• About
  • Advertise
  • Privacy & Policy
  • Contact
Wednesday, November 4, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Sports News

ಕೊಹ್ಲಿ ಅಬ್ಬರಕ್ಕೆ ಕಿವೀಸ್ ಫುಲ್ ಕ್ಲೀನ್ ಬೌಲ್ಡ್! ಮೊದಲ ಏಕದಿನ ಪಂದ್ಯದಲ್ಲೇ ಭಾರತಕ್ಕೆ ಭರ್ಜರಿ ಜಯ

Vijaya Sakshi News Desk by Vijaya Sakshi News Desk
November 4, 2026
in Sports News
ಕೊಹ್ಲಿ ಅಬ್ಬರಕ್ಕೆ ಕಿವೀಸ್ ಫುಲ್ ಕ್ಲೀನ್ ಬೌಲ್ಡ್! ಮೊದಲ ಏಕದಿನ ಪಂದ್ಯದಲ್ಲೇ ಭಾರತಕ್ಕೆ ಭರ್ಜರಿ ಜಯ
0
SHARES
1
VIEWS
Share on Facebook

ಆಕ್ಲೆಂಡ್‌: ಇತ್ತೀಚೆಗಷ್ಟೇ ನ್ಯೂಜಿಲೆಂಡ್‌ ವಿರುದ್ಧ ಟಿ20 ಸರಣಿ ಗೆದ್ದು ಆತ್ಮವಿಶ್ವಾಸದಲ್ಲಿರುವ ಟೀಂ ಇಂಡಿಯಾ ಇದೀಗ ಏಕದಿನ ಸರಣಿಯಲ್ಲೂ ಗೆಲುವಿನ ಅಭಿಯಾನ ಆರಂಭಿಸಿದೆ. ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್‌ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಅರ್ಷ್‌ದೀಪ್‌ ಸಿಂಗ್‌ ಹಾಗೂ ಅನ್ಶುಲ್‌ ಕಾಂಬೋಜ್‌ ಅವರ ಮಾರಕ ಬೌಲಿಂಗ್‌ ದಾಳಿ ಮತ್ತು ವಿರಾಟ್‌ ಕೊಹ್ಲಿ ಅವರ ಸ್ಫೋಟಕ ಅರ್ಧಶತಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

185 ರನ್‌ಗಳಿಗೆ ಕಿವೀಸ್‌ ಆಲೌಟ್‌

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್‌ ತಂಡ ಭಾರತೀಯ ಬೌಲರ್‌ಗಳ ದಾಳಿಗೆ ತತ್ತರಿಸಿತು. ಕಿವೀಸ್‌ ಪಡೆ 40.2 ಓವರ್‌ಗಳಲ್ಲಿ 185 ರನ್‌ಗಳಿಗೆ ಸರ್ವಪತನ ಕಂಡಿತು. ತಂಡದ ಪರ ಟಿಮ್‌ ಸೈಫರ್ಟ್‌ 38, ಗ್ಲೆನ್‌ ಫಿಲಿಪ್ಸ್‌ 30 ಹಾಗೂ ಡೇರಿಲ್‌ ಮಿಚೆಲ್‌ 28 ರನ್‌ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್‌ಗಳು ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲರಾದರು.

ಭಾರತದ ಪರ ಅರ್ಷ್‌ದೀಪ್‌ ಸಿಂಗ್‌ 4 ವಿಕೆಟ್‌ ಪಡೆದು ಮಿಂಚಿದರೆ, ಗುರ್ನೂರ್‌ ಬ್ರಾರ್‌ 3 ಹಾಗೂ ಅನ್ಶುಲ್‌ ಕಾಂಬೋಜ್‌ 2 ವಿಕೆಟ್‌ ಕಬಳಿಸಿ ಕಿವೀಸ್‌ ಬ್ಯಾಟಿಂಗ್‌ ಬೆನ್ನೆಲುಬು ಮುರಿದರು.

ಡಿಎಲ್‌ಎಸ್‌ ನಿಯಮದಡಿ ಭಾರತಕ್ಕೆ 143 ರನ್‌ ಗುರಿ

ನ್ಯೂಜಿಲೆಂಡ್‌ ನೀಡಿದ್ದ 186 ರನ್‌ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಮಳೆ ಅಡ್ಡಿಯಾಯಿತು. ಹೀಗಾಗಿ ಡಕ್ವರ್ತ್‌ ಲೂಯಿಸ್‌ (DLS) ನಿಯಮದ ಅನ್ವಯ ಭಾರತಕ್ಕೆ 32 ಓವರ್‌ಗಳಲ್ಲಿ 143 ರನ್‌ಗಳ ಪರಿಷ್ಕೃತ ಗುರಿ ನೀಡಲಾಯಿತು.

ಗುರಿ ಬೆನ್ನಟ್ಟಿದ ಭಾರತ ಮೊದಲ ಓವರ್‌ನಲ್ಲೇ ಒಂದು ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಆದರೆ ನಂತರ ಕ್ರೀಸ್‌ಗೆ ಬಂದ ವಿರಾಟ್‌ ಕೊಹ್ಲಿ ಹಾಗೂ ನಾಯಕ ಶುಭಮನ್‌ ಗಿಲ್‌ ಜವಾಬ್ದಾರಿಯುತ ಆಟವಾಡಿದರು. ಈ ಜೋಡಿ ಎರಡನೇ ವಿಕೆಟ್‌ಗೆ 104 ಎಸೆತಗಳಲ್ಲಿ 113 ರನ್‌ಗಳ ಅಮೂಲ್ಯ ಜೊತೆಯಾಟ ನೀಡುವ ಮೂಲಕ ತಂಡವನ್ನು ಗೆಲುವಿನ ಹಾದಿಗೆ ತಂದಿತು.

ಕೊಹ್ಲಿ ಅಬ್ಬರಕ್ಕೆ ಕಿವೀಸ್‌ ಬೌಲರ್‌ಗಳು ಕಂಗಾಲು!

ಮತ್ತೊಮ್ಮೆ ತಮ್ಮ ಬ್ಯಾಟಿಂಗ್‌ ಕ್ಲಾಸ್‌ ಪ್ರದರ್ಶಿಸಿದ ವಿರಾಟ್‌ ಕೊಹ್ಲಿ ಕೇವಲ 51 ಎಸೆತಗಳಲ್ಲಿ 74 ರನ್‌ ಸಿಡಿಸಿದರು. ಇವರ ಇನ್ನಿಂಗ್ಸ್‌ನಲ್ಲಿ ಒಂದು ಸಿಕ್ಸರ್‌ ಹಾಗೂ 13 ಬೌಂಡರಿಗಳು ಸೇರಿದ್ದವು. ನಾಯಕ ಶುಭಮನ್‌ ಗಿಲ್‌ 37 ರನ್‌ ಗಳಿಸಿ ಉತ್ತಮ ಸಾಥ್‌ ನೀಡಿದರು.

ಆದರೆ ಗಿಲ್‌ ಔಟಾದ ಬಳಿಕ ಭಾರತ ತಂಡ ದಿಢೀರ್‌ ವಿಕೆಟ್‌ ಕಳೆದುಕೊಂಡಿತು. ಮುಂದಿನ 29 ರನ್‌ಗಳ ಅಂತರದಲ್ಲಿ ನಾಲ್ಕು ವಿಕೆಟ್‌ಗಳು ಪತನಗೊಂಡವು. ಶ್ರೇಯಸ್‌ ಅಯ್ಯರ್‌ 17 ರನ್‌ ಗಳಿಸಿದರೆ, ರೋಹಿತ್‌ ಶರ್ಮಾ ಹಾಗೂ ಅಕ್ಷರ್‌ ಪಟೇಲ್‌ ಖಾತೆ ತೆರೆಯದೆ ನಿರ್ಗಮಿಸಿದರು.

ಕೊನೆಯಲ್ಲಿ ಕೆ.ಎಲ್‌. ರಾಹುಲ್‌ 3 ಹಾಗೂ ನಮನ್‌ ಧೀರ್‌ 5 ರನ್‌ ಗಳಿಸಿ ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು. ಭಾರತ 22.4 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 143 ರನ್‌ ಗಳಿಸಿ ಜಯಭೇರಿ ಬಾರಿಸಿತು.

ನ್ಯೂಜಿಲೆಂಡ್‌ ಪರ ಜಾಕೊಬ್‌ ಡಫಿ 3 ವಿಕೆಟ್‌ ಪಡೆದರೆ, ಕೈಲ್‌ ಜೇಮಿಸನ್‌ ಹಾಗೂ ನಥಾನ್‌ ಸ್ಮಿತ್‌ ತಲಾ ಒಂದು ವಿಕೆಟ್‌ ಕಬಳಿಸಿದರು. ಈ ಗೆಲುವಿನೊಂದಿಗೆ ಭಾರತ ಏಕದಿನ ಸರಣಿಯಲ್ಲಿ ಶುಭಾರಂಭ ಮಾಡಿದ್ದು, ಮುಂದಿನ ಪಂದ್ಯಗಳಲ್ಲೂ ಇದೇ ಲಯ ಮುಂದುವರಿಸುವ ನಿರೀಕ್ಷೆಯಿದೆ.

Tags: BreakingNewsIND vs NZ ODIIndia vs New ZealandKarnatakaNewsHeadlinesShubman GillTeam IndiaVijayasakshivijayasakshinewsVirat kohliVirat Kohli 74 Runs
ShareSendShare
Previous Post

ನಾಲ್ಕು ವರ್ಷ ಪ್ರೀತಿಸಿದ ಪ್ರೇಯಸಿಯನ್ನೇ ಕೊಂದ ಪೇದೆ: ಹತ್ಯೆ ಬಳಿಕ ಹುಡುಕಾಟದ ನಾಟಕವಾಡಿದ ಪ್ರಿಯಕರ!

Next Post

ಸರ್ಕಾರದ ಔದಾರ್ಯದಿಂದ ಅರಮನೆಯಲ್ಲಿ ವಾಸಿಸುತ್ತಿಲ್ಲ, ಅಂಬಾರಿ ಬೇಕಿದ್ದರೆ ಹೊಸದಾಗಿ ಮಾಡಿಸಿಕೊಳ್ಳಲಿ: ಪ್ರಮೋದಾ ದೇವಿ ಒಡೆಯರ್

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
ಸರ್ಕಾರದ ಔದಾರ್ಯದಿಂದ ಅರಮನೆಯಲ್ಲಿ ವಾಸಿಸುತ್ತಿಲ್ಲ, ಅಂಬಾರಿ ಬೇಕಿದ್ದರೆ ಹೊಸದಾಗಿ ಮಾಡಿಸಿಕೊಳ್ಳಲಿ: ಪ್ರಮೋದಾ ದೇವಿ ಒಡೆಯರ್

ಸರ್ಕಾರದ ಔದಾರ್ಯದಿಂದ ಅರಮನೆಯಲ್ಲಿ ವಾಸಿಸುತ್ತಿಲ್ಲ, ಅಂಬಾರಿ ಬೇಕಿದ್ದರೆ ಹೊಸದಾಗಿ ಮಾಡಿಸಿಕೊಳ್ಳಲಿ: ಪ್ರಮೋದಾ ದೇವಿ ಒಡೆಯರ್

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ವಿಪಕ್ಷಗಳ ಬಳಿ ದಾಖಲೆ ಇಲ್ಲ, ಅಬಕಾರಿ ಸಚಿವರ ರಾಜೀನಾಮೆಗೆ ಅವಶ್ಯಕತೆ ಇಲ್ಲ; ಶಾಸಕ ಹೆಚ್.ಸಿ. ಬಾಲಕೃಷ್ಣ

ತನಿಖೆಗೆ ಸಹಕರಿಸಿದರೆ ನಿಮ್ಮ ಮೇಲಿನ ಕಳಂಕವೂ ದೂರವಾಗುತ್ತೆ: ಸ್ಟಿಂಗ್ ಪ್ರಕರಣದಲ್ಲಿ ಕುಮಾರಸ್ವಾಮಿಗೆ ಹೆಚ್.ಸಿ. ಬಾಲಕೃಷ್ಣ ಟಾಂಗ್

November 4, 2026
ಸರ್ಕಾರದ ಔದಾರ್ಯದಿಂದ ಅರಮನೆಯಲ್ಲಿ ವಾಸಿಸುತ್ತಿಲ್ಲ, ಅಂಬಾರಿ ಬೇಕಿದ್ದರೆ ಹೊಸದಾಗಿ ಮಾಡಿಸಿಕೊಳ್ಳಲಿ: ಪ್ರಮೋದಾ ದೇವಿ ಒಡೆಯರ್

ಸರ್ಕಾರದ ಔದಾರ್ಯದಿಂದ ಅರಮನೆಯಲ್ಲಿ ವಾಸಿಸುತ್ತಿಲ್ಲ, ಅಂಬಾರಿ ಬೇಕಿದ್ದರೆ ಹೊಸದಾಗಿ ಮಾಡಿಸಿಕೊಳ್ಳಲಿ: ಪ್ರಮೋದಾ ದೇವಿ ಒಡೆಯರ್

November 4, 2026
ಕೊಹ್ಲಿ ಅಬ್ಬರಕ್ಕೆ ಕಿವೀಸ್ ಫುಲ್ ಕ್ಲೀನ್ ಬೌಲ್ಡ್! ಮೊದಲ ಏಕದಿನ ಪಂದ್ಯದಲ್ಲೇ ಭಾರತಕ್ಕೆ ಭರ್ಜರಿ ಜಯ

ಕೊಹ್ಲಿ ಅಬ್ಬರಕ್ಕೆ ಕಿವೀಸ್ ಫುಲ್ ಕ್ಲೀನ್ ಬೌಲ್ಡ್! ಮೊದಲ ಏಕದಿನ ಪಂದ್ಯದಲ್ಲೇ ಭಾರತಕ್ಕೆ ಭರ್ಜರಿ ಜಯ

November 4, 2026
ನಾಲ್ಕು ವರ್ಷ ಪ್ರೀತಿಸಿದ ಪ್ರೇಯಸಿಯನ್ನೇ ಕೊಂದ ಪೇದೆ: ಹತ್ಯೆ ಬಳಿಕ ಹುಡುಕಾಟದ ನಾಟಕವಾಡಿದ ಪ್ರಿಯಕರ!

ನಾಲ್ಕು ವರ್ಷ ಪ್ರೀತಿಸಿದ ಪ್ರೇಯಸಿಯನ್ನೇ ಕೊಂದ ಪೇದೆ: ಹತ್ಯೆ ಬಳಿಕ ಹುಡುಕಾಟದ ನಾಟಕವಾಡಿದ ಪ್ರಿಯಕರ!

November 4, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ವಿಪಕ್ಷಗಳ ಬಳಿ ದಾಖಲೆ ಇಲ್ಲ, ಅಬಕಾರಿ ಸಚಿವರ ರಾಜೀನಾಮೆಗೆ ಅವಶ್ಯಕತೆ ಇಲ್ಲ; ಶಾಸಕ ಹೆಚ್.ಸಿ. ಬಾಲಕೃಷ್ಣ

ತನಿಖೆಗೆ ಸಹಕರಿಸಿದರೆ ನಿಮ್ಮ ಮೇಲಿನ ಕಳಂಕವೂ ದೂರವಾಗುತ್ತೆ: ಸ್ಟಿಂಗ್ ಪ್ರಕರಣದಲ್ಲಿ ಕುಮಾರಸ್ವಾಮಿಗೆ ಹೆಚ್.ಸಿ. ಬಾಲಕೃಷ್ಣ ಟಾಂಗ್

November 4, 2026
ಸರ್ಕಾರದ ಔದಾರ್ಯದಿಂದ ಅರಮನೆಯಲ್ಲಿ ವಾಸಿಸುತ್ತಿಲ್ಲ, ಅಂಬಾರಿ ಬೇಕಿದ್ದರೆ ಹೊಸದಾಗಿ ಮಾಡಿಸಿಕೊಳ್ಳಲಿ: ಪ್ರಮೋದಾ ದೇವಿ ಒಡೆಯರ್

ಸರ್ಕಾರದ ಔದಾರ್ಯದಿಂದ ಅರಮನೆಯಲ್ಲಿ ವಾಸಿಸುತ್ತಿಲ್ಲ, ಅಂಬಾರಿ ಬೇಕಿದ್ದರೆ ಹೊಸದಾಗಿ ಮಾಡಿಸಿಕೊಳ್ಳಲಿ: ಪ್ರಮೋದಾ ದೇವಿ ಒಡೆಯರ್

November 4, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper