HomeEntertainment‘ಆತ್ಮಹತ್ಯೆ ಮಾಡಿ ಕರೆದರೆ ನಾನು ಬರಲ್ಲ’: ಅಭಿಮಾನಿ ಸಾವಿನ ಬಳಿಕ ಅಂತ್ಯಸಂಸ್ಕಾರಕ್ಕೆ ಹೋಗದ ಕಾರಣ ತಿಳಿಸಿದ...

‘ಆತ್ಮಹತ್ಯೆ ಮಾಡಿ ಕರೆದರೆ ನಾನು ಬರಲ್ಲ’: ಅಭಿಮಾನಿ ಸಾವಿನ ಬಳಿಕ ಅಂತ್ಯಸಂಸ್ಕಾರಕ್ಕೆ ಹೋಗದ ಕಾರಣ ತಿಳಿಸಿದ ಯಶ್

For Dai;y Updates Join Our whatsapp Group

ಬೆಂಗಳೂರು: ಅಭಿಮಾನಿಗಳ ಮೇಲಿನ ಪ್ರೀತಿ ಹಾಗೂ ಕಾಳಜಿಗೆ ಹೆಸರಾಗಿರುವ ಪ್ಯಾನ್ ಇಂಡಿಯಾ ನಟ ಯಶ್, 2021ರಲ್ಲಿ ಮಂಡ್ಯದಲ್ಲಿ ನಡೆದ ಅಭಿಮಾನಿಯೊಬ್ಬರ ಆತ್ಮಹತ್ಯೆ ಪ್ರಕರಣದ ಕುರಿತು ಮೊದಲ ಬಾರಿಗೆ ತಮ್ಮ ನಿಲುವನ್ನು ವಿವರಿಸಿದ್ದಾರೆ. ಅಭಿಮಾನಿಯೊಬ್ಬ ತಮ್ಮ ಅಂತ್ಯಸಂಸ್ಕಾರಕ್ಕೆ ಯಶ್ ಹಾಗೂ ಸಿದ್ದರಾಮಯ್ಯ ಬರಬೇಕು ಎಂದು ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರೂ, ಯಶ್ ಅಂತ್ಯಸಂಸ್ಕಾರಕ್ಕೆ ತೆರಳಿರಲಿಲ್ಲ. ಇದಕ್ಕೆ ಕಾರಣವೇನು ಎಂಬುದನ್ನು ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ರಜತ್ ಶರ್ಮ ಪ್ರಶ್ನಿಸಿದ್ದಾರೆ.

ಮಂಡ್ಯ ತಾಲೂಕಿನ ಕೆರೆಗೋಡು ಹೋಬಳಿಯ ಕೊಡಿದೊಡ್ಡಿ ಗ್ರಾಮದ ಕೃಷ್ಣ ಎಂಬ ಯುವಕ 2021ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತಮ್ಮ ಅಂತ್ಯಸಂಸ್ಕಾರಕ್ಕೆ ಯಶ್ ಹಾಗೂ ಆಗಿನ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗಮಿಸಬೇಕು ಎಂಬ ಆಶಯವನ್ನು ಅವರು ಪತ್ರದಲ್ಲಿ ಬರೆದಿದ್ದರು. ಸಿದ್ದರಾಮಯ್ಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದರೂ ಯಶ್ ತೆರಳಿರಲಿಲ್ಲ.

ಈ ಕುರಿತು ಮಾತನಾಡಿದ ಯಶ್, ಅಭಿಮಾನಿಯ ಸಾವಿನಿಂದ ತಮಗೆ ಬಹಳ ದುಃಖವಾಗಿತ್ತು. ಆದರೂ ಅಂತ್ಯಸಂಸ್ಕಾರಕ್ಕೆ ತೆರಳದಿರುವುದು ಉದ್ದೇಶಪೂರ್ವಕವಾಗಿ ತೆಗೆದುಕೊಂಡ ನಿರ್ಧಾರ ಎಂದು ಹೇಳಿದ್ದಾರೆ.

ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ನಂತರ ತಾನು ತೆರಳಿದರೆ, ಮುಂದೆ ಇದೇ ರೀತಿಯ ಕೃತ್ಯಕ್ಕೆ ಪ್ರೋತ್ಸಾಹ ಸಿಕ್ಕಂತಾಗಬಹುದು ಎಂಬ ಆತಂಕ ಯಶ್ ವ್ಯಕ್ತಪಡಿಸಿದ್ದಾರೆ. ‘ಯಶ್ ಅವರನ್ನು ಕರೆಸಬೇಕಾದರೆ ಹೀಗೆ ಮಾಡಬಹುದು’ ಎಂಬ ತಪ್ಪು ಸಂದೇಶ ಇತರ ಅಭಿಮಾನಿಗಳಿಗೆ ಹೋಗಬಾರದು ಎಂಬ ಕಾರಣಕ್ಕೆ ತಾವು ಅಂದು ಹೋಗಲಿಲ್ಲ ಎಂದು ವಿವರಿಸಿದ್ದಾರೆ.

ಅಭಿಮಾನಿಗಳು ತಮ್ಮನ್ನು ಭೇಟಿಯಾಗಬೇಕಾದರೆ ಆತ್ಮಹತ್ಯೆಯಂತಹ ಮಾರ್ಗ ಆಯ್ಕೆ ಮಾಡಬಾರದು. ಬದಲಾಗಿ ಜೀವನದಲ್ಲಿ ಸಾಧನೆ ಮಾಡಿ, ಆ ಸಾಧನೆಯ ಮೂಲಕ ತಮ್ಮನ್ನು ಕರೆಯುವಂತೆ ಯಶ್ ಹೇಳಿದ್ದಾರೆ. ಅಂತಹ ಸಂದರ್ಭಗಳಲ್ಲಿ ಖಂಡಿತವಾಗಿಯೂ ತಮ್ಮ ಅಭಿಮಾನಿಗಳ ಬಳಿಗೆ ತೆರಳಿ ಅವರ ಸಾಧನೆಯ ಬಗ್ಗೆ ಹೆಮ್ಮೆ ಪಡುವುದಾಗಿ ತಿಳಿಸಿದ್ದಾರೆ.

ತಮ್ಮ ಅಭಿಮಾನಿಗಳ ಬಗ್ಗೆ ಇರುವ ಕಾಳಜಿಯನ್ನೂ ಯಶ್ ಇದೇ ಸಂದರ್ಭದಲ್ಲಿ ವಿವರಿಸಿದ್ದಾರೆ. ಸಮಯ ಮಾಡಿಕೊಂಡು ಅಭಿಮಾನಿಗಳನ್ನು ಭೇಟಿಯಾಗುವುದಾಗಿ ಹಾಗೂ ಪ್ರತಿಯೊಬ್ಬರೊಂದಿಗೂ ವೈಯಕ್ತಿಕವಾಗಿ ನಿಂತು ಫೋಟೋ ತೆಗೆಸಿಕೊಳ್ಳುವುದಾಗಿ ಹೇಳಿದ್ದಾರೆ.

ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳನ್ನು ಭೇಟಿ ಮಾಡುವ ಯಶ್, ಅವರೊಂದಿಗೆ ಪ್ರತ್ಯೇಕವಾಗಿ ಫೋಟೋ ತೆಗೆಸಿಕೊಳ್ಳುವ ಮೂಲಕ ಅಭಿಮಾನಿಗಳೊಂದಿಗೆ ನೇರ ಸಂಪರ್ಕ ಕಾಯ್ದುಕೊಳ್ಳುವ ಪ್ರಯತ್ನ ಮಾಡುತ್ತಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img