HomeGadag Newsಯೋಗವನ್ನು ಬದುಕಿನ ಭಾಗವಾಗಿ ಮಾಡಿಕೊಳ್ಳಿ

ಯೋಗವನ್ನು ಬದುಕಿನ ಭಾಗವಾಗಿ ಮಾಡಿಕೊಳ್ಳಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರೋಗದಿಂದ ದೂರವಿರಬೇಕು ಎಂದರೆ ಯೋಗಕ್ಕೆ ಹತ್ತಿರ ಆಗಬೇಕು. ಔಷಧರಹಿತ ಜೀವನಕ್ಕಾಗಿ ನಿತ್ಯದಲ್ಲಿ ಯೋಗ ರೂಢಿಸಿಕೊಳ್ಳಬೇಕು ಎಂದು ಗದುಗಿನ ಶಿವಾನಂದ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಯೋಗಾಚಾರ್ಯ ಡಾ. ಶರಣಬಸಯ್ಯ ಹಿರೇಮಠ ಹೇಳಿದರು.

ಅವರು ಪಟ್ಟಣದ ನಿತ್ಯ ಯೋಗ ಭವ ನಿರೋಗ ಯೋಗ ಸಮಿತಿ, ಆರ್‌ಎಸ್‌ಎಸ್, ಶೈನ್ ಕರಾಟೆ ಅಸೋಸಿಯೇಷನ್ ಮತ್ತು ಬಿಸಿ ಎನ್ ಸ್ಪೆಕ್ಟ್ರಮ್ ಶಾಲೆಯಿಂದ ಶಾಲಾವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಯೋಗ ದಿನಾಚರಣೆಯಲ್ಲಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ವೈದ್ಯರೂ ಸಹಿತ ಯೋಗವನ್ನು ಪ್ರೀತಿಸಿ ಪ್ರೋತ್ಸಾಹಿಸುತ್ತಿದ್ದಾರೆ. ಪ್ರತಿಯೊಬ್ಬ ವೈದ್ಯರು ಯೋಗಕ್ಕೆ ಮೊರೆ ಹೋಗುತ್ತಿದ್ದಾರೆ. ವೈದ್ಯರೇ ಯೋಗವನ್ನು ಪ್ರೀತಿಸುತ್ತಿರುವುದು ಯೋಗದ ಶ್ರೇಷ್ಠತೆಗೆ ಸಾಕ್ಷಿಯಯಾಗಿದೆ. ಭಾರತ ವಿಶ್ವಗುರುವಾಗಿ ಸ್ಥಾನಕ್ಕೆ ತಲುಪುತ್ತಿದೆ ಎಂದರೆ ಯೋಗ ಮುಖ್ಯ ಕಾರಣ. ಯೋಗ ಗುರುಗಳಿಗೆ ವಿದೇಶದಲ್ಲಿ ಹೆಚ್ಚಿನ ಗೌರವ ಸಲ್ಲುತ್ತದೆ. ಆದ್ದರಿಂದ ಯೋಗವನ್ನು ಬದುಕಿನ ಭಾಗವಾಗಿ ಮಾಡಿಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನ ಬಿಸಿಎನ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಲೋಹಿತ ನೆಲವಿಗಿ ವಹಿಸಿದ್ದರು. ಅತಿಥಿಗಳಾಗಿ ಉಮೇಶ ಮಡಿವಾಳರ, ಡಾ. ಶ್ರೀಕಾಂತ ಬೆಳವಿಗಿ, ನಾಗರಾಜ ಯಂಡಿಗೇರಿ, ವೀಣಾ ಹತ್ತಿಕಾಳ, ಶಶಿಕಲಾ ವಡಕಣ್ಣವರ, ರೂಪಾ ಸಂತಿ, ಉಳವೆಪ್ಪ ಚೆಕ್ಕಿ, ಪ್ರಕಾಶ ವಡಕಣ್ಣವರ, ಮಲ್ಲಮ್ಮ ಹಂಚಿನಾಳ, ವೀಣಾ ಜಾಧವ, ಅಕ್ಕಾಮಹಾದೇವಿ ಕಳಸದ, ಜಯಶ್ರೀ ಹೊಸಮನಿ, ಮೈತ್ರಾದೇವಿ ಹಿರೇಮಠ, ಸಂತೋಷ ಸರ್ವದೆ, ನಂದಿನಿ ಮಾಳವಾಡ ಇದ್ದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img