HomeEntertainment‘ದೃಶ್ಯಂ 3’ ಕಾರಿನ ನಂಬರ್ ವಿವಾದ: ಚಿತ್ರತಂಡದ ವಿರುದ್ಧ ರೈತರಿಂದ ದೂರು

‘ದೃಶ್ಯಂ 3’ ಕಾರಿನ ನಂಬರ್ ವಿವಾದ: ಚಿತ್ರತಂಡದ ವಿರುದ್ಧ ರೈತರಿಂದ ದೂರು

For Dai;y Updates Join Our whatsapp Group

ಮೋಹನ್‌ಲಾಲ್ ಅಭಿನಯದ ‘ದೃಶ್ಯಂ 3’ ಸಿನಿಮಾ ಅನಿರೀಕ್ಷಿತ ವಿವಾದಕ್ಕೆ ಗುರಿಯಾಗಿದೆ. ಚಿತ್ರದಲ್ಲಿ ಬಳಸಿರುವ ವಾಹನದ ನೋಂದಣಿ ಸಂಖ್ಯೆ ತನ್ನ ಖಾಸಗಿ ಕಾರಿನದ್ದೇ ಎಂದು ಆರೋಪಿಸಿರುವ ಇಡುಕ್ಕಿ ಜಿಲ್ಲೆಯ ರೈತ ಆರ್.ಡಿ. ರಾಜೀವ್, ಚಿತ್ರದ ನಿರ್ಮಾಪಕ ಆಂಟೋನಿ ಪೆರುಂಬಾವೂರ್ ಮತ್ತು ನಿರ್ದೇಶಕ ಜೀತು ಜೋಸೆಫ್ ವಿರುದ್ಧ ಮುನ್ನಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಚಿತ್ರದಲ್ಲಿನ ಜಾರ್ಜ್‌ಕುಟ್ಟಿ ಪಾತ್ರ ಬಳಸುವ ವಾಹನಕ್ಕೆ ‘KL 69 D 2772’ ನೋಂದಣಿ ಸಂಖ್ಯೆ ಪ್ರದರ್ಶಿಸಲಾಗಿದೆ. ಇದೇ ಸಂಖ್ಯೆ ತಮ್ಮ ಹೆಸರಿನಲ್ಲಿರುವ ಮಹೀಂದ್ರಾ ಸ್ಕಾರ್ಪಿಯೋ ವಾಹನದ್ದಾಗಿದೆ ಎಂದು ರಾಜೀವ್ ತಿಳಿಸಿದ್ದಾರೆ. ಸ್ನೇಹಿತರು ಮಾಹಿತಿ ನೀಡಿದ ಬಳಿಕ ಸಿನಿಮಾ ವೀಕ್ಷಿಸಿದ ಅವರು, ನಂಬರ್ ಬಳಕೆ ದೃಢಪಟ್ಟ ಹಿನ್ನೆಲೆಯಲ್ಲಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ಸಿನಿಮಾ ಯಶಸ್ಸಿನ ನಂತರ ಸಾರ್ವಜನಿಕರು ತಮ್ಮ ವಾಹನವನ್ನು ಗುರುತಿಸಿ ಪ್ರಶ್ನೆ ಮಾಡುತ್ತಿರುವುದರಿಂದ ಮಾನಸಿಕ ಕಿರಿಕಿರಿ ಉಂಟಾಗಿದೆ ಎಂದು ರಾಜೀವ್ ದೂರಿದ್ದಾರೆ. ಅಲ್ಲದೆ, ಕ್ರಿಮಿನಲ್ ಕಥಾಹಂದರ ಹೊಂದಿರುವ ಚಿತ್ರದೊಂದಿಗೆ ತಮ್ಮ ವಾಹನದ ಸಂಖ್ಯೆ ಸಂಪರ್ಕ ಹೊಂದಿರುವುದು ಭವಿಷ್ಯದಲ್ಲಿ ಅನಗತ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.

ರಾಜೀವ್ ತಮ್ಮ ವಾಹನದ ಮೂಲ ದಾಖಲೆಗಳನ್ನು ಪೊಲೀಸರಿಗೆ ಸಲ್ಲಿಸಿದ್ದು, ಚಿತ್ರತಂಡದಿಂದ ಸಾರ್ವಜನಿಕ ಕ್ಷಮೆಯಾಚನೆ, ವಿವಾದಿತ ದೃಶ್ಯಗಳ ತೆರವು ಹಾಗೂ ಸಮಸ್ಯೆ ಬಗೆಹರಿಯುವವರೆಗೆ ಚಿತ್ರದ ಪ್ರದರ್ಶನ ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ದಾರೆ. ಪ್ರಕರಣದ ಕುರಿತು ಮುನ್ನಾರ್ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img