HomeIndia Newsಆಕಾಶದಲ್ಲೇ ಇಂಡಿಗೋ ವಿಮಾನಕ್ಕೆ ಸಿಡಿಲಿನ ಹೊಡೆತ; ಮುಂಭಾಗದ ರೇಡೋಮ್‌ಗೆ ಹಾನಿ!

ಆಕಾಶದಲ್ಲೇ ಇಂಡಿಗೋ ವಿಮಾನಕ್ಕೆ ಸಿಡಿಲಿನ ಹೊಡೆತ; ಮುಂಭಾಗದ ರೇಡೋಮ್‌ಗೆ ಹಾನಿ!

For Dai;y Updates Join Our whatsapp Group

ಲಕ್ನೋ: ಆಕಾಶದಲ್ಲಿ ಹಾರಾಟ ನಡೆಸುತ್ತಿದ್ದ ಇಂಡಿಗೋ ವಿಮಾನಕ್ಕೆ ಸಿಡಿಲು ಬಡಿದು ಆತಂಕದ ವಾತಾವರಣ ನಿರ್ಮಾಣವಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಅದೃಷ್ಟವಶಾತ್ ವಿಮಾನದಲ್ಲಿದ್ದ 104 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಸುರಕ್ಷಿತವಾಗಿ ಲಕ್ನೋ ತಲುಪಿದ್ದಾರೆ.

ಪಾಟ್ನಾದಿಂದ ಲಕ್ನೋಗೆ ತೆರಳುತ್ತಿದ್ದ ಇಂಡಿಗೋದ 6E 625 ವಿಮಾನ ಸುಮಾರು 17 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ಸಿಡಿಲು ಹಾಗೂ ಪ್ರತಿಕೂಲ ಹವಾಮಾನವನ್ನು ಎದುರಿಸಿದೆ. ಪರಿಣಾಮ ವಿಮಾನದ ಮುಂಭಾಗದ ರೇಡೋಮ್‌ಗೆ ಹಾನಿಯಾಗಿದೆ.

ತಕ್ಷಣ ಎಚ್ಚೆತ್ತುಕೊಂಡ ಪೈಲಟ್‌ಗಳು ಲಕ್ನೋದಲ್ಲಿ ನಿಗದಿತ ಸಮಯಕ್ಕಿಂತ ಎಂಟು ನಿಮಿಷ ಮುಂಚಿತವಾಗಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ. ವಿಮಾನದಲ್ಲಿದ್ದ ಯಾರಿಗೂ ಗಾಯವಾಗಿಲ್ಲ.

ಘಟನೆ ಬೆನ್ನಲ್ಲೇ ಡಿಜಿಸಿಎ ತನಿಖೆ ಆರಂಭಿಸಿದೆ. ವಿಮಾನಕ್ಕೆ ಅಗತ್ಯ ನಿರ್ವಹಣೆ ಕಾರ್ಯ ನಡೆಸಲಾಗುತ್ತಿದ್ದು, ಡಿಜಿಸಿಎ ಅನುಮೋದನೆ ದೊರೆತ ನಂತರವಷ್ಟೇ ವಿಮಾನದ ಕಾರ್ಯಾಚರಣೆಗೆ ಅವಕಾಶ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂಡಿಗೋ ಕೂಡ ಘಟನೆ ಕುರಿತು ಪ್ರತಿಕ್ರಿಯಿಸಿದ್ದು, ಲ್ಯಾಂಡಿಂಗ್ ವೇಳೆ ಆಲಿಕಲ್ಲು ಮಳೆಯಂತಹ ಪ್ರತಿಕೂಲ ಹವಾಮಾನ ಎದುರಾಗಿತ್ತು ಎಂದು ತಿಳಿಸಿದೆ.

ಇತ್ತೀಚೆಗಷ್ಟೇ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಇಂಡಿಗೋ ವಿಮಾನದ ಹಿಂಭಾಗದ ಭಾಗ ರನ್‌ವೇಗೆ ತಾಗಿದ್ದ ಘಟನೆಯೂ ನಡೆದಿತ್ತು. ಆ ವಿಮಾನವನ್ನೂ ಬಳಿಕ ಹಾರಾಟದಿಂದ ತಡೆಹಿಡಿಯಲಾಗಿತ್ತು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img