ಮುಂಬೈ: ಬ್ಯಾಂಕಾಕ್‌ನಿಂದ ಭಾರತಕ್ಕೆ ಮಾದಕ ವಸ್ತು ಕಳ್ಳಸಾಗಣೆ ಯತ್ನ ನಡೆದಿರುವ ಪ್ರಕರಣವನ್ನು ಮುಂಬೈ ಕಸ್ಟಮ್ಸ್ ಅಧಿಕಾರಿಗಳು ಭೇದಿಸಿದ್ದು, ಮಾಡೆಲ್ ಹರ್ಷ ಸನ್ನಿ ಅವರನ್ನು ಬಂಧಿಸಿದ್ದಾರೆ. ಅವರ ಲಗೇಜ್‌ನಿಂದ ಸುಮಾರು 12 ಕೋಟಿ ರೂಪಾಯಿ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಜೂನ್ 10ರ ರಾತ್ರಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಹರ್ಷ ಸನ್ನಿ ಅವರ ಲಗೇಜ್ ಅನ್ನು ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದರು. ಪರಿಶೀಲನೆ ವೇಳೆ ಟ್ರಾಲಿ ಬ್ಯಾಗ್‌ನೊಳಗೆ ಅಡಗಿಸಿಟ್ಟಿದ್ದ 12 ವ್ಯಾಕ್ಯೂಮ್ ಸೀಲ್ಡ್ ಪ್ಯಾಕೆಟ್‌ಗಳು ಪತ್ತೆಯಾಗಿದ್ದು, ಪರೀಕ್ಷೆಯಲ್ಲಿ ಅವು ಗಾಂಜಾ ಎಂಬುದು ದೃಢಪಟ್ಟಿದೆ.
ಕಸ್ಟಮ್ಸ್ ಅಧಿಕಾರಿಗಳು ತಕ್ಷಣವೇ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಹರ್ಷ ಸನ್ನಿಯನ್ನು ಬಂಧಿಸಿದರು. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಹರ್ಷ ಸನ್ನಿ, ಬ್ಯಾಂಕಾಕ್‌ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬರು ಬ್ಯಾಗ್ ಭಾರತಕ್ಕೆ ತಲುಪಿಸುವಂತೆ ಕೇಳಿದ್ದರು. ಅದರೊಳಗೆ ಮಾದಕ ವಸ್ತುಗಳಿವೆ ಎಂಬ ಮಾಹಿತಿ ತನಗಿರಲಿಲ್ಲ ಎಂದು ಹೇಳಿದ್ದಾರೆ.
ಸದ್ಯ ಕಸ್ಟಮ್ಸ್ ಹಾಗೂ ತನಿಖಾ ಸಂಸ್ಥೆಗಳು ಈ ಕಳ್ಳಸಾಗಣೆ ಜಾಲದ ಹಿಂದೆ ಕಾರ್ಯನಿರ್ವಹಿಸಿರುವ ಪ್ರಮುಖ ವ್ಯಕ್ತಿಗಳ ಪತ್ತೆಗೆ ತನಿಖೆ ಚುರುಕುಗೊಳಿಸಿವೆ.



