HomeKarnataka Newsರಾಜಕೀಯದಲ್ಲಿ ಹೊಂದಾಣಿಕೆಯ ನಾಟಕ ನನ್ನದಲ್ಲ: ಛಲವಾದಿ ನಾರಾಯಣಸ್ವಾಮಿ

ರಾಜಕೀಯದಲ್ಲಿ ಹೊಂದಾಣಿಕೆಯ ನಾಟಕ ನನ್ನದಲ್ಲ: ಛಲವಾದಿ ನಾರಾಯಣಸ್ವಾಮಿ

For Dai;y Updates Join Our whatsapp Group

Spread the love

ಬೆಂಗಳೂರು: ರಾಜಕೀಯದಲ್ಲಿ ಎಷ್ಟೇ ಪ್ರೀತಿ- ವಿಶ್ವಾಸಗಳಿದ್ದರೂ ಹೊಂದಾಣಿಕೆಯ ನಾಟಕ ನನ್ನ ಬಳಿ ಇಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ. ವಿಧಾನಸೌಧದ ವಿರೋಧ ಪಕ್ಷದ ನಾಯಕರ ಕಚೇರಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರ ನೀಡಿದರು. ವಾಚ್ ವಿಚಾರದಲ್ಲಿ ನನ್ನ ಹೇಳಿಕೆಯಿಂದ ಡಿ.ಕೆ.ಶಿವಕುಮಾರರಿಗೆ ಬೇಸರ ಆದರೆ ನಾನೇನೂ ಮಾಡಲಾಗದು ಎಂದು ಸ್ಪಷ್ಟಪಡಿಸಿದರು.

ಈಗಲೂ ಅವರ ಹೂಬ್ಲೋಟ್ ವಾಚ್ ಕಾಣುತ್ತಿಲ್ಲ ಎಂದು ತಿಳಿಸಿದರು. ಅದು ಅಫಿಡವಿಟ್‍ನಲ್ಲಿಲ್ಲ. ಈಗ ನೀವು ಕಾರ್ಟಿಯರ್ ವಾಚ್ ವಿಚಾರವನ್ನು ಲೋಕಾಯುಕ್ತಕ್ಕೆ ಕೊಟ್ಟಿದ್ದೀರಿ. ಹಿಂದೆ ಅಫಿಡವಿಟ್‍ನಲ್ಲಿ ಕೊಟ್ಟಿಲ್ಲ; ಅದು ಕೂಡ ಅಪರಾಧವೇ ಎಂದು ಗಮನ ಸೆಳೆದರು.

ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದ ಅವರು, ಇದನ್ನು ಬಹಳ ಬೆಳೆಸಬೇಕೆಂಬುದು ನನ್ನ ಉದ್ದೇಶವಲ್ಲ; ಸಂದರ್ಭಕ್ಕೆ ತಕ್ಕಂತೆ ವಿಷಯವನ್ನು ಜನರ ಗಮನಕ್ಕೆ ತರುವ ಕೆಲಸ ಮಾಡಿದ್ದೇನೆ. ಶಿವಕುಮಾರರನ್ನು ಇವತ್ತಿನಿಂದ ನಾನು ನೋಡುತ್ತಿಲ್ಲ. ಕಾಲೇಜಿನಿಂದ ನೋಡುತ್ತ ಬಂದಿದ್ದೇನೆ. ಅವರ ಕಾಲೇಜಿನ ಸ್ನೇಹಿತರಲ್ಲಿ ನಾನೂ ಒಬ್ಬ. ಅವರು ಇವತ್ತು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಆ ರೀತಿಯ ಸವಲತ್ತು ನಮಗಿದ್ದರೆ ನಾವೂ ಬೆಳೆಯಬಹುದಾಗಿತ್ತು ಎಂದು ನುಡಿದರು.

ನೀವು ನೂರು ವಾಚ್ ಕಟ್ಟಿದರೆ ನಾನು ಸ್ನೇಹಿತನಾಗಿ ಅತ್ಯಂತ ಖುಷಿ ಪಡುವೆ. ನೀವು ಅಫಿಡವಿಟ್‍ನಲ್ಲಿ ತಿಳಿಸಿದ್ದಾಗಿ ಹೇಳಿದ್ದೀರಿ. ಆದರೆ, ಅದನ್ನು ತಿಳಿಸಿಲ್ಲ ಎಂಬುದಷ್ಟೇ ನನ್ನ ಪ್ರಶ್ನೆ ಎಂದು ತಿಳಿಸಿದರು. ಶಿವಕುಮಾರ್ ಅವರು ನನ್ನ ಉನ್ನತ ಹುದ್ದೆಗೂ ಗೌರವ ಕೊಡುವುದನ್ನು ಕಲಿಯಬೇಕಿತ್ತು ಎಂದು ಛಲವಾದಿ ನಾರಾಯಣಸ್ವಾಮಿ ಅವರು ಹೇಳಿದರು.

ಶಿವಕುಮಾರ್ ಮತ್ತು ನಾನು ಇವತ್ತಿನ ಸ್ನೇಹಿತರಲ್ಲ; ರಾಜಕೀಯ ಸ್ನೇಹಿತರಲ್ಲ. ನಾವು ಕಾಲೇಜಿನಿಂದಲೇ ಆತ್ಮೀಯ ಸ್ನೇಹಿತರು. ಇವತ್ತು ನೀವು ದೊಡ್ಡ ಹಂತಕ್ಕೆ ಬೆಳೆದಿದ್ದೀರಿ; ಬಹಳ ಸಂತೋಷ. ಇವತ್ತು ಉಪ ಮುಖ್ಯಮಂತ್ರಿ ಇದ್ದೀರಿ. ಈಗಾಗಲೇ ನಿಮ್ಮ ಪಕ್ಷದಲ್ಲಿ ನೀವು ಮುಖ್ಯಮಂತ್ರಿ ಆಗಬೇಕು ಎಂದು ಮಾತನಾಡುತ್ತಿದ್ದಾರೆ.

ಬಹಳ ಸಂತೋಷ. ನಾನು ಆ ಎತ್ತರಕ್ಕೆ ಬೆಳೆದಿಲ್ಲ; ನನ್ನ ಪರಿಸ್ಥಿತಿಯೇ ಬೇರೆ. ನಾನು ಕಾರ್ಟಿಯರ್, ರೋಲೆಕ್ಸ್, ಹೂಬ್ಲೋಟ್ ವಾಚ್ ಕಟ್ಟಿಲ್ಲ; ನನಗಿರೋದು ಒಂದೇ ಟೈಟಾನ್ ಎಂದು ಗಮನಕ್ಕೆ ತಂದರು. ಹೋಗಲಿ ನನಗೆ ಐದಾರು ಇಲ್ಲ. ನನಗಿರೋದು ಒಂದೇ. ಆದರೆ, ಅಫಿಡವಿಟ್‍ನಲ್ಲಿ ತಿಳಿಸಿಲ್ಲ ಎಂದದ್ದು ನನ್ನ ಅಪರಾಧವೇ ಎಂದು ಕೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!