HomeSports NewsIPL 2026 Auction: RCB ತೆಕ್ಕೆಗೆ ವೆಂಕಟೇಶ್ ಅಯ್ಯರ್..! ₹7 ಕೋಟಿಗೆ ಖರೀದಿ

IPL 2026 Auction: RCB ತೆಕ್ಕೆಗೆ ವೆಂಕಟೇಶ್ ಅಯ್ಯರ್..! ₹7 ಕೋಟಿಗೆ ಖರೀದಿ

For Dai;y Updates Join Our whatsapp Group

Spread the love

ಬೆಂಗಳೂರು: 9ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಟಗಾರರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿ, ಭಾರತದ ಸ್ಟಾರ್ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಅವರನ್ನು 7 ಕೋಟಿ ರೂ. ಮೊತ್ತಕ್ಕೆ ಖರೀದಿಸುವಲ್ಲಿ ಯಶಸ್ವಿಯಾಗಿದೆ.

ಕಡಿಮೆ ಮೊತ್ತಕ್ಕೆ ಗುಣಮಟ್ಟದ ಆಲ್‌ರೌಂಡರ್ ಒಬ್ಬರನ್ನು ಪಡೆದುಕೊಳ್ಳುವ ಮೂಲಕ ಆರ್‌ಸಿಬಿ ಗಮನ ಸೆಳೆದಿದೆ. ಕಳೆದ ಐಪಿಎಲ್ ಮೆಗಾ ಹರಾಜಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಫ್ರಾಂಚೈಸಿ ವೆಂಕಟೇಶ್ ಅಯ್ಯರ್ ಅವರನ್ನು ಬರೋಬ್ಬರಿ 23.75 ಕೋಟಿ ರೂ. ನೀಡಿ ಖರೀದಿಸಿತ್ತು.

ಈ ಬಾರಿ ಹರಾಜಿನಲ್ಲೂ ಆರ್‌ಸಿಬಿ ಮತ್ತು ಕೆಕೆಆರ್ ನಡುವೆ ತೀವ್ರ ಪೈಪೋಟಿ ನಡೆದರೂ, ಅಂತಿಮವಾಗಿ ಕೆಕೆಆರ್ ಹಿಂದೆ ಸರಿದ ಪರಿಣಾಮ 7 ಕೋಟಿ ರೂ.ಗೆ ವೆಂಕಟೇಶ್ ಅಯ್ಯರ್ ಆರ್‌ಸಿಬಿ ಪಾಲಾದರು.

ಇತ್ತೀಚೆಗೆ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮಧ್ಯ ಪ್ರದೇಶ ತಂಡದ ಪರ ಆಡಿದ ವೆಂಕಟೇಶ್ ಅಯ್ಯರ್ 43 ಎಸೆತಗಳಲ್ಲಿ 70 ರನ್‌ಗಳ ಸ್ಪೋಟಕ ಇನಿಂಗ್ಸ್ ಮೂಲಕ ಉತ್ತಮ ಫಾರ್ಮ್ ತೋರಿದ್ದು, ಆರ್‌ಸಿಬಿ ತಂಡದ ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!