ದೇಶದ ಪ್ರಮುಖ ಭದ್ರತಾ ಪಡೆಗಳಲ್ಲಿ ಒಂದಾದ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಕಾನ್ಸ್‌ಟೇಬಲ್ (ತಾಂತ್ರಿಕ ಮತ್ತು ಟ್ರೇಡ್ಸ್‌ಮನ್) ಹುದ್ದೆಗಳ ಭರ್ತಿಗಾಗಿ ಬೃಹತ್ ನೇಮಕಾತಿ ಅಭಿಯಾನವನ್ನು ಆರಂಭಿಸಿದೆ.
ಒಟ್ಟು 9,175 ಹುದ್ದೆಗಳು ಖಾಲಿ ಇದ್ದು, ಇದರಲ್ಲಿ 9,096 ಹುದ್ದೆಗಳು ಪುರುಷ ಅಭ್ಯರ್ಥಿಗಳಿಗೆ ಹಾಗೂ 79 ಹುದ್ದೆಗಳು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾಗಿವೆ.
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಏಪ್ರಿಲ್ 20ರಿಂದ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು CRPF ಅಧಿಕೃತ ವೆಬ್‌ಸೈಟ್ rect.crpf.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮೇ 19 ಕೊನೆಯ ದಿನಾಂಕವಾಗಿದ್ದು, ಕೊನೆಯ ಕ್ಷಣದ ತೊಂದರೆಗಳನ್ನು ತಪ್ಪಿಸಲು ಶೀಘ್ರದಲ್ಲೇ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಅರ್ಹತೆ ವಿವರಗಳ ಪ್ರಕಾರ ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ (SSLC) ಉತ್ತೀರ್ಣರಾಗಿರಬೇಕು. ಹುದ್ದೆಗೆ ಅನುಗುಣವಾಗಿ ಸಂಬಂಧಿತ ಕ್ಷೇತ್ರದಲ್ಲಿ ಐಟಿಐ (ITI) ಪ್ರಮಾಣಪತ್ರ ಅಥವಾ ಅಗತ್ಯ ಕೌಶಲ್ಯ ಹೊಂದಿರಬೇಕು. ಚಾಲಕ ಹುದ್ದೆಗೆ ಭಾರಿ ಮೋಟಾರ್ ವಾಹನ ಚಾಲನಾ ಪರವಾನಗಿ (HMV License) ಕಡ್ಡಾಯವಾಗಿದ್ದು, ಕೆಲವು ತಾಂತ್ರಿಕ ಹುದ್ದೆಗಳಿಗೆ ಅನುಭವವೂ ಅಗತ್ಯವಿದೆ.
ವಯೋಮಿತಿಯಂತೆ ಚಾಲಕ ಹುದ್ದೆಗೆ 21 ರಿಂದ 27 ವರ್ಷ, ಇತರೆ ಟ್ರೇಡ್ಸ್‌ಮನ್ ಹುದ್ದೆಗಳಿಗೆ 18 ರಿಂದ 23 ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿ ವರ್ಗಗಳಿಗೆ ನಿಯಮಾನುಸಾರ ವಯೋಸಡಿಲಿಕೆ ಲಭ್ಯವಿದೆ.
ಆಯ್ಕೆ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಹಲವು ಹಂತಗಳನ್ನು ಎದುರಿಸಬೇಕು. ಮೊದಲಿಗೆ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ, ನಂತರ ದೈಹಿಕ ಪರೀಕ್ಷೆ, ತದನಂತರ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ. ಅಂತಿಮವಾಗಿ ದಾಖಲೆ ಪರಿಶೀಲನೆ ಹಾಗೂ ವೈದ್ಯಕೀಯ ತಪಾಸಣೆ ನಂತರ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.
ವೇತನ ಶ್ರೇಣಿಯಂತೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ₹21,700 ರಿಂದ ₹69,100 (ಪೇ ಲೆವೆಲ್-3) ವೇತನ ಹಾಗೂ ಸರ್ಕಾರದ ಇತರ ಭತ್ಯೆಗಳು ಲಭ್ಯವಾಗಲಿವೆ.



