Home Blog Page 15

ಬಿಗ್‌ ಬಾಸ್‌ ಮನೆಯಲ್ಲಿ ಸ್ವಾಭಿಮಾನಕ್ಕೆ ದಕ್ಕೆ: ಉಪವಾಸ ಸತ್ಯಾಗ್ರಹ ಆರಂಭಿಸಿದ ಅಶ್ವಿನಿ ಗೌಡ

ಬಿಗ್‌ ಬಾಸ್‌ ಮನೆಗೆ ಬಂದ ಆರಂಭದಿಂದಲೂ ಸಖತ್‌ ಗಟ್ಟಿಗಿತ್ತಿಯಾಗಿದ್ದ ಅಶ್ವಿನಿ ಗೌಡ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಂಕಾಗುತ್ತಿದ್ದಾರೆ. ಇದೀಗ ತಮ್ಮ ಸ್ವಾಭಿಮಾನಕ್ಕೆ ದಕ್ಕೆ ತರುವ ಘಟನೆಗಳು ನಡೆದಿವೆ ಎನ್ನುವ ಕಾರಣಕ್ಕೆ ಅಶ್ವಿನಿ ಗೌಡ ದೊಡ್ಮನೆಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ರಘು ಜೊತೆ ಕಿರಿಕ್ ಮಾಡಿಕೊಂಡ ಹಿನ್ನೆಲೆಯಲ್ಲಿ ಬಿಗ್‌ ಬಾಸ್‌ ಅಶ್ವಿನಿ ಅವರಿಗೆ ಡೋರ್‌ ಓಪನ್ ಮಾಡಿಲ್ಲ, ಇದರಿಂದಾಗಿ ಅಶ್ವಿನಿ ಗೌಡ ಈ ನಿರ್ಧಾರಕ್ಕೆ ಬಂದಿದ್ದಾರೆ.

ಕಲರ್ಸ್ ಕನ್ನಡ ಚಾನಲ್ ಈ ವಿಷಯದ ಪ್ರಚಾರಕ್ಕಾಗಿ ಹೊಸ ಪ್ರೊಮೋ ಬಿಡುಗಡೆ ಮಾಡಿದ್ದು, ಅಶ್ವಿನಿ ಬೆಡ್ ಮೇಲೆ ಮಲಗಿರುವ ದೃಶ್ಯವನ್ನು ತೋರಿಸುತ್ತದೆ. ಜಾಹ್ನವಿ ತಟ್ಟೆಯಲ್ಲಿ ಊಟ ತಂದು, “ನೀವು ಮೊದಲೇ ಊಟ ಮಾಡಿರಿ” ಎಂದು ಒತ್ತಾಯಿಸಿದ್ದರು. ಆದರೆ ಅಶ್ವಿನಿ ಊಟ ಮಾಡಲು ಒಪ್ಪಿಲ್ಲ.

ಈ ಮಧ್ಯೆ, ಬಿಗ್ ಬಾಸ್ ಮನೆಯ ಇತರ ಸದಸ್ಯರು ಸಹ ಅಶ್ವಿನಿ ಗೌಡ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಜಾಹ್ನವಿ ಮತ್ತು ಧ್ರುವಂತ್ ನಡುವಣ ಸಂಭಾಷಣೆಯಲ್ಲಿ, “ಇನ್ಮುಂದೆ ಜಾಹ್ನವಿ ನೀವು ಏನೂ ತಿನ್ನೋದೇ ಇರ್ತೀರಾ?” ಎಂದು ಧ್ರುವಂತ್ ಕೇಳಿದಾಗ, ಜಾಹ್ನವಿ ಪ್ರತಿಕ್ರಿಯೆಯಲ್ಲಿ, “10 ನಿಮಿಷದಲ್ಲಿ ಸೊಂಟ ನೋವು ಹೋಗಿಬಿಡುತ್ತೆ” ಎಂದಿದ್ದಾರೆ. ಇದು ಮತ್ತಷ್ಟು ಟ್ರಿಗರ್ ಆಗುವಂತೆ ಆಗಿದೆ.

ಇದೇ ಸಂದರ್ಭದಲ್ಲಿ ರಘು ಮತ್ತು ರಕ್ಷಿತಾ ಸಹ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. “ನೀವು ಎಷ್ಟು ದಬ್ಬಾಕಿ ತೋರಿಸುತ್ತೀರೋ, ನಮಗೆ ಹೇಳಿಕೆ ಆಗುವುದಿಲ್ಲ” ಎಂದು ರಘು ಅವರಿಗೇ ಸೂಚಿಸಿದ್ದಾರೆ. ಈ ನೋಟಗಳು ಬಿಗ್ ಬಾಸ್ ಮನೆಯ ಡೈನಾಮಿಕ್‌ನಲ್ಲಿ ಹೊಸ ತಳಮಳ ಉಂಟುಮಾಡಿವೆ.

ಟಿಪ್ಪರ್‌ ಚಾಲಕ ದಾರುಣ ಸಾವು: ಗಣಿ ಅಧಿಕಾರಿಗೆ ಹೆದರಿ ಓಡಿ ಹೋಗುವಾಗ ಕಾರು ಡಿಕ್ಕಿ ಹೊಡೆದು ದುರಂತ!

0

ಚಿಕ್ಕಬಳ್ಳಾಪುರ:- ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಕ್ರಾಸ್‌ನ ಕೃಷ್ಣ ಕನ್ವೆನ್ಷನ್‌ ಸೆಂಟರ್ ಬಳಿ ಗಣಿ ಅಧಿಕಾರಿಗೆ ಹೆದರಿ ಓಡಿ ಹೋಗುವಾಗ ಕಾರಿಗೆ ಅಡ್ಡ ಸಿಕ್ಕಿ ಟಿಪ್ಪರ್‌ ಚಾಲಕ ಸಾವನ್ನಪ್ಪಿರುವ ಘಟನೆ ಜರುಗಿದೆ.

ರಮೇಶ್ (35) ಸಾವಿಗೀಡಾದ ಚಾಲಕ. ಇವರು ರಾಯಚೂರಿನ ಲಿಂಗಸೂರಿನ ನಿವಾಸಿ ಎನ್ನಲಾಗಿದೆ. ಟಿಪ್ಪರ್ ಲಾರಿ ಚೇಸ್ ಮಾಡಿದ್ದ ಗಣಿ ಅಧಿಕಾರಿ ಸವಿತಾ. ಗಣಿ ಅಧಿಕಾರಿಗೆ ಹೆದರಿ ಟಿಪ್ಪರ್‌ ಚಾಲಕ ಓಡಿ ಹೋಗಿದ್ದ. ಹೆದ್ದಾರಿಯಲ್ಲಿ ಟಿಪ್ಪರ್ ಲಾರಿ ನಿಲ್ಲಿಸಿ ಚಾಲಕ ಎಸ್ಕೇಪ್‌ ಆಗಲು ಮುಂದಾಗಿದ್ದ. ಓಡಿ ಹೋಗುವಾಗ ಕಾರಿಗೆ ಅಡ್ಡ ಸಿಕ್ಕಿದ್ದಾನೆ. ಕಾರು ಡಿಕ್ಕಿ ಹೊಡೆದು ಟಿಪ್ಪರ್‌ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಟಿಪ್ಪರ್ ಲಾರಿ ಹಾಗೂ ಅಪಘಾತ ಮಾಡಿದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Karnataka Rain: ಉತ್ತರ ಒಳನಾಡಿನ ಹಲವೆಡೆ ಮಳೆ: ಇಂದಿನ ಹವಾಮಾನ ಹೀಗಿದೆ!

0

ಬೆಂಗಳೂರು:- ಕರ್ನಾಟಕದಲ್ಲಿ ಇಂದು ಚಳಿ ಹಾಗೂ ಒಣ ಹವೆ ಮುಂದುವರಿದಿದ್ದು, ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಯಚೂರು, ಯಾದಗಿರಿ, ಕೊಪ್ಪಳ ಮತ್ತು ಕಲಬುರಗಿ ಭಾಗದಲ್ಲಿ ಗುಡುಗು ಸಹಿತ ಮಳೆಯ ನಿರೀಕ್ಷೆ ಇದೆ. ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರದಲ್ಲಿಯೂ ಸಾಧಾರಣ ಮಳೆಯ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು ನಗರದಲ್ಲಿ ಬೆಳಗ್ಗಿನ ವೇಳೆ ಮೋಡ ಕವಿದ ವಾತಾವರಣ ಇರಲಿದ್ದು, ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್​​ ಮತ್ತು ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಾಗಲಕೋಟೆ. ಬೆಳಗಾವಿ, ಬೀದರ್​, ಧಾರವಾಡ, ಗದಗ, ಹಾವೇರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದ್ದು, ಬೀದರ್​​ನಲ್ಲಿ ಇತ್ತೀಚೆಗೆ ರಾಜ್ಯದಲ್ಲೇ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್​ ದಾಖಲಾಗಿತ್ತು.

ಶಾಲೆಗೆ ತಡವಾಗಿ ಬಂದಿದ್ದಕ್ಕೆ 100 ಬಸ್ಕಿ: ವಿದ್ಯಾರ್ಥಿನಿ ಸಾವು

0

ವಸಾಯಿ:- ಶಾಲೆಯಲ್ಲಿ ಶಿಕ್ಷಕರು ನೀಡಿದ ಶಿಕ್ಷೆಯಿಂದ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ವಸಾಯಿಯಲ್ಲಿ ನಡೆದಿದೆ.

ಶಾಲೆಗೆ ತಡವಾಗಿ ಬಂದಿದ್ದಕ್ಕೆ ವಿದ್ಯಾರ್ಥಿನಿಗೆ 100 ಬಸ್ಕಿ ಹೊಡೆಯುವ ಶಿಕ್ಷೆಯನ್ನು ಶಿಕ್ಷಕರು ನೀಡಿದ್ದರು. ಬಳಿಕ ಆಕೆ ಅಸ್ವಸ್ಥಳಾಗಿದ್ದು, ಆಸ್ಪತ್ರೆಗೆ ಕೊಂಡೊಯ್ಯುವಾಗಲೇ ಸಾವನ್ನಪ್ಪಿದ್ದಾಳೆ. ಪ್ರಕರಣದ ತನಿಖೆ ನಡೆಯುತ್ತಿದೆ ಮತ್ತು ಶಾಲಾ ಆಡಳಿತದಿಂದ ಯಾವುದೇ ನಿರ್ಲಕ್ಷ್ಯ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇನ್ಸ್‌ಪೆಕ್ಟರ್ ದಿಲೀಪ್ ತಿಳಿಸಿದ್ದಾರೆ.

ಆಕೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಶಾಲಾ ಶಿಕ್ಷಕರು ಮತ್ತು ಇತರ ವಿದ್ಯಾರ್ಥಿಗಳ ಹೇಳಿಕೆಗಳು ಸೇರಿದಂತೆ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಆಧಾರದ ಮೇಲೆ, ಪ್ರಕರಣ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಶಿಕ್ಷಕನನ್ನು ಬಂಧಿಸಲಾಗಿದೆ. ಶಾಲೆಯ ನಿರ್ಲಕ್ಷ್ಯವಿದ್ದರೆ, ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಡಿಸಿಎಂ ಭೇಟಿಯಾದ ಕಾಂತಾರ ನಟ: ರಿಷಬ್‌ ಶೆಟ್ಟಿ ಕಾರ್ಯವೈಖರಿ ಶ್ಲಾಘಿಸಿದ ಡಿಕೆ ಶಿವಕುಮಾರ್!

0

‘ಕಾಂತಾರ ಚಾಪ್ಟರ್ 1’ ಯಶಸ್ಸಿನ ಹಿನ್ನಲೆಯಲ್ಲಿ ನಟ-ನಿರ್ದೇಶಕ ರಿಷಬ್ ಶೆಟ್ಟಿ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಬುಧವಾರ ಭೇಟಿ ಮಾಡಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಡಿಕೆಶಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇಂದು ನನ್ನ ಗೃಹ ಕಚೇರಿಯಲ್ಲಿ ಖ್ಯಾತ ನಟ ರಿಷಬ್ ಶೆಟ್ಟಿಯವರು ಭೇಟಿ ನೀಡಿ ಚರ್ಚೆ ನಡೆಸಿದರು. ‘ಕಾಂತಾರ: ಅಧ್ಯಾಯ 1’ ಚಿತ್ರ ಭರ್ಜರಿ ಯಶಸ್ಸು ಕಂಡಿರುವುದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸಿದೆ. ನಮ್ಮ ನೆಲಹೊರೆಯ ಸಂಸೃತಿ, ಸಂಪ್ರದಾಯ ಹಾಗೂ ಆಚಾರ-ವಿಚಾರಗಳನ್ನು ಜಗತ್ತಿನ ಮುಂದೆ ಪರಿಚಯಿಸಿದ ರಿಷಬ್ ಅವರ ಕಲೆ ಶ್ಲಾಘನೀಯ. ಅವರ ಮುಂದಿನ ಚಿತ್ರರಂಗದ ಪಯಣ ಇನ್ನಷ್ಟು ಎತ್ತರಕ್ಕೆ ಏರಲಿ,” ಎಂದು ಡಿಕೆಶಿ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಡಿಕೆಶಿ ಹಾಗೂ ರಿಷಬ್ ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆದರೆ ಸಭೆಯ ನಿಖರ ಉದ್ದೇಶವನ್ನು ರಿಷಬ್ ಶೆಟ್ಟಿ ಪ್ರಕಟಿಸಿಲ್ಲ. ಈ ನಡುವೆ, ‘ಕಾಂತಾರ: ಚಾಪ್ಟರ್ 1’ ಪ್ರಸ್ತುತ ಯಶಸ್ವಿ ವಿಜಯಯಾತ್ರೆ ಮುಂದುವರೆಸಿದ್ದು, ಈಗಾಗಲೇ 850 ಕೋಟಿಗೂ ಅಧಿಕ ಬಾಕ್ಸ್‌ಆಫೀಸ್ ವಸೂಲಿ ದಾಖಲಿಸಿದೆ. ‘ಕೆಜಿಎಫ್ 2’ ನಂತರ ಅತ್ಯಧಿಕ ಗಳಿಕೆ ಮಾಡಿದ ಕನ್ನಡ ಸಿನಿಮಾ ಎಂಬ ಮಾನ್ಯತೆ ಪಡೆದಿರುವುದಲ್ಲದೆ 2025ರ ಅತ್ಯಂತ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ.

 ‘ಕಾಮಿಡಿ ಕಿಲಾಡಿ’ ನಟಿ ನಯನಾ ವಿರುದ್ಧ FIR ದಾಖಲು

ಖ್ಯಾತ ‘ಕಾಮಿಡಿ ಕಿಲಾಡಿ’ ಕಿರುತೆರೆ ನಟಿ ನಯನಾ ವಿರುದ್ಧ FIR ದಾಖಲಾಗಿದ್ದು, ಕಲಬುರಗಿ ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ (ಜಾತಿ ನಿಂದನೆ) ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.

ಅಕ್ಟೋಬರ್ 29 ರಂದು ನಡೆದ ಮನಿಮಿತ್ರಾ ಕಂಪನಿಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ನಯನಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಾರ್ಯಕ್ರಮದಲ್ಲಿ ಶೋಷಿತ ಸಮುದಾಯಕ್ಕೆ ಉದ್ದೇಶಪೂರ್ವಕವಾಗಿ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದ ಕಾರಣ, ದಲಿತ ಸೇನೆ ಕಲಬುರಗಿ ಜಿಲ್ಲಾಧ್ಯಕ್ಷ ಮಂಜುನಾಥ್ ಭಂಡಾರಿ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು.

ಮಂಜುನಾಥ್ ಭಂಡಾರಿಯ ದೂರಿನಡಿ FIR ದಾಖಲಾಗಿದ್ದು, ನಯನಾ ಅವರ ಹಾಸ್ಯ ನಡವಳಿಕೆಯ ಮೂಲಕ ಶೋಷಿತ ಸಮುದಾಯದ ಭಾವನೆಗಳಿಗೆ ಹಾನಿ ಉಂಟುಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ಕೊಳಕು ಮನೋಭಾವನೆ ಮತ್ತು ಜಾತಿ ನೆಲೆತನವನ್ನು ಬಹಿರಂಗವಾಗಿ ಪ್ರದರ್ಶಿಸಿದ್ದಾರೆ.

ನಯನಾ ಹೇಳಿಕೆಯಿಂದ ಶೋಷಿತ ಸಮುದಾಯಕ್ಕೆ ಬಹಳ ನೋವುಂಟಾಗಿದೆ. ಅವರ ವಿರುದ್ಧ ದೌರ್ಜನ್ಯ ತಡೆ ಕಾಯ್ದೆ ಅನುಸಾರ ಕಠಿಣ ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಲಾಗಿದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿ ಇದೆ, ಮುಂದಿನ ದಿನಗಳಲ್ಲಿ ಪೊಲೀಸರು ಮತ್ತಷ್ಟು ವಿವರಗಳನ್ನು ಬಹಿರಂಗಪಡಿಸಲಿದ್ದಾರೆ.

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದಿನಿಂದ ನ.23ರವರೆಗೆ ವಿದ್ಯುತ್‌ ವ್ಯತ್ಯಯ!

0

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಸೋಲದೇವನಹಳ್ಳಿ ಸಬ್‌ಸ್ಟೇಷನ್ ಕೆಪಿಟಿಸಿಎಲ್‌ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಜಾಲಹಳ್ಳಿ ವಿಭಾಗದ ಎನ್- 9 ಉಪ ವಿಭಾಗದ ಹಲವೆಡೆ ಇಂದಿನಿಂದ ನ.23ರವರೆಗೆ ಬೆಳಗ್ಗೆ 10.30 ಗಂಟೆಯಿಂದ ರಾತ್ರಿ 8.30 ಗಂಟೆಯವರೆಗೆ ಪವರ್ ಕಟ್ ಇರಲಿದೆ.

ಎಲ್ಲೆಲ್ಲಿ ಇರಲ್ಲ ಪವರ್:-

ಮಾರುತಿ ನಗರ, ಗಣಪತಿ ನಗರ, ಶಾಂತಿನಗರ, ಬ್ರದರ್ಸ್ ಕಾಲೋನಿ, ಕೃಷ್ಣಾ ಕಾಲೇಜು ರಸ್ತೆ, ರಾಘವೇಂದ್ರ ಲೇಔಟ್‌, ಸಾಸುವೆಘಟ್ಟ, ಬಜ್ಜಪ್ಪ ಲೇಔಟ್‌, ಶಿವಕುಮಾರ ಸ್ವಾಮೀಜಿ ಲೇಔಟ್‌, ಗುಡ್ಡದಹಳ್ಳಿ, ದಾಸೇನಹಳ್ಳಿ, ತೋಟಗೆರೆ ಬಸವಣ್ಣ ದೇವಸ್ಥಾನ, ಹೊಸಹಳ್ಳಿ ಪಾಳ್ಯ, ಸಿಡಿಪಿಒ, ಡ್ಯಾನಿಶ್ ಫಾರ್ಮ್, ಕೆಎಂಎಫ್, ಪಶುಸಂಗೋಪನೆ, ಗುಣಿ ಅಗ್ರಹರ್, ಸೋಮಶೀತಿಹಳ್ಳಿ, ಗಾಣಿಗರಹಳ್ಳಿ, ಪೈಪ್‌ಲೈನ್‌ ರೋಡ್‌, ಕೆರೆಗುಡ್ಡಹಳ್ಳಿ, ಹುರುಳಿಚಿಕ್ಕನಹಳ್ಳಿ,

ತರಬನಹಳ್ಳಿ, ಹುರುಳಿಚಿಕ್ಕನಹಳ್ಳಿ, ಟಿಬಿ ಕ್ರಾಸ್, ಹೆಸರಘಟ್ಟ, ಬಿಳಿಜಾಜಿ, ದ್ವಾರಕನಗರ, ಚಿಕ್ಕಬಾಣಾವರ, ಕೆ.ಟಿ.ಪುರ, ಐಐಎಚ್‌ಆರ್, ಐವರಕೊಂಡಪುರ, ಸೀತಕೆಂಪನಹಳ್ಳಿ, ರಾಜ್ಯ ಮೀನುಗಾರಿಕೆ, ಲಿಂಗನಹಳ್ಳಿ, ಮಾದಪ್ಪನಹಳ್ಳಿ, ಕಾಳೇನಹಳ್ಳಿ ಶಿವಕೋಟೆ ಗ್ರಾಮ, ಮಾವಳ್ಳಿಪುರ, ಕೊಂಡಶೆಟ್ಟಿಹಳ್ಳಿ, ಮಧುಗಿರಿವೇಹಳ್ಳಿ, ಹುರುಳಿಚಿಕ್ಕನಹಳ್ಳಿ, ಕುರುಬರಹಳ್ಳಿ, ಕುರುಬರಹಳ್ಳಿ ಪಾಕೇಗೌಡನಪಾಳ್ಯ, ರಾಘವೇಂದ್ರ ಧಾಮ, ಬೈಲಕೆರೆ, ಆಚಾರ್ಯ ಕಾಲೇಜು ಮುಖ್ಯರಸ್ತೆ, ಅಚ್ಯುತ್ ನಗರ, ಸೋಲದೇವನಹಳ್ಳಿ, ಸಾಸುವೆಘಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ ವಿರುದ್ಧ ದಾಖಲಾಯ್ತು ಅಟ್ರಾಸಿಟಿ ಕೇಸ್!

0

ಕಲಬುರಗಿ: ‘ಕಾಮಿಡಿ ಕಿಲಾಡಿ’ ಖ್ಯಾತಿಯ ಕಿರುತೆರೆ ನಟಿ ನಯನಾ ವಿರುದ್ಧ ಜಾತಿ ನಿಂದನೆಯಡಿ (ಅಟ್ರಾಸಿಟಿ ಕಾಯ್ದೆ) FIR ದಾಖಲಾಗಿದೆ.

ಕಲಬುರಗಿಯ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದಲಿತ ಸೇನೆ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಭಂಡಾರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ಹಾಸ್ಯನಟಿ ನಯನಾ ಅವರು ಅಕ್ಟೋಬರ್ 29ರಂದು ಮನಿಮಿತ್ರಾ ಕಂಪನಿಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ಮತ್ತು ಜಾತಿ ನಿಂದನೆಯ ಪದಗಳನ್ನು ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಾರ್ಯಕ್ರಮದಲ್ಲಿ ಶೋಷಿತ ಸಮುದಾಯವನ್ನು ಉದ್ದೇಶಿಸಿ ಅವಮಾನಕಾರಿ ಹೇಳಿಕೆ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನಯನಾ ಅವರ ಮಾತುಗಳು ಶೋಷಿತ ಸಮುದಾಯದ ಮನೋಭಾವಕ್ಕೆ ನೋವುಂಟುಮಾಡಿದ್ದು, ಅವರ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಂಜುನಾಥ್ ಭಂಡಾರಿ ಆಗ್ರಹಿಸಿದ್ದಾರೆ.

ಕೆಇಎ ಮರುಪರೀಕ್ಷೆ ವೇಳಾಪಟ್ಟಿ ಪ್ರಕಟ: ಡಿಸೆಂಬರ್ 27-28ರಂದು ಪರೀಕ್ಷೆ

0

ಬೆಂಗಳೂರು: ಕರ್ನಾಟಕ ವಿದ್ಯುತ್ ನಿಗಮದಲ್ಲಿ ಖಾಲಿ ಇದ್ದ ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್ ಹಾಗೂ ಇತರ ಹುದ್ದೆಗಳ ನೇಮಕಾತಿಗಾಗಿ ನಡೆದಿದ್ದ ಪರೀಕ್ಷೆಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ ಹಿನ್ನೆಲೆಯಲ್ಲಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮರುಪರೀಕ್ಷೆಯ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರು ಪ್ರಕಟಣೆ ನೀಡಿದ್ದು, ಹಿಂದೆ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳಿಗೆ ಡಿಸೆಂಬರ್ 27 ಮತ್ತು 28ರಂದು ಮರುಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಅಭ್ಯರ್ಥಿಗಳು KEA ವೆಬ್‌ಸೈಟ್‌ನಲ್ಲಿ ನೀಡಿರುವ ಲಿಂಕ್‌ ಮೂಲಕ ತಮ್ಮ ಅರ್ಜಿ ಸಲ್ಲಿಸಿರುವ ಹುದ್ದೆಯ ವಿವರಗಳು ಸೇರಿದಂತೆ ಬೇಕಾದ ಮಾಹಿತಿಯನ್ನು ನಮೂದಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಸಲಹೆ ನೀಡಲಾಗಿದೆ.

ಜನಿವಾರ ತೆಗೆಯಲು ಒತ್ತಾಯಿಸಿ 200 ಬಸ್ಕಿ: ದೈಹಿಕ ಶಿಕ್ಷಕ ಸಸ್ಪೆಂಡ್!

0

ಉಡುಪಿ: ಕಾರ್ಕಳದ ಮೊರಾರ್ಜಿ ದೇಸಾಯಿ ಇಂಗ್ಲಿಷ್ ಮಾಧ್ಯಮ ವಸತಿ ಶಾಲೆಯಲ್ಲಿ ದೈಹಿಕ ಶಿಕ್ಷಕರೊಬ್ಬರು ವಿದ್ಯಾರ್ಥಿಗಳಿಗೆ ಜನಿವಾರ ಹಾಗೂ ಕೈದಾರ ತೆಗೆಯುವಂತೆ ಒತ್ತಾಯಿಸಿ, 200 ಬಸ್ಕಿ ಹೊಡೆಯಲು ಹೇಳಿದ ಘಟನೆ ಬೆಳಕಿಗೆ ಬಂದಿದೆ.

ಈ ಕೃತ್ಯದಿಂದ ಬೆಚ್ಚಿಬಿದ್ದ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ದೂರು ನೀಡಿದ್ದು, ನಂತರ ವಿಷಯ ತಿಳಿದ ಪಾಲಕರು ಹಾಗೂ ಗ್ರಾಮಸ್ಥರು ಶಾಲೆಯ ಮುಂದೆ ಮುಖಾಮುಖಿಯಾಗಿದ್ದರು.

ಶಿಕ್ಷಕ ಮದರಶಾ ಎಸ್. ಮಕಂದಾರ್ ಅವರೊಂದಿಗೆ ಪಾಲಕರ ವಾದ–ವಿವಾದ ನಡೆದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾತುಕತೆಯ ವೇಳೆ ಶಿಕ್ಷಕ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ್ದರೂ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಶಾಲಾ ಆಡಳಿತ ಮಂಡಳಿ ಅವರನ್ನು ತಕ್ಷಣ ಅಮಾನತುಗೊಳಿಸಿದೆ.

ಈ ಘಟನೆಗೆ ಸಮುದಾಯದ ನಾಯಕರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

error: Content is protected !!