HomeKarnataka Newsನಾನು ಪೀಠದಲ್ಲೇ ಇದ್ದೇನೆ, ಮುಂದೆಯೂ ಅಲ್ಲಿಯೇ ಇರುತ್ತೇನೆ: ವಚನಾನಂದ ಸ್ವಾಮೀಜಿ ಸ್ಪಷ್ಟನೆ

ನಾನು ಪೀಠದಲ್ಲೇ ಇದ್ದೇನೆ, ಮುಂದೆಯೂ ಅಲ್ಲಿಯೇ ಇರುತ್ತೇನೆ: ವಚನಾನಂದ ಸ್ವಾಮೀಜಿ ಸ್ಪಷ್ಟನೆ

For Dai;y Updates Join Our whatsapp Group

Spread the love

ದಾವಣಗೆರೆ: ಸಮುದಾಯದ ಆರೋಗ್ಯ ಕಾಪಾಡುವುದು ನಮ್ಮ ಮೊದಲ ಆದ್ಯತೆ ಎಂದು ಹರಿಹರ ಪಂಚಮಸಾಲಿ ಗುರುಪೀಠದಿಂದ ಹೊರಗಣಿಸಲ್ಪಟ್ಟ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಪೀಠದಲ್ಲೇ ಇದ್ದೇನೆ, ಮುಂದೆಯೂ ಅಲ್ಲಿಯೇ ಇರುತ್ತೇನೆ. ನಿಂದನೆ ಅಥವಾ ದ್ವೇಷಕ್ಕೆ ನಾನು ಮಹತ್ವ ಕೊಡುವುದಿಲ್ಲ. ನಮ್ಮನ್ನು ಟೀಕಿಸುವವರೇ ನಮ್ಮನ್ನು ಬೆಳೆಸುವವರು ಎಂದು ಹೇಳಿದರು.

ಇನ್ನೂ ಅನೇಕ ಕಾರ್ಯಗಳು ನಮ್ಮ ಮುಂದಿದ್ದು, ಅವುಗಳನ್ನು ನೆರವೇರಿಸುವತ್ತ ಸಂಪೂರ್ಣ ಗಮನ ಹರಿಸುತ್ತೇನೆ. ಸಣ್ಣ ಮಟ್ಟದಲ್ಲಿ ಅಲ್ಲ, ದೊಡ್ಡ ಮಟ್ಟದಲ್ಲಿ ಸಮಾಜ ಸೇವೆ ಮಾಡುವ ಉದ್ದೇಶ ನಮ್ಮದು ಎಂದು ಅವರು ತಿಳಿಸಿದರು.

ತಮ್ಮ ಆತ್ಮೀಯ ಜೀವನದ ಬಗ್ಗೆ ಮಾತನಾಡಿದ ಸ್ವಾಮೀಜಿ, ದೇಶದ ವಿವಿಧ ಮಠಗಳು, ಆಶ್ರಮಗಳಲ್ಲಿ ಅಧ್ಯಯನ ನಡೆಸಿದ್ದೇನೆ. ಹೆಚ್ಚಿನ ಜ್ಞಾನಕ್ಕಾಗಿ ಋಷಿಕೇಶ, ಹರಿದ್ವಾರ ಹಾಗೂ ಹಿಮಾಲಯ ಪ್ರದೇಶಗಳಲ್ಲಿ ಗುರುಗಳ ಮಾರ್ಗದರ್ಶನದಲ್ಲಿ ಸಾಧನೆ ಮಾಡಿದ್ದೇನೆ ಎಂದರು.

ಯೋಗದ ಮೂಲಕ ಜನರ ಆರೋಗ್ಯವನ್ನು ಸುಧಾರಿಸುವ ಉದ್ದೇಶದಿಂದ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಔಷಧಿಯಿಲ್ಲದ ಆರೋಗ್ಯದ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವ ಕಾರ್ಯದಲ್ಲಿ ತೊಡಗಿದ್ದೇನೆ ಎಂದು ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!