HomeKarnataka Newsಬೆಳಗಾವಿಯಲ್ಲಿ ಖ್ಯಾತ ಉದ್ಯಮಿಗಳಿಗೆ IT ಶಾಕ್: ಮನೆ, ಕಚೇರಿ ಮೇಲೆ ದಾಳಿ, ಪರಿಶೀಲನೆ!

ಬೆಳಗಾವಿಯಲ್ಲಿ ಖ್ಯಾತ ಉದ್ಯಮಿಗಳಿಗೆ IT ಶಾಕ್: ಮನೆ, ಕಚೇರಿ ಮೇಲೆ ದಾಳಿ, ಪರಿಶೀಲನೆ!

For Dai;y Updates Join Our whatsapp Group

ಬೆಳಗಾವಿ:- ಆದಾಯಕ್ಕಿಂತ ಅಕ್ರಮ ಆಸ್ತಿಗಳಿಸಿದ ಆರೋಪದಡಿ ಬೆಳಗಾವಿಯ ಖ್ಯಾತ ಉದ್ಯಮಿಗಳಾದ ವಿನೋದ್ ದೊಡ್ಡಣ್ಣವರ್, ಪುರುಷೋತ್ತಮ ದೊಡ್ಡಣ್ಣವರ್ ಒಡೆತನದ ಕಂಪನಿಗಳ ಮೇಲೆ  IT ಅಧಿಕಾರಿಗಳು ದಾಳಿ ಮಾಡಿ ಪರಿಶೀಲಿಸಿದರು.

ದೊಡ್ಡಣ್ಣವರ್ ಬ್ರದರ್ಸ್​ ಗಣಿ, ಸಕ್ಕರೆ ಕಾರ್ಖಾನೆ ಮಾಲೀಕರ ಕಚೇರಿ ಹಾಗೂ ಮನೆ ಮೇಲೆ ಈ ದಾಳಿ ನಡೆದಿದೆ. ಗೋವಾದಿಂದ ಆಗಮಿಸಿರುವ ಐಟಿ ಅಧಿಕಾರಿಗಳು ಒಟ್ಟು 5 ತಂಡಗಳಾಗಿ ಸೋಮವಾರ ಮಧ್ಯರಾತ್ರಿ ಮೂರು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಈ ವೇಳೆ ಐಟಿ  ಅಧಿಕಾರಿಗಳು ಹಲವು ಮಹತ್ತರ ದಾಖಲೆ ಪರಿಶೀಲನೆ ನಡೆಸಿದ್ದು, ಕಚೇರಿಗೆ ದೊಡ್ಡಣ್ಣವರ್ ಕುಟುಂಬಸ್ಥರನ್ನು ಕರೆಸಿಕೊಂಡು ವಿಚಾರಣೆ ಮಾಡಿದ್ದಾರೆ.

ಇನ್ನೂ ಸಕ್ಕರೆ ಕಾರ್ಖಾನೆ, ಐರಾನ್ ಹಾಗೂ ಗ್ರಾನೈಟ್ ಉದ್ಯಮಿ ಆಗಿರುವ ದೊಡ್ಡಣ್ಣವರ ಕುಟುಂಬ, ಬೆಳಗಾವಿಯ ಖ್ಯಾತ ಉದ್ಯಮಿ ಅನಿಸಿಕೊಂಡಿದೆ. ಈ ಉದ್ಯಮಿಗಳು ಐರಾನ್ ಹಾಗೂ ಗ್ರಾನೈಟ್​ಗಳನ್ನು ದೇಶ- ವಿದೇಶಗಳಿಗೆ ರಫ್ತು ಮಾಡುತ್ತಿದ್ದರು. ಅಲ್ಲದೇ ಕಾಗವಾಡ ತಾಲೂಕಿನಲ್ಲಿ ಎರಡು ಸಕ್ಕರೆ ಕಾರ್ಖಾನೆಗಳನ್ನು ಈ ಕುಟುಂಬ ಹೊಂದಿದೆ. ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇರುವ ಇಬ್ಬರು ಉದ್ಯಮಿಗಳ ಮನೆ ಮೇಲೆ ದಾಳಿ ನಡೆಸಿರುವ IT ಅಧಿಕಾರಿಗಳು, ಮಹತ್ತರ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img