೊ. ಮಹಾಂತೇಶ ಬಾತಾಖಾನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



