HomeHaveriಕಾಂಗ್ರೆಸ್ ಸರ್ಕಾರದಿಂದ ವಿನೂತನ ಯೋಜನೆಗಳು

ಕಾಂಗ್ರೆಸ್ ಸರ್ಕಾರದಿಂದ ವಿನೂತನ ಯೋಜನೆಗಳು

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಹಾವೇರಿ : ಸ್ವಾತಂತ್ರ್ಯಾನಂತರ ಸುಭದ್ರ ರಾಷ್ಟç ನಿರ್ಮಾಣಕ್ಕೆ ಶ್ರಮಿಸಿರುವ ಕಾಂಗ್ರೆಸ್ ಪಕ್ಷ ಆರೂವರೆ ದಶಕಗಳ ಕಾಲ ಸದಾ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.

ಇಲ್ಲಿನ ಚಿಕ್ಕೇರೂರ ಗ್ರಾಮದಲ್ಲಿ ಜರುಗಿದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜನಸಾಮಾನ್ಯರ ಬಗೆಗಿನ ಕಾಳಜಿ, ಮಹಿಳೆಯರ ಮೇಲಿನ ಗೌರವ ಮತ್ತು ದೇಶದ ಸದೃಢತೆಗೆ ವಿನೂತನ ಯೋಜನೆ ರೂಪಿಸಿದ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷದ್ದು. ತಮ್ಮ ಮಧ್ಯೆ ಇದ್ದು ಸೇವೆ ಮಾಡುವ ಸಂಕಲ್ಪ ನನ್ನದು. ಈ ಹಿನ್ನೆಲೆಯಲ್ಲಿ ತಾವೆಲ್ಲರೂ ನನಗೆ ಆಶೀರ್ವದಿಸಬೇಕೆಂದು ಮನವಿ ಮಾಡಿದರು.

ಶಾಸಕ ಯು.ಬಿ. ಬಣಕಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಮಡಿವಾಳರ ಮಾತನಾಡಿದರು. ಶಾಸಕ ಶ್ರೀನಿವಾಸ ಮಾನೆ, ನಿಂಗಪ್ಪ ಚಳಗೇರಿ, ಹನುಮಗೌಡ್ರ ಹುಡೇದ, ಜ್ಯೋತಿಬಾ ಜಾಧವ, ವಿಟಪ್ಪ ಬಣಕಾರ, ರಾಘು ಕಲಾಲ, ಪಿ.ಡಿ. ದೊಡ್ಡಮನಿ, ಭರಮಪ್ಪ ಡಮ್ಮಳ್ಳಿ, ಹುಸೇನ್ ಬ್ಯಾಡಗಿ, ಮಲ್ಲೇಶಪ್ಪ ಹರಿಜನ, ಜಾವೇದ್ ಹಿತ್ತಲಮನಿ, ಕರಬಸಪ್ಪ ಬಣಕಾರ, ಬಸೀರಸಾಬ ಪಟ್ಟಣಶೆಟ್ಟಿ, ರಾಜಶೇಖರ ಚೌಟಿ, ಬಸವರಾಜ ಮಂಗಣಿ, ಸಿದ್ದಪ್ಪಣ್ಣ, ದುರ್ಗಪ್ಪ ನೀರಲಗಿ, ಮಲ್ಲೇಶಣ್ಣ ಮಡ್ಲೀರ, ಮಂಜಣ್ಣ ಕಾರಗಿ, ರಾಜು ಚೌಟಗಿ, ಹನುಮಗೌಡ್ರ ಹುಡೇದ, ಬಶೀರಸಾಬ ಪಟ್ಟಣಶೆಟ್ಟಿ, ಸುನೀಲ್, ಕರಬಸಣ್ಣ ಬಣಕಾರ, ಜಮೀರುಲ್ಲಾಖಾನ್, ಖಾಜಾಸಾಬ ಬಳ್ಳಾರಿ, ಜಾವೇದ್, ಭರಮಪ್ಪ ಡಂಬಳ, ಪರಮೇಶಪ್ಪ ದೊಡ್ಡಮನಿ, ನಬಿ ಕಲಾಲ, ಸುಲೇಮಾನ್ ಬಳಿಗಾರ, ಬಸಣ್ಣ ಕೋರಿಶೆಟ್ಟರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img