ಯಾರೇ ಆಗಲಿ ನನ್ನ ತಂಟೆಗೆ ಬಂದ್ರೆ ಸುಮ್ಮನೆ ಬಿಡಲ್ಲ: ಜಗದೀಶ್ ಶೆಟ್ಟರ್

0
Spread the love

ಹುಬ್ಬಳ್ಳಿ : ಯಾರೇ ಆಗಲಿ ನನ್ನ ತಂಟೆಗೆ ಬಂದ್ರೆ ಸುಮ್ಮನೆ ಬಿಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿರೋಧಿಗಳಿಗೆ ವಾರ್ನ್ ಮಾಡಿದರು‌.

Advertisement

ನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ತಮ್ಮ 68 ನೇ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಗುಡುಗಿದ ಅವರು, ಕಳೆದ ವರ್ಷವೂ ನಾನು ಇದೇ ಮಾತು ಹೇಳಿದ್ದೆ ನನ್ನ ತಂಟೆಗೆ ಬಂದವರಿಗೆ ತಕ್ಕ ಉತ್ತರವನ್ನೂ ನೀಡಿದ್ದೇವೆ.

ನಾನು ವಿಧಾನಸಭೆ ಚುನಾವಣೆಯಲ್ಲಿ ಸೋತಿರಬಹುದು, ಆದ್ರೆ ಆರು ಬಾರಿ ನನ್ನನ್ನು ಜನ ಗೆಲ್ಲಿಸಿದನ್ನ ಮರೆಯಲ್ಲ. ನಾನು ಸೋತರೂ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸೀಟು ಗೆಲ್ಲಿಸಿದ್ದೇವೆ. ಆದರೆ ನನ್ನ ಉಸಾಬರಿಗೆ ಬಂದವರಿಗೆ ತಕ್ಕ ಉತ್ತರ ಕೊಟ್ಟಿದ್ದೇನೆ. ಮುಂದೆಯೂ ನನ್ನ ಉಸಾಬರಿಗೆ ಬಂದವರಿಗೆ ಸುಮ್ಮನೆ ಬಿಡಲ್ಲ ಎಂದು ಹೇಳುವ ಮೂಲಕ ಸವಾಯಿ ಗಂಧರ್ವ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಶೆಟ್ಟರ್ ಎಚ್ಚರಿಕೆ ನೀಡಿದರು.


Spread the love

LEAVE A REPLY

Please enter your comment!
Please enter your name here