HomeAgricultureಗಿಡ-ಮರ, ಪರಿಸರವನ್ನೇ ತಮ್ಮ ಮಕ್ಕಳಂತೆ ಕಂಡ ಪದ್ಮಶ್ರೀ ತುಳಸಿ ಗೌಡ

ಗಿಡ-ಮರ, ಪರಿಸರವನ್ನೇ ತಮ್ಮ ಮಕ್ಕಳಂತೆ ಕಂಡ ಪದ್ಮಶ್ರೀ ತುಳಸಿ ಗೌಡ

For Dai;y Updates Join Our whatsapp Group

Spread the love

ಬೀಜಗಳನ್ನು ಸಂಗ್ರಹಿಸಿ, ಸಸಿ ಮಾಡಿ ನೆಟ್ಟು ಬೆಳಸುವದರಲ್ಲಿಯೇ ಜೀವನದ ಸಾರ್ಥಕತೆಯನ್ನು ಕಂಡ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ವೃಕ್ಷಮಾತೆ ತುಳಸಿಗೌಡ ಇನ್ನು ನೆನಪು ಮಾತ್ರ. ತುಳಸಿಗೌಡರು 1938ರಲ್ಲಿ ಹೊನ್ನಾಳ್ಳಿ ಗ್ರಾಮದ ಹಾಲಕ್ಕಿ ಬಡ ಬುಡಕಟ್ಟು ಕುಟುಂಬದಲ್ಲಿ ಜನಿಸಿದರು. ಬಡತನದ ಕುಟುಂಬವಾದ್ದರಿAದ ಮನೆಯನ್ನು ನಡೆಸಲು ಬಾಲ್ಯದಲ್ಲಿಯೇ ತಾಯಿಯೊಂದಿಗೆ ಕೆಲಸಕ್ಕೆ ಹೋಗಬೇಕಾಯಿತು. ಇದರಿಂದ ಶಿಕ್ಷಣದಿಂದ ವಂಚಿತರಾದರು. ಹೀಗೆ ಬಾಲ್ಯದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದ ಇವರು ೨೫ನೇ ವಯಸ್ಸಿನಲ್ಲಿ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಸಸಿಗಳನ್ನು ಪೋಷಿಸುವ ಕೆಲಸಕ್ಕೆ ಸೇರಿದರು. ತದನಂತರ ಅಲ್ಲಿನ ಗಿಡಗೆಳೊಂದಿಗೆ ವಿಶೇಷವಾದ ಕಾಳಜಿಯನ್ನು ಬೆಳಸಿಕೊಂಡರು. ಅವುಗಳನ್ನು ಮಕ್ಕಳಂತೆ ಸಾಕತೊಡಗಿದರು. ಹೀಗೆ ಪರಿಸರವೇ ಅವರಿಗೆ ಕುಟುಂಬವಾಯಿತು. ತಮ್ಮ 30 ವರ್ಷಗಳ ಸೇವಾ ಅವಧಿಯಲ್ಲಿ ಲಕ್ಷಾಂತರ ಗಿಡಗಳನ್ನು ನೆಟ್ಟು ಬೆಳಸಿದ ಕೀರ್ತಿ ತುಳಸಿಗೌಡ ಅವರದು.

ಇವರು ಯಾವದೇ ಶಿಕ್ಷಣವನ್ನು ಪಡೆಯದೇ ಇದ್ದರೂ, ಇವರ ಜೀವನವೇ ಇಂದು ಪಠ್ಯಪಾಠವಾಗಿದೆ. ಸರಕಾರಗಳು, ಅನೇಕ ಸಂಘ-ಸAಸ್ಥೆಗಳು ಮತ್ತು ಕಂಪನಿಗಳು ಪ್ರಕೃತಿಯನ್ನು ಸಂರಕ್ಷಿಸುವಲ್ಲಿ ನಿರತರಾಗಿದ್ದ ತುಳಸಿಗೌಡರಿಗೆ ಅನೇಕ ಪ್ರಶಸ್ತಿ-ಪುರಸ್ಕಾರಗಳನ್ನ ನೀಡಿ ಗೌರವಿಸಿವೆ.

ಪ್ರಮುಖವಾಗಿ ವಿಷಾದವೆನುಸುವ ಅಂಶವೆAದರೆ, ಇಂದಿನ ಯುವ ಪೀಳಿಗೆಗೆ ಹೆಚ್ಚಾಗಿ ಇವರ ಬಗ್ಗೆ ಮಾಹಿತಿಯೇ ಇಲ್ಲ! ನಾವು ಸಮಾಜಕ್ಕಾಗಿ ಬದುಕುತ್ತಿರುವ ಅನೇಕ ವ್ಯೆಕ್ತಿಗಳನ್ನು ತಿರಸ್ಕಾರ ಭಾವನೆಯಿಂದ ನೋಡುತ್ತಿದ್ದೇವೆ. ನಮಗೆ ಜೈಲಿಗೆ ಹೋಗಿಬರುವರು, ಸೋಶಿಯಲ್ ಮೀಡಿಯಾಗಳಲ್ಲಿ ರೀಲ್ಸ್ ಮಾಡುವವರು, ಭ್ರಷ್ಟ ರಾಜಕಾರಣಿಗಳು, ಸಿನಿಮಾ ತಾರೆಯರನ್ನು ಆದರ್ಶ ವ್ಯಕ್ತಿಗಳಾಗಿ ಕಾಣುತ್ತಿದ್ದೇವೆ. ಆದರೆ ನಮಗೆ ನಿಜವಾಗಿ ಆದರ್ಶವಾಗಬೇಕಾದವರು ಸಮಾಜಕ್ಕಾಗಿ ತಮ್ಮ ಸ್ವಂತ ಜೀವನವನ್ನು ಮುಡಿಪಾಗಿ ಇಟ್ಟವರು. ಇಂತಹ ವ್ಯಕ್ತಿಗಳಿಂದಲೇ ನಮ್ಮ ಸಮಾಜವು ಉತ್ತಮ ರೀತಿಯಲ್ಲಿದೆ. ನಾವು ಇವರ ವಿಚಾರಗಳನ್ನು ತಿಳಿಯಬೇಕಾಗಿದೆ ಮತ್ತು ಅನುಸರಿಸಬೇಕಾಗಿದೆ.

ಪದ್ಮಶ್ರೀ ತುಳಸಿಗೌಡರೇ ಹೇಳುವಂತೆ ಪಕೃತಿಯನ್ನು ರಕ್ಷಿಸಿದಾಗಲೇ ಪ್ರಕೃತಿ ನಮ್ಮನ್ನ ರಕ್ಷಿಸುತ್ತದೆ. ಈ ಮಾತು ಅಕ್ಷರಶಃ ಸತ್ಯ. ಇಂದು ನಾವು ಪ್ರಕೃತಿಯನ್ನು ತುಂಬಾ ನಿರ್ಲಕ್ಷಿಸುತ್ತಿದ್ದೇವೆ. ಜೊತೆಗೆ ಅದರ ಪರಿಣಾಮಗಳನ್ನು ಸಹ ಅನುಭವಿಸುತ್ತಿದ್ದೇವೆ. ಆದರೆ, ಇದು ಹೀಗೆಯೇ ಮುಂದುವರೆವರೆ ನಮ್ಮ ಅವನತಿಯನ್ನು ನಾವೇ ತಂದುಕೊAಡತೆ ಆಗುತ್ತದೆ. ನಾವು ನಮ್ಮ ಮಾರ್ಗವನ್ನು, ಯೋಚನೆಯನ್ನು ಬದಲಾಯಿಸಬೇಕಾಗಿದೆ.

ಒಬ್ಬ ವ್ಯಕ್ತಿ ಪ್ರತಿ ವರ್ಷ ಕನಿಷ್ಠ 5 ಗಿಡಗಳನ್ನು ನೆಡಬೇಕು. ಸ್ನೇಹಿತರಿಗೆ, ಕುಟುಂಬದವರಿಗೆ  ಗಿಡಗಳನ್ನ ಕೊಡುಗೆಯಾಗಿ ನೀಡುವವರ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಸ್ವಾರ್ಥ ತುಂಬಿದ ಈ ಸಮಾಜದಲ್ಲಿ ಇಂತಹ ಅನೇಕ ನಿಸ್ವಾರ್ಥ ಜೀವಿಗಳು ಇರುತ್ತವಾ ಎಂದು ಆಶ್ಚರ್ಯಪಡುವಂತೆ ತಮ್ಮನ್ನು ತಾವು ಸಮಾಜ ಸೇವೆಗೆ ಸಮರ್ಪಿಸಿಕೊಂಡಿದ್ದಾರೆ. ಇಂಥವರ ಜೀವನದಿಂದ ಸ್ಫೂರ್ತಿ ಪಡೆದು ಅವರಲ್ಲಿರುವ ಕೆಲ ಉತ್ತಮ ಗುಣಗಳನ್ನಾದರೂ ಎರವಲು ಪಡೆದರೆ ಅದೇ ನಾವು ಅವರಿಗೆ ಸಲ್ಲಿಸುವ ಗೌರವ.

ಬನ್ನಿ, ಪದ್ಮಶ್ರೀ ತುಳಸಿಗೌಡರನ್ನು ನೆನೆಯೋಣ, ಗೌರವಿಸೋಣ.

– ರವಿಕುಮಾರ್ ಚಂ.ಹೊಂಬಾಳಿ.

ಗದಗ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!