HomeTumakuruಜಯಪ್ರಕಾಶ ಹೆಗಡೆ ವರದಿ ಸ್ವೀಕರಿಸದಂತೆ

ಜಯಪ್ರಕಾಶ ಹೆಗಡೆ ವರದಿ ಸ್ವೀಕರಿಸದಂತೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ತುಮಕೂರು : ಬಹಳ ವರ್ಷಗಳ ನಂತರ ಜಯಪ್ರಕಾಶ ಹೆಗಡೆ ಅವರ ವರದಿಯನ್ನು ತರಾತುರಿಯಲ್ಲಿ ಸ್ವೀಕಾರ ಮಾಡಿದ್ದು ಯೋಗ್ಯವಾದ ನಿರ್ಣಯವಲ್ಲ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಾತಿ ಜನಗಣತಿಯನ್ನು ನಾವ್ಯಾರೂ ವಿರೋಧಿಸುವುದಿಲ್ಲ. ಆದರೆ ವೀರಶೈವ ಲಿಂಗಾಯತ ಸಮುದಾಯವಾಗಲಿ, ಒಕ್ಕಲಿಗ ಸಮುದಾಯದಲ್ಲಾಗಲಿ ವೈಜ್ಞಾನಿಕವಾಗಿ ಜನಗಣತಿ ನಡೆದಿರುವದಿಲ್ಲ. ಕೆಲವೇ ಕೆಲವು ಮಾಹಿತಿಗಳನ್ನು ಆಧರಿಸಿ ಕಾಂತರಾಜ ವರದಿ ಸಿದ್ಧವಾಗಿದೆ. ಈಗಾಗಲೇ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯಾಗಲಿ, ಈ ನಾಡಿನ ಪೀಠ ಮಠಗಳಾಗಲಿ ವೈಜ್ಞಾನಿಕವಾಗಿ ಜಾತಿ ಜನಗಣತಿ ನಡೆಯಲಾರದೇ ಇರುವದಕ್ಕೆ ವಿರೋಧ ವ್ಯಕ್ತಪಡಿಸಿದ್ದು ಎಲ್ಲರಿಗೂ ಗೊತ್ತಿದೆ.

ಪ್ರತಿಯೊಂದು ಜಾತಿ ಜನಗಣತಿಯನ್ನು ಪ್ರಾಮಾಣಿಕವಾಗಿ, ಸತ್ಯವಾಗಿ ಗುರುತಿಸಿ, ಸಂಖ್ಯೆಗೆ ಅನುಗುಣವಾಗಿ ಸವಲತ್ತುಗಳನ್ನು ಒದಗಿಸಬೇಕೆಂಬ ಉದ್ದೇಶವೇ ಹೊರತು ಬೇರೇನೂ ಅಲ್ಲ. ಮುಂದಿನ ಚುನಾವಣೆ ದೃಷ್ಟಿಯಿಂದ ಅವಸರದಲ್ಲಿ ಈ ವರದಿಯನ್ನು ಸ್ವೀಕಾರ ಮಾಡಿ ಕಾರ್ಯಗತಗೊಳಿಸಿದರೆ ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಅನುಭವಿಸಲಿದೆ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img