ಸಾಧಕ ವಿದ್ಯಾರ್ಥಿನಿಗೆ ಸನ್ಮಾನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜನತಾ ಪಾರ್ಟಿಯ ಅಲ್ಪಸಂಖ್ಯಾತರ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಸೀರ್ ನರೆಗಲ್ ಅವರ ಪುತ್ರಿ, ದ್ವಿತೀಯ ಪಿ.ಯು ವಾಣಿಜ್ಯ ವಿಭಾಗದ ಸನಾ ನಾಸೀರ್ ನರೆಗಲ್ ಪ್ರಸಕ್ತ ಸಾಲಿನ ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ ಶೇ. 98.33 ಅಂಕಗಳನ್ನು ಪಡೆದು ರಾಜ್ಯಕ್ಕೆ 10ನೇ ರ‍್ಯಾಂಕ್ ಹಾಗೂ ಗದಗ ಜಿಲ್ಲೆಗೆ 2ನೇ ರ‍್ಯಾಂಕ್ ಗಳಿಸಿದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಸನ್ಮಾನಿಸಲಾಯಿತು.

Advertisement

ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ, ಗದಗ ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ, ಹಿರಿಯರಾದ ಎಂ.ಎಸ್. ಕರಿಗೌಡ್ರ, ಜಗನ್ನಾಥಸಾ ಭಾಂಡಗೆ, ಪ್ರಮುಖರಾದ ಸುಧೀರ ಕಾಟಿಗರ, ಅನಿಲ ಅಬ್ಬಿಗೇರಿ, ಮಂಜುನಾಥ ಶಾಂತಗೇರಿ, ರಾಚಯ್ಯ ಹೊಸಮಠ, ನಾಗರಾಜ ತಳವಾರ, ರವಿ ಮಾನ್ವಿ, ಸಂಜೀವಕುಮಾರ ಖಟವಟೆ, ರವಿ ಚವ್ಹಾಣ, ರಾಜು ಕಾಟಿಗರ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here