ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಜೋರಾಗುತ್ತಿದ್ದು ಸಿಎಂ ವರ್ಸಸ್ ಡಿಸಿಎಂ ಫೈಟ್ ನಡುವೆ 3ನೇ ಪವರ್ ಸೆಂಟರ್ ಮತ್ತೆ ಸಕ್ರಿಯಗೊಂಡಿದ್ದು ಮತ್ತೆ ದಲಿತ ಸಿಎಂ ಕೂಗು ಜೋರಾಗಿದೆ. ಗೃಹ ಸಚಿವ ಪರಮೇಶ್ವರ್ ನಾನು ಸಿಎಂ ಸ್ಥಾನದ ಆಕಾಂಕ್ಷಿ ಅಂತ ನೇರವಾಗಿ, ಬಹಿರಂಗವಾಗಿಯೇ ಹೇಳಿದ್ದಾರೆ. ಈ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೇ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,
ಜಿ.ಪರಮೇಶ್ವರ್ ಹಿಂದೆ ಡಿಸಿಎಂ ಆಗಿದ್ದವರು. ಕೆಪಿಸಿಸಿ ಅಧ್ಯಕ್ಷರಾಗಿ ದೀರ್ಘಕಾಲ ಇದ್ದವರು. ಪಕ್ಷದಲ್ಲಿ ಅರ್ಹತೆ ಇರುವವರು ಬಹಳ ಇದ್ದಾರೆ. ಬಿಜೆಪಿ ಕೇಳಿ ಆಡಳಿತ ಮಾಡಲು ಆಗುತ್ತಾ? ಅಲ್ಲಿ ಸಮರ್ಥ ವಿಪಕ್ಷ ನಾಯಕರಿದ್ದಾರಾ?. ವಿಜಯೇಂದ್ರ ವಿರುದ್ದ ಅಶೋಕ್ ಅವರನ್ನು ಚೂ ಬಿಟ್ಟಿದ್ದಾರೆ. ಅವರ ಔಟ್ ಸೈಡ್ ಸಪೋರ್ಟ್ ನಮಗೆ ಯಾಕೆ ಎಂದು ಟಾಂಗ್ ಕೊಟ್ಟರು.
ಇನ್ನೂ ಪವರ್ ಶೇರಿಂಗ್ ವಿಚಾರವಾಗಿ ಮಾತನಾಡಿ, ಅವರು ಇದ್ದವರು ಮೂರ್ನಾಲ್ಕು ಜನ. ಆಗ ಏನು ಮಾತನಾಡಿದ್ದಾರೋ ಗೊತ್ತಿಲ್ಲ? ಸಿಎಂ, ಡಿಸಿಎಂ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದಾರೆ. ವರಿಷ್ಠರ ಅಂಗಳದಲ್ಲೇ ಗೊಂದಲ ಬಗೆಹರಿಯಬೇಕಲ್ವಾ ಎಂದರು.



