HomeBengaluru Newsಲಾಂಗ್ ವೀಕೆಂಡ್ ಹಿನ್ನೆಲೆ: ಅಕ್ಟೋಬರ್ 3ರಂದು ಮೆಟ್ರೋ ಸೇವೆ ವಿಸ್ತರಣೆ, ಕೊನೆಯ ರೈಲುಗಳ ಸಮಯ ಇಲ್ಲಿದೆ

ಲಾಂಗ್ ವೀಕೆಂಡ್ ಹಿನ್ನೆಲೆ: ಅಕ್ಟೋಬರ್ 3ರಂದು ಮೆಟ್ರೋ ಸೇವೆ ವಿಸ್ತರಣೆ, ಕೊನೆಯ ರೈಲುಗಳ ಸಮಯ ಇಲ್ಲಿದೆ

For Dai;y Updates Join Our whatsapp Group

ಬೆಂಗಳೂರು: ಲಾಂಗ್ ವೀಕೆಂಡ್ ಹಿನ್ನೆಲೆ ಬೆಂಗಳೂರಿನಿಂದ ವಿವಿಧ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಇದರ ಜೊತೆಗೆ ನಗರದಲ್ಲಿ ವಿವಿಧ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆಯೂ ಹೆಚ್ಚಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಅಕ್ಟೋಬರ್ 3ರಂದು ನಮ್ಮ ಮೆಟ್ರೋ ರೈಲು ಸೇವೆಯನ್ನು ವಿಸ್ತರಿಸಲಾಗಿದೆ.

ಈ ಕುರಿತು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ವಿವಿಧ ಮಾರ್ಗಗಳ ಟರ್ಮಿನಲ್ ನಿಲ್ದಾಣಗಳಿಂದ ಹೊರಡುವ ಕೊನೆಯ ರೈಲುಗಳ ಸಮಯವನ್ನೂ ಪ್ರಕಟಿಸಿದೆ.

ನೇರಳೆ ಮಾರ್ಗ: ವೈಟ್‌ಫೀಲ್ಡ್ ಕಾಡುಗೋಡಿ ನಿಲ್ದಾಣದಿಂದ ರಾತ್ರಿ 12 ಗಂಟೆಗೆ ಕೊನೆಯ ರೈಲು ಹೊರಡಲಿದೆ. ಚಲ್ಲಘಟ್ಟ ನಿಲ್ದಾಣದಿಂದ ರಾತ್ರಿ 12.20ಕ್ಕೆ ಕೊನೆಯ ರೈಲು ಸಂಚರಿಸಲಿದೆ.

ಹಸಿರು ಮಾರ್ಗ: ಮಾದಾವರದಿಂದ ರಾತ್ರಿ 12.15ಕ್ಕೆ ಕೊನೆಯ ಮೆಟ್ರೋ ರೈಲು ಹೊರಡಲಿದೆ. ಸಿಲ್ಕ್ ಇನ್‌ಸ್ಟಿಟ್ಯೂಟ್‌ನಿಂದ ರಾತ್ರಿ 12.20ಕ್ಕೆ ಕೊನೆಯ ರೈಲು ಸಂಚರಿಸಲಿದೆ.

ಹಳದಿ ಮಾರ್ಗ: ಆರ್‌.ವಿ. ರಸ್ತೆಯಿಂದ ರಾತ್ರಿ 1.15ಕ್ಕೆ ಕೊನೆಯ ರೈಲು ಹೊರಡಲಿದೆ. ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದಿಂದ ರಾತ್ರಿ 11.55ಕ್ಕೆ ಕೊನೆಯ ರೈಲು ಹೊರಡಲಿದೆ.

ಇನ್ನು ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ ಕೊನೆಯ ಸಂಪರ್ಕ ರೈಲು ರಾತ್ರಿ 12.55ಕ್ಕೆ ಹೊರಡಲಿದೆ.

ಟಿಕೆಟ್ ಕೌಂಟರ್‌ಗಳಲ್ಲಿ ಜನದಟ್ಟಣೆ ತಪ್ಪಿಸಲು ಪ್ರಯಾಣಿಕರು ಕ್ಯೂಆರ್ ಟಿಕೆಟ್, ಸ್ಮಾರ್ಟ್ ಕಾರ್ಡ್ ಅಥವಾ ಎನ್‌ಸಿಎಂಸಿ ಕಾರ್ಡ್ ಬಳಸುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ. ಸುಗಮ ಸಂಚಾರಕ್ಕಾಗಿ ಮೆಟ್ರೋ ಹಾಗೂ ಭದ್ರತಾ ಸಿಬ್ಬಂದಿಯೊಂದಿಗೆ ಪ್ರಯಾಣಿಕರು ಸಹಕರಿಸುವಂತೆಯೂ ಸೂಚಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img