Home Blog Page 130

ಈ ಪ್ರೀತಿಯನ್ನು ನಾನು ಜೀವನಪೂರ್ತಿ ಮರೆಯಲ್ಲ: ಬಿಗ್‌ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿ

ಬಿಗ್ ಬಾಸ್ ಕನ್ನಡ ಸೀಸನ್ 12 ಮುಗಿದ ಬಳಿಕವೂ ರಕ್ಷಿತಾ ಶೆಟ್ಟಿ ಹೆಸರು ಟ್ರೆಂಡ್ ಆಗುತ್ತಿದೆ. ರನ್ನರ್ ಅಪ್ ಆಗಿದ್ದರೂ ಅಭಿಮಾನಿಗಳ ಹೃದಯದಲ್ಲಿ ವಿನ್ನರ್ ಆಗಿರುವ ರಕ್ಷಿತಾ ಇದೀಗ ವಿಡಿಯೋ ಮೂಲಕ ಭಾವುಕ ಧನ್ಯವಾದ ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, “ನನ್ನನ್ನು ಮನೆಮಗಳಂತೆ ನೋಡಿದ್ದೀರಿ. ಇದಕ್ಕಿಂತ ದೊಡ್ಡ ಆಶೀರ್ವಾದ ಬೇರೆ ಏನು ಬೇಕಿಲ್ಲ” ಎಂದು ಹೇಳಿದ್ದಾರೆ. ಕರ್ನಾಟಕದ ಜನತೆ ನೀಡಿದ ಪ್ರೀತಿ ಹಾಗೂ ಬೆಂಬಲವೇ ನನ್ನ ಶಕ್ತಿಯಾಗಿದೆ ಎಂದು ಹೇಳಿದ್ದಾರೆ.

“ಬಿಗ್ ಬಾಸ್ ಮನೆಯೊಳಗೆ ಇರುವಾಗ ಜನರು ಇಷ್ಟು ಪ್ರೀತಿ ಕೊಡ್ತಿದ್ದಾರೆ ಅನ್ನೋದೇ ಗೊತ್ತಿರಲಿಲ್ಲ. ಹೊರಬಂದ ಮೇಲೆ ಕಾಮೆಂಟ್, ಮೆಸೇಜ್, ವೀಡಿಯೊ ನೋಡಿ ಅಚ್ಚರಿ ಆಯ್ತು. ಇದು ಕನಸಾ ಅಂತ ಅನಿಸ್ತು” ಎಂದು ಹೇಳಿದ್ದಾರೆ.

ತಮಗೆ ಬಂದ ವೋಟ್, ಸಮಯ, ಪ್ರೀತಿ ಎಲ್ಲಕ್ಕೂ ಧನ್ಯವಾದ ಹೇಳಿರುವ ರಕ್ಷಿತಾ, “ನನಗೋಸ್ಕರ ಇಷ್ಟು ಶ್ರಮಪಟ್ಟಿದ್ದೀರಾ, ನಿಮ್ಮ ಶ್ರಮವೂ ನನ್ನ ಶ್ರಮದಷ್ಟೇ ಇದೆ” ಎಂದು ಹೇಳಿದ್ದಾರೆ.

ಮುನ್ಸೂಚನೆಯಾಗಿ ನೆಗೆಟಿವ್ ಕಾಮೆಂಟ್, ಟ್ರೋಲ್ ಎದುರಿಸಿದ್ದ ರಕ್ಷಿತಾ, ಇದೀಗ “ಈಗ ಎಲ್ಲೆಡೆ ಪ್ರೀತಿ ಮಾತ್ರ ಕಾಣ್ತಿದೆ” ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಟ್ರೋಲ್ ಮೀಮ್ಸ್ ಮಾಡಿದವರು, ಯೂಟ್ಯೂಬರ್ಸ್, ಇನ್‌ಫ್ಲೂಯೆನ್ಸರ್ಸ್ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

“ನನ್ನ ಗೆಲುವಿಗೆ ಇಡೀ ಕರ್ನಾಟಕ ಕಾರಣ. ಈ ಪ್ರೀತಿಯನ್ನು ನಾನು ಜೀವನಪೂರ್ತಿ ಮರೆಯಲ್ಲ” ಎಂದು ಹೇಳುವ ಮೂಲಕ ಅಭಿಮಾನಿಗಳ ಮನವನ್ನು ಇನ್ನಷ್ಟು ಗೆದ್ದಿದ್ದಾರೆ.

ಬೀದರ್ ದಕ್ಷಿಣ ಕ್ಷೇತ್ರದಲ್ಲಿ ₹1 ಕೋಟಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

0

ಬೀದರ್: ಜಿಲ್ಲೆಯ ದಕ್ಷಿಣ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹೊಸ ಚೈತನ್ಯ ನೀಡುವ ಪ್ರಯತ್ನವಾಗಿ, ಗೋರನಳ್ಳಿ ಗ್ರಾಮದ ಶಿವಾಜಿನಗರ ಹಾಗೂ ತೋರಣ ಕಾಲೋನಿಯಲ್ಲಿ ₹1 ಕೋಟಿ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಶೈಲೇಂದ್ರ ಬೆಲ್ದಾಳೆ ಚಾಲನೆ ನೀಡಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಶಾಸಕತ್ವ ಅವಧಿಯಲ್ಲಿ ಅಭಿವೃದ್ಧಿಯೇ ಮೊದಲ ಆದ್ಯತೆ ಎಂದು ಪುನರುಚ್ಚರಿಸಿದರು. “ರಸ್ತೆ, ವಿದ್ಯುತ್, ನೀರು, ಶಿಕ್ಷಣ, ಆರೋಗ್ಯ ಸೇರಿದಂತೆ ಪ್ರತಿಯೊಂದು ಗ್ರಾಮದಲ್ಲೂ ಜನರ ಜೀವನಮಟ್ಟ ಸುಧಾರಣೆ ಆಗಬೇಕು ಎಂಬುದು ನನ್ನ ಗುರಿ” ಎಂದು ಹೇಳಿದರು.

ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಕ್ಷೇತ್ರದ ಜನರ ಅಗತ್ಯಗಳಿಗೆ ಸ್ಪಂದಿಸಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಉತ್ತಮ ರಸ್ತೆ ವ್ಯವಸ್ಥೆ, ನಿರಂತರ ವಿದ್ಯುತ್ ಪೂರೈಕೆ, ಶುದ್ಧ ಕುಡಿಯುವ ನೀರು, ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಜನರಿಗೆ ಸಿಗಬೇಕು ಎಂದು ಒತ್ತಾಯಿಸಿದರು.

ಕ್ಷೇತ್ರದ ಎಲ್ಲಾ ಹಳ್ಳಿಗಳಿಗೂ ಸರ್ಕಾರದಿಂದ ಹೆಚ್ಚಿನ ಅನುದಾನ ತರಲಾಗಿದ್ದು, ರಸ್ತೆ, ನೀರಾವರಿ ಯೋಜನೆ, ಶಾಲಾ ಕಟ್ಟಡ, ಸಮುದಾಯ ಭವನ, ಕಲ್ಯಾಣ ಮಂಟಪ ಹಾಗೂ ವಿದ್ಯುತ್ ಸೌಲಭ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

“ನನ್ನ ಸೇವೆ ಸಾರ್ವಜನಿಕರ ಕಲ್ಯಾಣಕ್ಕಾಗಿ. ಜನರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಬೇಕು, ಪರಿಹಾರ ನೀಡುವುದು ನನ್ನ ಹೊಣೆಗಾರಿಕೆ” ಎಂದು ಹೇಳಿದ ಶಾಸಕ, ಜನರ ಬೆಂಬಲ ಮತ್ತು ಸಹಕಾರದಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಚಿನ್ನ-ಬೆಳ್ಳಿ ಬೆಲೆ ಭಾರೀ ಏರಿಕೆ: 10 ಗ್ರಾಂ ಚಿನ್ನ 5,400 ರೂ., 1 ಕೆಜಿ ಬೆಳ್ಳಿ 15,000 ರೂ.!

0

ನವದೆಹಲಿ: ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಶುಕ್ರವಾರ ಹೊಸ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ರಾಜಕೀಯ ಅನಿಶ್ಚಿತತೆ ಮತ್ತು ದುರ್ಬಲವಾಗುತ್ತಿರುವ ಡಾಲರ್‌ನ ಪರಿಣಾಮವಾಗಿ ಇತ್ತೀಚಿನ ದಿನಗಳಲ್ಲಿ ಈ ಲೋಹಗಳ ಬೆಲೆಗಳಲ್ಲಿ ಏರಿಳಿತ ನಡೆದಿದೆ.

ಮುಂಬೈದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹5,400 ಏರಿಕೆಯಾಗುತ್ತ, ₹1,59,710ಕ್ಕೆ ತಲುಪಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂಗೆ ₹1,46,400ಕ್ಕೆ ವ್ಯಾಪಿಸಿದೆ. ಬೆಳ್ಳಿ 1 ಕೆಜಿಗೆ ₹15,000 ಹೆಚ್ಚಳ ಹೊಂದಿ ₹3,40,000ಕ್ಕೆ ತಲುಪಿದ್ದು, ಇದು ಹೊಸ ದಾಖಲೆವಾಗಿದೆ.

ಮಲ್ಟಿ-ಕಮಾಡಿಟಿ ಎಕ್ಸ್ಚೇಂಜ್ (MCX)ನಲ್ಲಿ, ಫೆಬ್ರವರಿ ಅವಧಿ ಮುಗಿದ ಚಿನ್ನದ ಫ್ಯೂಚರ್‌ಗಳು 10 ಗ್ರಾಂಗೆ ಶೇ. 1.19 ಹೆಚ್ಚಾಗಿ ₹1,58,194ಕ್ಕೆ ತಲುಪಿವೆ. ಮಾರ್ಚ್ ಅವಧಿ ಮುಗಿದ ಬೆಳ್ಳಿ ಫ್ಯೂಚರ್‌ಗಳು ಪ್ರತಿ ಕೆಜಿಗೆ ಶೇ. 2.59 ಹೆಚ್ಚಾಗಿ ₹3,35,760ಕ್ಕೆ ಏರಿಕೆಯಾಗಿವೆ.

COMEX ನಲ್ಲಿ, ಚಿನ್ನದ ಫ್ಯೂಚರ್‌ಗಳು ಪ್ರತಿ ಔನ್ಸ್ಗೆ $5,000.00 ಡಾಲರ್‌ನಿಂದ ಕೆಲವೇ ಪಾಯಿಂಟ್ ಹೆಚ್ಚಳದೊಂದಿಗೆ ಶೇ. 1ರಷ್ಟು ಏರಿಕೆಯಾಗಿದ್ದು, ಬೆಳ್ಳಿ ಫ್ಯೂಚರ್‌ಗಳು ಶೇ. 2.45 ಹೆಚ್ಚಳದೊಂದಿಗೆ ಪ್ರತಿ ಔನ್ಸ್ಗೆ $98.73 ಡಾಲರ್‌ಗೆ ತಲುಪಿದವು. ಈ ಬೆಲೆ ಏರಿಕೆ ಹೂಡಿಕೆದಾರರನ್ನು ಸುರಕ್ಷಿತ ಸ್ವತ್ತುಗಳತ್ತ ಮುಂದುಡಿಸುತ್ತದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ರಥಸಪ್ತಮಿಯ ಬಳಿಕ ಕಾಡ್ಗಿಚ್ಚು ಅಪಾಯ: ಅರಣ್ಯಾಧಿಕಾರಿಗಳಿಗೆ ಸಚಿವ ಈಶ್ವರ ಖಂಡ್ರೆ ಕಟ್ಟೆಚ್ಚರ ಸೂಚನೆ

0

ಬೆಂಗಳೂರು: ರಥಸಪ್ತಮಿಯ ನಂತರ ಬಿಸಿಲಿನ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಡ್ಗಿಚ್ಚಿನ ಅಪಾಯವೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಎಲ್ಲ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವೀಡಿಯೋ ಕಾನ್ಫರೆನ್ಸ್ ಮೂಲಕ ಅರಣ್ಯ ಹಾಗೂ ವನ್ಯಜೀವಿ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಕಾಡಿನ ಬೆಂಕಿಯಿಂದ ಅರಣ್ಯ ಸಂಪತ್ತು ನಾಶವಾಗದಂತೆ ಕಟ್ಟೆಚ್ಚರ ವಹಿಸುವಂತೆ ತಿಳಿಸಿದರು. ಡ್ರೋನ್ ಸೌಲಭ್ಯ ಇರುವ ಪ್ರದೇಶಗಳಲ್ಲಿ ಕ್ಯಾಮೆರಾ ಮೂಲಕ ನಿಗಾ ಇಡಬೇಕು. ಗಸ್ತು ಹೆಚ್ಚಿಸಿ, ಸೂಕ್ಷ್ಮ ಪ್ರದೇಶಗಳಲ್ಲಿ ಸಿಬ್ಬಂದಿ ಸದಾ ಎಚ್ಚರದಿಂದ ಇರಬೇಕೆಂದು ನಿರ್ದೇಶಿಸಿದರು.

ಬೇಸಿಗೆಯಲ್ಲಿ ವನ್ಯಜೀವಿಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದ ಅವರು, ಜಲಗುಂಡಿಗಳಿಗೆ ಸೌರ ಪಂಪ್‌ಗಳ ಮೂಲಕ ಕೊಳವೆ ಬಾವಿಯಿಂದ ನೀರು ಹರಿಸುವ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿ ವರ್ಷ ಶಿವರಾತ್ರಿ, ಯುಗಾದಿ ಹಾಗೂ ದೀಪಾವಳಿ ಸಂದರ್ಭಗಳಲ್ಲಿ ಮಾದಪ್ಪನ ಭಕ್ತರು ಅರಣ್ಯ ಮಾರ್ಗವಾಗಿ ಪಾದಯಾತ್ರೆ ಮೂಲಕ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುವುದು ರೂಢಿಯಾಗಿರುವುದನ್ನು ಉಲ್ಲೇಖಿಸಿದ ಸಚಿವರು, ಕಾಲುದಾರಿ ಹಾಗೂ ಮೆಟ್ಟಿಲು ಮಾರ್ಗಗಳಲ್ಲಿ ಡ್ರೋನ್ ಕ್ಯಾಮೆರಾ ಅಳವಡಿಸಿ ಸತತ ನಿಗಾ ಇಡುವಂತೆ ಸೂಚಿಸಿದರು. ಅಲ್ಲದೆ, ಅರಣ್ಯ ಸಿಬ್ಬಂದಿ, ಹೋಂಗಾರ್ಡ್ಸ್ ಹಾಗೂ ಸ್ಥಳೀಯ ಸಿಬ್ಬಂದಿಯನ್ನೊಳಗೊಂಡ ತಂಡಗಳನ್ನು ರಚಿಸಿ ಭಕ್ತರಿಗೆ ನೆರವು ನೀಡುವಂತೆ ಹೇಳಿದರು.

ಈ ಕಾರ್ಯಕ್ಕೆ ತಗಲುವ ವೆಚ್ಚವನ್ನು ಭರಿಸಲು ಮಲೆ ಮಹದೇಶ್ವರಸ್ವಾಮಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತಕ್ಕೆ ಪತ್ರ ಬರೆಯುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಭಕ್ತರು ಕಾವೇರಿ ನದಿ ದಾಟಿ ಹನೂರು ತಾಲೂಕಿನ ಬಸವನಕಣಕ್ಕೆ ಬಂದು, ಅಲ್ಲಿಂದ ಶಾಗ್ಯ, ಡಿ.ಎಂ. ಸಮುದ್ರ, ಎಲ್ಲೆಮಾಳ, ಮಲ್ಲಯ್ಯನಪುರ, ಕೌದಳ್ಳಿ, ವಡಕೆಹಳ್ಳ, ಕೋಣನಕೆರೆ ಹಾಗೂ ತಾಳುಬೆಟ್ಟ ಮಾರ್ಗವಾಗಿ ಪಾದಯಾತ್ರೆಯಲ್ಲಿ ಬೆಟ್ಟಕ್ಕೆ ತೆರಳುತ್ತಿರುವುದು ಅಪಾಯಕಾರಿಯಾಗಿದೆ ಎಂದು ಸಚಿವರು ಎಚ್ಚರಿಸಿದರು. ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದರಿಂದ ಭಕ್ತರ ಭಾವನೆಗೆ ಧಕ್ಕೆಯಾಗದಂತೆ ಅವರನ್ನು ಮನವೊಲಿಸುವ ಅಗತ್ಯವಿದೆ ಎಂದು ತಿಳಿಸಿದರು.

ರಾತ್ರಿ ವೇಳೆ ಕಾಡಿನ ಅಂಚು ಹಾಗೂ ಕಾಡಿನೊಳಗಿನ ವಸತಿ ಪ್ರದೇಶಗಳಲ್ಲಿ ತಂಗುವುದು ಅಪಾಯಕಾರಿಯಾಗಿದೆ ಎಂದು ತಿಳಿಸಿದ ಸಚಿವರು, ಇತ್ತೀಚೆಗೆ ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮದ ಪ್ರವೀಣ್ ಎಂಬ ಯುವಕ ಚಿರತೆ ದಾಳಿಯಿಂದ ಮೃತಪಟ್ಟಿರುವ ಘಟನೆ ಅತ್ಯಂತ ದುಃಖಕರವಾಗಿದೆ ಎಂದು ಹೇಳಿದರು.

ಹೀಗಾಗಿ ಭಕ್ತರು ಬಸ್ ಹಾಗೂ ಕಾರುಗಳಲ್ಲಿ ತೆರಳಿ ಮಾದಪ್ಪನ ದರ್ಶನ ಪಡೆಯುವಂತೆ ಮನವೊಲಿಸಲು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೊಳಗೊಂಡ ತಂಡ ರಚಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ಟಿಪ್ಪಣಿ ಕಳುಹಿಸಿರುವುದಾಗಿ ಸಚಿವರು ಮಾಹಿತಿ ನೀಡಿದರು.

ಕಲಬುರಗಿಯಲ್ಲಿ ಘೋರ ದುರಂತ: 2 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವವಿವಾಹಿತೆ ಆತ್ಮಹತ್ಯೆ!

0

ಕಲಬುರಗಿ: ಕಲಬುರಗಿಯಲ್ಲಿ ಘೋರ ದುರಂತ ಸಂಭವಿಸಿದ್ದು, ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಅನಸೂಯಾ ಆತ್ಮಹತ್ಯೆಗೆ ಮಾಡಿಕೊಂಡ ದುರ್ಧೈವಿಯಾಗಿದ್ದು,

ಕಲಬುರಗಿ ನಗರದ ಆಜಾದಪುರ್ ಬಡಾವಣೆಯ ನಿವಾಸಿಯಾಗಿದ್ದಾಳೆ. ಅತ್ತೆ ಮಗ ಅವಿನಾಶ್ ಜೊತೆ ಪ್ರೀತಿಸಿ ಹಿರಿಯರ ಸಮ್ಮುಖದಲ್ಲಿ  ಕಳೆದ ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು.

ಆದರೆ ಮದುವೆಯ ನಂತರ ಅನಸೂಯಾಗೆ ತಮ್ಮ ಮೂವರು ಸಹೋದರಿಯರು ಬೆಂಗಳೂರು ಹಾಗೂ ಮುಂಬೈ ಮುಂತಾದ ಮಹಾನಗರಗಳಲ್ಲಿ ವಾಸಿಸುತ್ತಿದ್ದು, ನಾನು ಮಾತ್ರ ಹಳ್ಳಿಯಲ್ಲಿ ಜೀವನ ನಡೆಸಬೇಕಾಗಿರುವುದರಿಂದ ಮಾನಸಿಕ ಅಸಮಾಧಾನ ಕಾಡುತ್ತಿತ್ತು ಎನ್ನಲಾಗಿದೆ. ಈ ವೇಳೆ ಪೋಷಕರು ಬುದ್ದಿಮಾತು ಹೇಳಿ ಕಳುಹಿಸಿದ್ದಾರೆ. ಆದರೆ, ಅನಸೂಯಾಗೆ ಇದೇ ಮಾನಸಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮದುವೆಗೆ ಮುನ್ನ ಅನಸೂಯಾ ಬೆಂಗಳೂರಿನಲ್ಲಿ ಒಂದು ವರ್ಷ ಉದ್ಯೋಗ ಮಾಡಿಕೊಂಡು ವಾಸವಾಗಿದ್ದರು. ಮದುವೆಯ ನಂತರ ಮತ್ತೆ ಮಹಾನಗರದಲ್ಲಿ ಜೀವನ ನಡೆಸಬೇಕೆಂಬ ಆಸೆ ಹೆಚ್ಚಾಗಿದ್ದು, ಅದೇ ಮಾನಸಿಕ ಒತ್ತಡಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಪ್ರೀತಿಸಿದ್ದ ಪತಿ ಅವಿನಾಶ್ ರನ್ನು ಬಿಟ್ಟು ದೂರ ಹೋಗಲು ಮನಸ್ಸಿಲ್ಲದೆ, ಕಲಬುರಗಿಯಲ್ಲೇ ಗಂಡನ ಮನೆಯಲ್ಲಿಯೇ ವಾಸ ಮುಂದುವರಿಸಿದ್ದರು.

ಈ ಮಾನಸಿಕ ಒತ್ತಡದ ನಡುವೆ, ನಿನ್ನೆ ಮಧ್ಯಾಹ್ನ ಗಂಡನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅನಸೂಯಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಮದರಕಲ್ ಗ್ರಾಮದಲ್ಲಿ ಭೀಕರ ಅಪಘಾತ: ಬಸ್ ಚಕ್ರದಡಿಗೆ ಸಿಲುಕಿ 4 ವರ್ಷದ ಮಗು ಸಾವು

0

ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಮದರಕಲ್ ಗ್ರಾಮದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 4 ವರ್ಷದ ಕಂದಮ್ಮ ಜೀವ ಕಳೆದುಕೊಂಡಿದೆ.

ಮೃತ ಬಾಲಕಿ ಗಬ್ಬೂರು ಗ್ರಾಮದ ವಿದ್ಯಾಶ್ರೀ (4) ಎಂದು ಗುರುತಿಸಲಾಗಿದೆ. ಗೂಗಲ್‌ನಿಂದ ದೇವದುರ್ಗಕ್ಕೆ ತೆರಳುತ್ತಿದ್ದ ಕೆಕೆಆರ್‌ಟಿಸಿ ಬಸ್, ಮದರಕಲ್ ಗ್ರಾಮ ಬಳಿ ಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ರಸ್ತೆ ದಾಟಲು ಮುಂದಾದ ಮಗು ಬಸ್ ಬರುವುದನ್ನು ಗಮನಿಸದೆ ಅಚಾನಕ್ಕಾಗಿ ಮುಂದೆ ಬಂದಿದೆ. ಈ ವೇಳೆ ನಿಯಂತ್ರಣ ತಪ್ಪಿದ ಬಸ್ ಚಕ್ರದಡಿಗೆ ಮಗು ಸಿಲುಕಿ ಗಂಭೀರ ಗಾಯಗೊಂಡಿದ್ದು, ಸ್ಥಳದಲ್ಲೇ ಮೃತಪಟ್ಟಿದೆ.

ಘಟನೆಯ ನಂತರ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬಸ್ಥರ ರೋದನ ಕಣ್ಣೀರು ತರಿಸಿದೆ. ಪ್ರಕರಣ ಸಂಬಂಧ ಗಬ್ಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ರಸ್ತೆ ದಾಟುವ ವೇಳೆ ದುರಂತ: KSRTC ಬಸ್ ಹರಿದು 4 ವರ್ಷದ ಕಂದಮ್ಮ ಸಾವು!

0

ರಾಯಚೂರು: KSRTC ಬಸ್ ಹರಿದು ನಾಲ್ಕು ವರ್ಷದ ಕಂದಮ್ಮ ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮದರಕಲ್ ಗ್ರಾಮದಲ್ಲಿ ಸಂಭವಿಸಿದೆ.

ಗಬ್ಬೂರು ಗ್ರಾಮದ ವಿದ್ಯಾಶ್ರೀ (4) ಮೃತ ಬಾಲಕಿ. ಗೂಗಲ್‌ನಿಂದ ದೇವದುರ್ಗದ ಕಡೆಗೆ ಸಾಗುತ್ತಿದ್ದ ಸಾರಿಗೆ ಬಸ್, ಅಚಾನಕ್ ರಸ್ತೆಗೆ ಅಡ್ಡ ಬಂದ ಮಗುವಿನ ಮೇಲೆ ಹರಿದ ಪರಿಣಾಮ ಈ ದುರ್ಘಟನೆ ನಡೆದಿದೆ.

ಬಸ್ ಬರುವುದನ್ನು ಗಮನಿಸದೆ ಮಗು ರಸ್ತೆ ದಾಟಲು ಮುಂದಾದಾಗ ಅಪಘಾತ ಸಂಭವಿಸಿದ್ದು, ತಕ್ಷಣವೇ ಬಸ್ಸಿನ ಚಕ್ರದಡಿಗೆ ಸಿಲುಕಿದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎನ್ನಲಾಗಿದೆ.

ಈ ಘಟನೆ ಸಂಬಂಧ ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತಿರುಚಂದೂರ್ ಪ್ರವಾಸದಲ್ಲಿ ನಾಪತ್ತೆಯಾದ ಕೋಲಾರದ ವ್ಯಕ್ತಿ: ಕುಟುಂಬಸ್ಥರಲ್ಲಿ ಗಂಭೀರ ಆತಂಕ

0

ಕೋಲಾರ: ಶಬರಿಮಲೆ ಯಾತ್ರೆಗಾಗಿ ಹೊರಟಿದ್ದ ಕೋಲಾರ ಜಿಲ್ಲೆಯ ವ್ಯಕ್ತಿಯೊಬ್ಬರು ತಮಿಳುನಾಡಿನಲ್ಲಿ ನಾಪತ್ತೆಯಾಗಿದ್ದು, ಕುಟುಂಬಸ್ಥರಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ. ಬಂಗಾರಪೇಟೆ ತಾಲೂಕಿನ ದೇವಗಾನಹಳ್ಳಿಯ ನಿವಾಸಿ ರವಿ (40) ಕಾಣೆಯಾದ ವ್ಯಕ್ತಿ.

ಮಂಗಳವಾರ ತಿರುಚಂದೂರ್ ಪ್ರವಾಸಕ್ಕೆ ತೆರಳಿದ್ದ ರವಿ, ಅಂದಿನಿಂದ ಕುಟುಂಬದವರ ಸಂಪರ್ಕಕ್ಕೆ ಲಭ್ಯವಾಗಿಲ್ಲ. ನಾಪತ್ತೆಯಾಗಿ 4 ದಿನಗಳು ಕಳೆದರೂ ಯಾವುದೇ ಸುಳಿವು ಸಿಕ್ಕಿಲ್ಲ ಎಂಬುದು ಕುಟುಂಬದ ನೋವನ್ನು ಮತ್ತಷ್ಟು ಹೆಚ್ಚಿಸಿದೆ.

ಈ ಸಂಬಂಧ ತಿರುಚಂದೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸ್ಥಳೀಯ ಪೊಲೀಸ್ ತಂಡಗಳು ಹಾಗೂ ಕುಟುಂಬಸ್ಥರು ವಿವಿಧ ಕಡೆಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

ರವಿಯ ಪತ್ತೆಗಾಗಿ ತೀವ್ರ ಪ್ರಯತ್ನ ನಡೆಯುತ್ತಿದ್ದು, ಯಾವುದೇ ಮಾಹಿತಿ ದೊರೆತರೆ ಪೊಲೀಸರಿಗೆ ತಿಳಿಸಲು ಕುಟುಂಬಸ್ಥರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಶಬರಿಮಲೆಯಿಂದ 900 ಕಿ.ಮೀ ಹಾರಾಟ: ಮರಳಿ ಗೂಡು ಸೇರಿದ ಪಾರಿವಾಳ

0

ಚಿತ್ರದುರ್ಗ:ಶಬರಿಮಲೆಯಲ್ಲಿಹಾರಿಬಿಟ್ಟ ಪಾರಿವಾಳವೊಂದು ಸುಮಾರು900 ಕಿಲೋಮೀಟರ್ ದೂರ ಕ್ರಮಿಸಿ, 21 ದಿನಗಳ ಬಳಿಕ ಮರಳಿ ತನ್ನ ಗೂಡಿಗೆ ಸೇರಿರುವ ಅಚ್ಚರಿಯ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ತಳವಾರಹಟ್ಟಿಯಲ್ಲಿ ಬೆಳಕಿಗೆ ಬಂದಿದೆ.

ಗ್ರಾಮದ ರಾಜು ಎಂಬವರು ಸಾಕಿದ್ದಮದಕರಿಎಂಬ ಪಾರಿವಾಳವನ್ನು ಶಬರಿಮಲೆಗೆ ತೆರಳಿದ್ದ ಮಾಲಾಧಾರಿಗೆ ನೀಡಿದ್ದರು. ಶಬರಿಮಲೆಯಲ್ಲಿ ಪಾರಿವಾಳವನ್ನು ಹಾರಿಬಿಡುವಂತೆ ಸೂಚಿಸಿದ್ದರು. ಅದರಂತೆ, ಡಿಸೆಂಬರ್ 31ರಂದು ಶಬರಿಮಲೆಯಲ್ಲಿ ಪಾರಿವಾಳವನ್ನು ಹಾರಿಬಿಡಲಾಗಿದ್ದು, ಜನವರಿ 21ರಂದು ಅದು ಮರಳಿ ತಳವಾರಹಟ್ಟಿಯಲ್ಲಿರುವ ತನ್ನ ಗೂಡಿಗೆ ಸೇರಿದೆ.

ಸುಮಾರು 900 ಕಿಲೋಮೀಟರ್ ದೂರವನ್ನು ಕ್ರಮಿಸಿ 21 ದಿನಗಳ ಬಳಿಕ ಮರಳಿ ಗೂಡಿಗೆ ಸೇರಿರುವ ಪಾರಿವಾಳದ ದಿಕ್ಕು ಪತ್ತೆ ಸಾಮರ್ಥ್ಯ, ತೀಕ್ಷ್ಣ ದೃಷ್ಟಿ ಮತ್ತು ನೆನಪಿನ ಶಕ್ತಿ ಗ್ರಾಮಸ್ಥರಲ್ಲಿ ಭಾರೀ ಅಚ್ಚರಿ ಮೂಡಿಸಿದೆ.

ಗದಗ ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಸ್ಥಳಕ್ಕೆ ಫ್ರಾನ್ಸ್ ಪ್ರವಾಸಿಗರ ಭೇಟಿ – ‘ಪ್ರಜ್ವಲ್ ಪ್ರಾಮಾಣಿಕತೆ ಮಿರಾಕಲ್’ ಎಂದ ವಿದೇಶಿಗರು

0

ಗದಗ: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಸಿಕ್ಕ ಸ್ಥಳಕ್ಕೆ ಇದೀಗ ವಿದೇಶಿಗರ ಗಮನ ಸೆಳೆಯುತ್ತಿದೆ. ನಿಧಿ ಪತ್ತೆಯಾದ ಜಾಗವನ್ನು ವೀಕ್ಷಿಸಲು ಫ್ರಾನ್ಸ್ ಮೂಲದ ಹದಿನೈದು ಪ್ರವಾಸಿಗರ ತಂಡ ಲಕ್ಕುಂಡಿಗೆ ಭೇಟಿ ನೀಡಿದೆ.

ನಿಧಿ ಸಿಕ್ಕ ಸ್ಥಳವನ್ನು ಸಮೀಪದಿಂದ ವೀಕ್ಷಿಸಿದ ವಿದೇಶಿ ಪ್ರವಾಸಿಗರು, ಈ ಘಟನೆಯಿಂದ ಬಹಳಷ್ಟು ಖುಷಿಪಟ್ಟಿದ್ದು, ಪ್ರಜ್ವಲ್ ರಿತ್ತಿ ಅವರ ಪ್ರಾಮಾಣಿಕತೆಯನ್ನು “ಮಿರಾಕಲ್” ಎಂದು ಶ್ಲಾಘಿಸಿದ್ದಾರೆ. ವಿದೇಶಿಗರ ಪ್ರಕಾರ, ಇಂತಹ ಪ್ರಾಮಾಣಿಕತೆ ಜಗತ್ತಿನಲ್ಲಿಯೇ ಅಪರೂಪವಾಗಿದ್ದು, ಇದು ಎಲ್ಲರಿಗೂ ಮಾದರಿಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚಿನ್ನದ ನಿಧಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಿದ ಕಸ್ತೂರಿ ರಿತ್ತಿ ಕುಟುಂಬದ ಪ್ರಾಮಾಣಿಕತೆಗೆ ವಿದೇಶಿಗರು ವಿಶೇಷ ಗೌರವ ಸೂಚಿಸಿದ್ದಾರೆ. ಕೆಲ ವಿದೇಶಿಗರು ಕಸ್ತೂರಿ ರಿತ್ತಿಗೆ ಸೆಲ್ಫಿ ತೆಗೆದುಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಗಮನಾರ್ಹವೆಂದರೆ, ಲಕ್ಕುಂಡಿ ಗ್ರಾಮದ ನಿವಾಸಿ ಪ್ರಜ್ವಲ್ ರಿತ್ತಿ ಅವರು ಸಿಕ್ಕಿದ್ದ ನಾಲ್ಕು ನೂರು ಅರವತ್ತೊಂದು ಗ್ರಾಂ ಚಿನ್ನವನ್ನು ಸಂಪೂರ್ಣವಾಗಿ ಸರ್ಕಾರಕ್ಕೆ ಹಸ್ತಾಂತರಿಸಿದ್ದರು. ಈ ಪ್ರಾಮಾಣಿಕತೆ ಈಗ ಅಂತರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದೆ.

error: Content is protected !!