Home Blog Page 174

ಹೃದಯಾಘಾತದಿಂದ ಕಾಗಿನೆಲೆ ಕನಕಗುರುಪೀಠದ ಸಿದ್ದರಾಮನಂದ ಸ್ವಾಮೀಜಿ ವಿಧಿವಶ!

0

ರಾಯಚೂರು: ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಜ್ಡ್ ಸಮೀಪದ ಕಾಗಿನೆಲೆ ಕನಕಗುರುಪೀಠದ ಪೀಠಾಧಿಪತಿ ಸಿದ್ದರಾಮನಂದ ಸ್ವಾಮೀಜಿ (50) ಅವರು ವಿಧಿವಶರಾಗಿದ್ದಾರೆ. ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಹೃದಯ ಸ್ತಂಭನದಿಂದ ಅಸ್ತಂಗತರಾಗಿದ್ದಾರೆ.

ಇತ್ತೀಚೆಗಷ್ಟೇ ಜ.12, 13 ಹಾಗೂ 14ರಂದು ಅದ್ದೂರಿಯಾಗಿ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮವನ್ನು ಸ್ವಾಮೀಜಿ ಯಶಸ್ವಿಯಾಗಿ ಆಯೋಜಿಸಿದ್ದರು. ಹಾಲುಮತ ಸಾಹಿತ್ಯ ಸಮ್ಮೇಳನ ಹಾಗೂ ಹಾಲುಮತ ಪೂಜಾರಿಗಳ ಶಿಬಿರ ಭಾರೀ ಜನಮನ್ನಣೆ ಪಡೆದಿತ್ತು. ರಾಜಕೀಯ ವ್ಯಕ್ತಿಗಳ ಹಸ್ತಕ್ಷೇಪವಿಲ್ಲದೆ ನಡೆದ ಈ ಕಾರ್ಯಕ್ರಮಕ್ಕೆ ವಿವಿಧ ವಲಯಗಳಿಂದ ಪ್ರಶಂಸೆ ವ್ಯಕ್ತವಾಗಿತ್ತು.

ಕಳೆದ ಒಂದು ವಾರದಿಂದ ನಿರಂತರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಸ್ವಾಮೀಜಿ ಸರಿಯಾಗಿ ಊಟ ಹಾಗೂ ನಿದ್ರೆ ಮಾಡಲಾಗದೆ ದೌರ್ಬಲ್ಯಕ್ಕೆ ಒಳಗಾಗಿದ್ದರು. ಬುಧವಾರ ರಾತ್ರಿ ಲೋ ಬಿಪಿಯಿಂದ ಬಳಲಿದ ಅವರನ್ನು ತಕ್ಷಣ ಲಿಂಗಸುಗೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ನಿಧನರಾಗಿದ್ದಾರೆ. ಸಿದ್ದರಾಮನಂದ ಸ್ವಾಮೀಜಿ ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕಲಮರಹಳ್ಳಿಯವರು. ಮಹದೇವಯ್ಯ–ಜಯಮ್ಮ ದಂಪತಿಯ ಎರಡನೇ ಪುತ್ರರಾಗಿದ್ದ ಅವರ ಮೂಲ ಹೆಸರು ಮೋಹನ್ ಪ್ರದಾನ. 18ನೇ ವಯಸ್ಸಿನಲ್ಲಿ ಮನೆ ತೊರೆದ ಅವರು ಜೈನ, ಕ್ರೈಸ್ತ ಹಾಗೂ ಬ್ರಹ್ಮಕುಮಾರಿ ಪಂಥಗಳ ಪ್ರಭಾವಕ್ಕೂ ಒಳಗಾಗಿದ್ದರು.

ಶರಣ ಸಾಹಿತ್ಯದ ಜೊತೆಗೆ ವಿವಿಧ ಧರ್ಮಗಳ ಅಧ್ಯಯನ ನಡೆಸಿದ ಸ್ವಾಮೀಜಿ ಚಿತ್ರದುರ್ಗದ ಮುರುಘಾಮಠದಲ್ಲಿ ಕೆಲಕಾಲ ವಿದ್ಯಾಭ್ಯಾಸ ಮಾಡಿದ ಬಳಿಕ ನಾಲ್ಕು ವರ್ಷಗಳ ಕಾಲ ಸಿಂಧನೂರಿನಲ್ಲಿ ಸ್ವಾಮೀಜಿಯಾಗಿ ವಾಸ್ತವ್ಯ ಮಾಡಿದರು. ನಂತರ 2011ರಲ್ಲಿ ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಜ್ಡ್ ಬಳಿ ಕಾಗಿನೆಲೆ ಕನಕಗುರುಪೀಠವನ್ನು ಸ್ಥಾಪಿಸಿದರು.

ಕಲಬುರಗಿ ವಿಭಾಗದಾದ್ಯಂತ ಕನಕಗುರುಪೀಠಗಳ ಸ್ಥಾಪನೆಗೆ ಕಾರಣರಾಗಿದ್ದ ಅವರು ಪ್ರತಿ ವರ್ಷ ಜನವರಿ 12, 13, 14ರಂದು ಹಾಲುಮತ ಸಂಸ್ಕೃತಿ ವೈಭವವನ್ನು ಆಯೋಜಿಸುತ್ತಿದ್ದರು. ಶಾಲಾ ಮಕ್ಕಳಿಗೆ ಉಚಿತ ದಾಸೋಹ, ಸಾಮೂಹಿಕ ವಿವಾಹ, ಆರೋಗ್ಯ ಶಿಬಿರ, ರಕ್ತದಾನ ಶಿಬಿರಗಳ ಮೂಲಕ ಸಮಾಜಸೇವೆಗೆ ಮಹತ್ವದ ಕೊಡುಗೆ ನೀಡಿದ್ದರು. ಜೊತೆಗೆ ಸಾಹಿತ್ಯ ಹಾಗೂ ಸಮಾಜಸೇವೆಯಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಭಾಸ್ಕರ, ಕನಕರತ್ನ ಹಾಗೂ ಸಿದ್ಧಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಿದ್ದರು. ಸ್ವಾಮೀಜಿಗಳ ನಿಧನದಿಂದ ಹಾಲುಮತ ಸಮುದಾಯ ಹಾಗೂ ಅಪಾರ ಶಿಷ್ಯವೃಂದದಲ್ಲಿ ತೀವ್ರ ಶೋಕದ ಛಾಯೆ ಆವರಿಸಿದೆ.

ಗಿಲ್ಲಿಗೆ ನನ್ನ ಗಂಡ ಅಥವಾ ಬಾಯ್‌ಫ್ರೆಂಡ್ ಆಗುವ ಅರ್ಹತೆ ಇಲ್ಲ ಎಂದ ರಕ್ಷಿತಾ

ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆ ವಾರಕ್ಕೆ ಕಾಲಿಟ್ಟಿದ್ದು, ಈಗಾಗಲೇ ಏಳು ಮಂದಿ ಸ್ಪರ್ಧಿಗಳು ಉಳಿದಿದ್ದಾರೆ. ಬುಧವಾರ ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದ್ದು, ಮನೆಯೊಳಗಿನ ಪ್ರತಿ ಬೆಳವಣಿಗೆಗೂ ಪ್ರೇಕ್ಷಕರು ಹೆಚ್ಚಿನ ಗಮನ ನೀಡುತ್ತಿದ್ದಾರೆ. ಗಿಲ್ಲಿಯ ಕಾಮಿಡಿ ಮತ್ತು ವರ್ತನೆ ಪ್ರೇಕ್ಷಕರಿಗೆ ವಿಶೇಷವಾಗಿ ಇಷ್ಟವಾಗಿದ್ದು, ಅವರು ಪ್ರಮುಖ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.

ಈ ಸೀಸನ್‌ನಲ್ಲಿ ಸಹ ಬಿಗ್ ಬಾಸ್ ಮನೆಯಲ್ಲಿ ಹಲವು ಜೋಡಿಗಳು ರೂಪುಗೊಂಡಿವೆ. ಅದರಲ್ಲಿ ಗಿಲ್ಲಿ ಮತ್ತು ಕಾವ್ಯಾ ಜೋಡಿ ಅತ್ಯಂತ ಜನಪ್ರಿಯವಾಗಿದೆ. ಆದರೆ ಇತ್ತೀಚೆಗೆ ರಕ್ಷಿತಾ ಕೂಡ ಗಿಲ್ಲಿ ಜೊತೆ ಹೆಚ್ಚು ಸಮಯ ಕಳೆಯುತ್ತಿರುವುದು ಪ್ರೇಕ್ಷಕರ ಗಮನ ಸೆಳೆದಿದೆ. ಗಿಲ್ಲಿ, ಕಾವ್ಯಾ ಅಥವಾ ಮುಂಚೆ ಸ್ಪಂದನಾ ಜೊತೆ ಮಾತನಾಡಿದಾಗ ರಕ್ಷಿತಾ ಬೇಜಾರು ಮಾಡಿಕೊಳ್ಳುತ್ತಿದ್ದ ಘಟನೆಗಳು ಕಂಡುಬಂದಿವೆ. ಕೆಲ ಸಂದರ್ಭಗಳಲ್ಲಿ ಗಿಲ್ಲಿ ಜೊತೆ ತಾವೊಬ್ಬರೇ ಕುಳಿತುಕೊಳ್ಳಲು ಇತರ ಬೀನ್ ಬ್ಯಾಗ್‌ಗಳನ್ನು ತೆಗೆದು ಹಾಕಿದ ಘಟನೆಯೂ ನಡೆದಿದೆ.

ಒಮ್ಮೆ ರಕ್ಷಿತಾ “ಗಿಲ್ಲಿಯಂಥ ಬಾಯ್‌ಫ್ರೆಂಡ್ ಬೇಕು” ಎಂದು ಹೇಳಿದ್ದರು. ಈ ವಿಚಾರ ವೀಕೆಂಡ್ ಎಪಿಸೋಡ್‌ನಲ್ಲಿ ಚರ್ಚೆಗೆ ಒಳಪಟ್ಟ ಬಳಿಕ, ರಕ್ಷಿತಾರ ನಿಲುವಿನಲ್ಲಿ ಬದಲಾವಣೆ ಕಂಡುಬಂದಿದೆ.

ಗಿಲ್ಲಿ ಖಾಲಿ ಸಮಯದಲ್ಲಿ ಬಿಗ್ ಬಾಸ್ ಮನೆಯ ಸದಸ್ಯರಿಗೆ ಸಿನಿಮಾ ಕತೆ ಹೇಳುವುದು ಅಭ್ಯಾಸ. ಇತ್ತೀಚೆಗೆ ತಮ್ಮ ಹಾಗೂ ಕಾವ್ಯಾರ ಕಥೆಯನ್ನು ಕತೆಯ ರೂಪದಲ್ಲಿ ಹೇಳುವಾಗ, ರಕ್ಷಿತಾರ ವಿಷಯವನ್ನೂ ಸೇರಿಸಿ, ‘ರಕ್ಷಿತಾ ನನ್ನನ್ನು ಇಷ್ಟಪಡುತ್ತಾರೆ’ ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ರಕ್ಷಿತಾ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, “ನನಗೆ ಗಿಲ್ಲಿ ಇಷ್ಟವಿಲ್ಲ. ನನ್ನ ಗಂಡ ಅಥವಾ ಬಾಯ್‌ಫ್ರೆಂಡ್ ಆಗುವ ಅರ್ಹತೆ ಅವರಿಗೆ ಇಲ್ಲ. ನಾನು ಜೀವನ ಸಂಗಾತಿಯಲ್ಲಿ ಹುಡುಕುವ ಗುಣಗಳು ಗಿಲ್ಲಿಯ ಬಳಿ ಇಲ್ಲ” ಎಂದು ಹೇಳಿದ್ದಾರೆ.

ನಂತರ ಕಾವ್ಯಾ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಕ್ಷಿತಾ, “ಗಿಲ್ಲಿಯ ಕೆಲ ಗುಣಗಳು ಇಷ್ಟವಾದರೂ, ಅವರ ಕೆಲವು ಸ್ವಭಾವ ನನಗೆ ಒಪ್ಪುತ್ತಿಲ್ಲ. ಅವುಗಳನ್ನು ಬದಲಾಯಿಸಿಕೊಳ್ಳಿ ಎಂದು ನಾನು ಹೇಳಿದ್ದೇನೆ. ಗಿಲ್ಲಿ ಬಗ್ಗೆ ಕೆಲ ಕಂಪ್ಲೇಂಟ್‌ಗಳೂ ನನಗೆ ಇವೆ” ಎಂದು ಸ್ಪಷ್ಟಪಡಿಸಿದ್ದಾರೆ.

ಫಿನಾಲೆ ಹಂತದಲ್ಲಿರುವ ಬಿಗ್ ಬಾಸ್ ಮನೆಯಲ್ಲಿ ಸಂಬಂಧಗಳ ಈ ಬದಲಾವಣೆ ಇದೀಗ ಪ್ರೇಕ್ಷಕರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ.


ಬೇಗೂರಿನ ಬಳಿ ಅಗ್ನಿ ದುರಂತ; ತಪ್ಪಿದ ಭಾರೀ ಅನಾಹುತ!

0

ಬೆಂಗಳೂರು :- ರಾಜಧಾನಿ ಬೆಂಗಳೂರಿನ ಬೇಗೂರಿನ ಬಳಿ ಅಗ್ನಿ ಅವಘಡ ಸಂಭವಿಸಿದೆ.

ಪ್ಲಾಸ್ಟಿಕ್ ವೇಸ್ಟೇಜ್ ಗಳನ್ನ ಡಂಪ್ ಮಾಡಿದ್ದ ಬೇಗೂರಿನ ಡಂಪಿಂಗ್ ಯಾರ್ಡ್ ನಲ್ಲಿ ಬೆಳಗಿನ ಜಾವ 5 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಘಟನೆ ಬೆನ್ನಲ್ಲೇ ಸುಮಾರು ನಾಲ್ಕು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ.

ಅದೃಷ್ಟಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಕಿ ಹೊತ್ತಿಕೊಂಡ ಕಾರಣದ ಬಗ್ಗೆ ಸಿಬ್ಬಂದಿಗಳು ಕೂಡ ಪರಿಶೀಲನೆ ಮಾಡುತ್ತಿದ್ದಾರೆ.

ತಪ್ಪಿದ ಚಾಲಕನ ನಿಯಂತ್ರಣ; ಡಿವೈಡರ್ ಗೆ ಲಾರಿ ಡಿಕ್ಕಿ, ವಾಹನ ಸಂಪೂರ್ಣ ನಜ್ಜುಗುಜ್ಜು!

0

ಬೆಂಗಳೂರು:- ಅತಿವೇಗವಾಗಿ ಚಲಿಸುತ್ತಿದ್ದ ಟಿಪ್ಪರ್ ಲಾರಿಯ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಘಟನೆ ತಡರಾತ್ರಿ ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ನಡೆದಿದೆ.

ಕಬ್ಬಿಣದ ಕಂಬಿಗಳ ಲೋಡ್ ತುಂಬಿಕೊಂಡು ಜಾಲಹಳ್ಳಿ ಮಾರ್ಗದಿಂದ ಬರುತ್ತಿದ್ದ ಲಾರಿ, ಗೊರಗುಂಟೆಪಾಳ್ಯ ಬಳಿ ಬಂದಾಗ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಯಶವಂತಪುರ ಸಂಚಾರಿ ಪೊಲೀಸರು ಲಾರಿಯನ್ನು ತೆರವುಗೊಳಿಸಿ ಸಂಚಾರ ವ್ಯವಸ್ಥೆಯನ್ನು ಸರಿಪಡಿಸಿದ್ದಾರೆ.

ರಾಷ್ಟ್ರಮಟ್ಟದ ಖೋಖೋ ಪಂದ್ಯಾವಳಿಗೆ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಕಣವಿ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಿಯಾಂಕಾ ಹನಮಂತಪ್ಪ ಸುಳ್ಳದ ರಾಷ್ಟ್ರಮಟ್ಟದ ಖೋಖೋ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆಂದು ರಾಷ್ಟ್ರಮಟ್ಟದ ತೀರ್ಪುಗಾರ ಜಿತೇಂದ್ರ ಸುಣಗಾರ ತಿಳಿಸಿದ್ದಾರೆ.

ಗುಜರಾತಿನಲ್ಲಿ ಅಮೆಚೂರ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ 14 ವರ್ಷದೊಳಗಿನ ರಾಷ್ಟ್ರಮಟ್ಟದ ಖೋಖೋ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಪ್ರಿಯಾಂಕಾ ಹನಮಂತಪ್ಪ ಸುಳ್ಳದ ಭಾಗವಹಿಸಿ ತನ್ನ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಕಣವಿ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಿಯಾಂಕಾ ಹನಮಂತಪ್ಪ ಸುಳ್ಳದ ರಾಷ್ಟ್ರಮಟ್ಟದ ಖೋಖೋ ಪಂದ್ಯಾವಳಿಗೆ ಆಯ್ಕೆಯಾಗಿದ್ದಕ್ಕಾಗಿ ಕಣವಿ ಹೊಸೂರು ಗ್ರಾಮಗಳ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗ, ಕಣವಿ ಹೊಸೂರು ಗ್ರಾಮಗಳ ಗುರು-ಹಿರಿಯರು, ಸಂಘ, ಸಂಸ್ಥೆಗಳು ಹಾಗೂ ಕ್ರೀಡಾಭಿಮಾನಿಗಳು ಅಭಿನಂದಿಸಿದ್ದಾರೆ.

ಕರ್ನಾಟಕ ರಾಜ್ಯ ಖೋಖೋ ಅಮೆಚೂರ್ ಸಂಸ್ಥೆ ಬೆಂಗಳೂರು, ರಾಜ್ಯ ಕಾರ್ಯದರ್ಶಿಗಳಾದ ಚಿನ್ನಮೂರ್ತಿ, ಸಹ ಕಾರ್ಯದರ್ಶಿ ಜಾಡರ, ಗದಗ ಜಿಲ್ಲಾ ಅಮೆಚೂರ್ ಖೋಖೋ ಸಂಸ್ಥೆಯ ಅಧ್ಯಕ್ಷರಾದ ಅಂದಪ್ಪ ಉಳ್ಳಾಗಡ್ಡಿ ಹಾಗೂ ಕಾರ್ಯದರ್ಶಿ ಮುತ್ತಪ್ಪ ಮಾಳಶೆಟ್ಟಿ, ತರಬೇತಿ ನೀಡಿದ ವೈ.ಬಿ. ಗೋವಣ್ಣವರ ಗುರುಗಳನ್ನು ಅಭಿನಂದಿಸಿದ್ದಾರೆ.

ರಾಷ್ಟ್ರೀಯ ಯುವದಿನ ಸಮಾರಂಭ

0

ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಸನಾತನ ಸಂಸ್ಕೃತಿಯ ಶಬ್ದಗಳಿಗೆ ಭಾವ ತುಂಬಿ ಜಗದಾದ್ಯಂತ ವ್ಯಕ್ತಿತ್ವ ನಿರ್ಮಾಣದ ಜೊತೆಗೆ ರಾಷ್ಟ್ರ ಪ್ರೇಮವನ್ನು ಬೆಸೆಯುವ, ಆಧ್ಯಾತ್ಮಿಕ ಚಿಂತನಾ ಶಿಖರವನ್ನು ತಲುಪಲು ಬೇಕಾದ ಜೀವನ ಮೌಲ್ಯಗಳನ್ನು ಪ್ರತಿಪಾದಿಸಿದ ಸ್ವಾಮಿ ವಿವೇಕಾನಂದರು ಸನಾತನ ಸಂಸ್ಕೃತಿಯ ಭಾವಗೀತವೇ ಆಗಿದ್ದಾರೆ ಎಂದು ಸ್ಟುಡೆಂಟ್ಸ್ ಎಜ್ಯುಕೇಶನ್ ಸಂಸ್ಥೆಯ ಚೇರ್‌ಮನ್ ಪ್ರೊ. ರಾಜೇಶ ಕುಲಕರ್ಣಿ ಅಭಿಪ್ರಾಯಪಟ್ಟರು.

ನಗರದ ಸನ್ಮಾರ್ಗ ಪದವಿಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜರುಗಿದ ‘ರಾಷ್ಟ್ರೀಯ ಯುವದಿನ ಸಮಾರಂಭ’ದಲ್ಲಿ ಮಾತನಾಡಿದರು.

ಪ್ರೊ. ರಾಹುಲ್ ಒಡೆಯರ್ ಮಾತನಾಡುತ್ತಾ, ವಿವೇಕಾನಂದರ ಪಾತ್ರ ನಿರ್ಮಾಣದ ಉಲ್ಲೇಖ ಮಾಡಿ, ಕೇವಲ ಉದ್ಯೋಗ ಪಡೆಯುವ ಉದ್ದೇಶದಿಂದ ಅಲ್ಲದೆ, ಸಮಾಜಕ್ಕೆ ಉಪಯುಕ್ತವಾಗುವ ದೃಷ್ಟಿಯಿಂದ ಯುವಕರು ತಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದರು.

ಯುವದಿನದ ಆಚರಣೆಯ ಪೂರ್ವದಲ್ಲಿ ಆಡಳಿತಾಧಿಕಾರಿಗಳಾದ ಎಂ.ಸಿ. ಹಿರೇಮಠ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ತಮ್ಮ ಭಾವನಮನಗಳನ್ನು ಸಲ್ಲಿಸಿದರು. ಸಮಾರಂಭದಲ್ಲಿ ಪ್ರಾಚಾರ್ಯ ಪ್ರೊ. ಪ್ರೇಮಾನಂದ ರೋಣದ, ನಿರ್ದೇಶಕರಾದ ಪ್ರೊ. ರೋಹಿತ್ ಒಡೆಯರ್, ಪ್ರೊ. ಸೈಯದ್ ಮತೀನ ಮುಲ್ಲಾ, ಪ್ರೊ. ಪುನೀತ ದೇಶಪಾಂಡೆ ಉಪಸ್ಥಿತರಿದ್ದರು.

ರೋಣದಲ್ಲಿ ಕಬಡ್ಡಿ ವೈಭವ: ನಿರೀಕ್ಷೆ ಮೀರಿ ಸೇರಿದ ಕ್ರೀಡಾ ಪ್ರೇಮಿಗಳು

0

ವಿಜಯಸಾಕ್ಷಿ ಸುದ್ದಿ, ರೋಣ: ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ (ಮಿಥುನ್) ಪಾಟೀಲರ ಜನ್ಮದಿನದ ನಿಮಿತ್ತ ಏರ್ಪಡಿಸಿದ್ದ ಪ್ರೋ ಕಬಡ್ಡಿ ವೀಕ್ಷಿಸಲು ನಿರೀಕ್ಷೆಗೂ ಮೀರಿ ಕ್ರೀಡಾಪ್ರೇಮಿಗಳು ಪಾಲ್ಗೊಂಡಿದ್ದರು.

ಕಬಡ್ಡಿ ವೈಭವ ವೀಕ್ಷಿಸಲು ಅನುವಾಗುವಂತೆ 4 ಸಾವಿರ ಜನ ಕುಳಿತು ಪಂದ್ಯಗಳನ್ನು ಆಸ್ವಾದಿಸುವಂತೆ ಗ್ಯಾಲರಿಯನ್ನು ನಿರ್ಮಿಸಲಾಗಿತ್ತು. ಆದರೆ, ಜ 13, ಕೊನೆಯ ದಿನ ನಿರೀಕ್ಷೆ ಮೀರಿ ಕ್ರೀಡಾ ಪ್ರೇಮಿಗಳು ಆಗಮಿಸಿದ್ದರಿಂದ ಸಂಘಟಕರು ಜನ ಸಾಗರವನ್ನು ನಿಯಂತ್ರಿಸಲು ಹರಸಾಹಸಪಡಬೇಕಾಯಿತು.

ಕಬಡ್ಡಿ ಫೈನಲ್ ಪಂದ್ಯದ ನಿಮಿತ್ತ ಮಹಿಳೆಯರ ಕಬಡ್ಡಿ ಪಂದ್ಯಾವಳಿಗಳನ್ನು ವೀಕ್ಷಿಸಲು ಅಂದಾಜು 2 ಸಾವಿರಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾದಂತೆ ಪೊಲೀಸ್ ಭದ್ರತೆಯನ್ನೂ ಹೆಚ್ಚಿಸಲಾಯಿತು. ಶಾಸಕ ಜಿ.ಎಸ್. ಪಾಟೀಲ ಕೂಡ ಕಳೆದ ನಾಲ್ಕು ದಿನಗಳಿಂದ ಮಗನ ಜನ್ಮದಿನದ ನಿಮಿತ್ತ ನಡೆದ ಕಾರ್ಯಕ್ರಮಗಳಿಗೆ ಆಗಮಿಸಿರಲಿಲ್ಲ. ಕೊನೆಯ ದಿನ ರಾತ್ರಿ ಕಬಡ್ಡಿ ಪಂದ್ಯಗಳನ್ನು ವೀಕ್ಷಿಸಲು ಶಾಸಕರು ಆಗಮಿಸಿದ್ದು ಕಬಡ್ಡಿ ಪಂದ್ಯಾವಳಿಗಳಿಗೆ ಮತ್ತಷ್ಟು ಮೆರುಗು ನೀಡಿತ್ತು.

ಮಕರ ಸಂಕ್ರಾಂತಿ ಸಂಭ್ರಮ| ಕೆ.ಆರ್‌ ಮಾರುಕಟ್ಟೆಯಲ್ಲಿ ಜನಸಂದಣಿ, ಹೂ–ಹಣ್ಣುಗಳ ಬೆಲೆ ದುಬಾರಿ!

0

ಬೆಂಗಳೂರು: ಇಂದು ನಾಡಿನೆಲ್ಲೆಡೆ ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ.

ಸುಗ್ಗಿಯ ಸಂಭ್ರಮದಲ್ಲಿ ರಾಜ್ಯದ ಗ್ರಾಮೀಣ ಭಾಗಗಳಷ್ಟೇ ಅಲ್ಲದೆ ಸಿಲಿಕಾನ್ ಸಿಟಿ ಬೆಂಗಳೂರಲ್ಲೂ ಹಬ್ಬದ ಉತ್ಸಾಹ ಜೋರಾಗಿದೆ. ಸಂಕ್ರಾಂತಿಗೆ ಬೇಕಾದ ಹೂ, ಹಣ್ಣು, ಕಬ್ಬು, ತರಕಾರಿ ಖರೀದಿಗೆ ಜನರು ಕೆ.ಆರ್‌ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದಾರೆ.

ಸೂರ್ಯ ಮಕರ ರಾಶಿಗೆ ಪ್ರವೇಶಿಸುವ ದಿನವಾಗಿ ಆಚರಿಸುವ ಸಂಕ್ರಾಂತಿ ಹಬ್ಬಕ್ಕೆ ಎಳ್ಳು–ಬೆಲ್ಲ ಹಂಚಿ ಸಂತೋಷ ಪಡುತ್ತಾರೆ. ಅದಕ್ಕಾಗಿ ರೆಡಿಮೇಡ್ ಎಳ್ಳು–ಬೆಲ್ಲಕ್ಕೂ ಭರ್ಜರಿ ಬೇಡಿಕೆ ಕಂಡುಬಂದಿದೆ. ಆದರೆ ಪ್ರತಿವರ್ಷದಂತೆ ಈ ಬಾರಿ ಕೂಡ ಹೂವಿನ ದರ ಗಗನಕ್ಕೇರಿದ್ದು, ಗ್ರಾಹಕರ ಜೇಬಿಗೆ ಬರೆ ಎಳೆದಿದೆ.

ಹೂವಿನ ದರ (ಕೆ.ಆರ್‌ ಮಾರುಕಟ್ಟೆ):

ಕನಕಾಂಬರ: ₹700 – ₹800
ಕಾಕಡ: ₹500 – ₹600
ಗುಲಾಬಿ: ₹80
ಸೇವಂತಿ: ₹70
ಹಣ್ಣು ಹಾಗೂ ಇತರೆ ವಸ್ತುಗಳ ಬೆಲೆ:
ಕಬ್ಬು (ಜೋಡಿ): ₹150 – ₹250
ಸೇಬು: ₹160
ದಾಳಿಂಬೆ: ₹140
ಅವರೆಕಾಯಿ: ₹80 – ₹100

ಹಬ್ಬದ ಸಂಭ್ರಮದ ನಡುವೆ ಬೆಲೆ ಏರಿಕೆಯಿಂದ ಜನರು ಸ್ವಲ್ಪ ಅಸಮಾಧಾನಗೊಂಡರೂ, ಸಂಕ್ರಾಂತಿ ಹಬ್ಬವನ್ನು ಭಕ್ತಿಭಾವದಿಂದ ಹಾಗೂ ಸಂಪ್ರದಾಯದಂತೆ ಆಚರಿಸಲು ಜನರು ಮುಂದಾಗಿದ್ದಾರೆ.

ಯುಪಿ ವಾರಿಯರ್ಸ್‌ ವಿರುದ್ಧ 7 ವಿಕೆಟ್ ಗಳ ಜಯ; 2 ಸೋಲಿನ ಬಳಿಕ ಗೆಲುವಿನ ಖಾತೆ ತೆರೆದ ಡೆಲ್ಲಿ ಕ್ಯಾಪಿಟಲ್ಸ್

0

ಶಫಾಲಿ ವರ್ಮಾ ಅವರ ಆಲ್‌ರೌಂಡರ್‌ ಆಟ ಹಾಗೂ ಲಿಜೆಲ್‌ ಲೀ ಅವರ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಯುಪಿ ವಾರಿಯರ್ಸ್‌ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಇದರೊಂದಿಗೆ ಸತತ ಎರಡು ಸೋಲಿನಿಂದ ಕಂಗಾಲಾಗಿದ್ದ ಡೆಲ್ಲಿ WPLನಲ್ಲಿ ಗೆಲುವಿನ ಖಾತೆ ತೆರೆದಿದೆ. ನವಿ ಮುಂಬೈನ ಡಿವೈ ಪಾಟೀಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಯುಪಿ ವಾರಿಯರ್ಸ್‌ ತಂಡ, ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 154 ರನ್‌ಗಳನ್ನು ಗಳಿಸಿತು. 155 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌, 20 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ಕಳೆದುಕೊಂಡು 158 ರನ್‌ಗಳನ್ನು ಮಾಡಿ ಸುಲಭ ಜಯ ಸಾಧಿಸಿತು.

ಗುರಿ ಬೆನ್ನಟ್ಟುವ ವೇಳೆ ಡೆಲ್ಲಿ ಪರ ಲಿಜೆಲ್‌ ಲೀ ಹಾಗೂ ಶಫಾಲಿ ವರ್ಮಾ ಮೊದಲ ವಿಕೆಟ್‌ಗೆ 94 ರನ್‌ಗಳ ಅಮೂಲ್ಯ ಜೊತೆಯಾಟ ನೀಡಿದರು. ಲಿಜೆಲ್‌ ಲೀ 44 ಎಸೆತಗಳಲ್ಲಿ 67 ರನ್‌ಗಳ ಭರ್ಜರಿ ಇನಿಂಗ್ಸ್‌ ಆಡಿದರು. ಶಫಾಲಿ ವರ್ಮಾ 32 ಎಸೆತಗಳಲ್ಲಿ 36 ರನ್‌ ಸೇರಿಸಿದರು. ಲಾರಾ ವೋಲ್ವಾರ್ಡ್‌ ಔಟಾಗದೇ 24 ಎಸೆತಗಳಲ್ಲಿ 25 ರನ್‌, ಜೆಮಿಮಾ ರೊಡ್ರಿಗಸ್‌ 12 ಎಸೆತಗಳಲ್ಲಿ 21 ರನ್‌ ಗಳಿಸಿ ಗೆಲುವಿಗೆ ಸಹಾಯ ಮಾಡಿದರು. ಯುಪಿ ಪರ ದೀಪ್ತಿ ಶರ್ಮಾ 2 ಹಾಗೂ ಆಶಾ ಸೋಭಾನಾ 1 ವಿಕೆಟ್‌ ಪಡೆದರು.

ಇದಕ್ಕೂ ಮೊದಲು ಯುಪಿ ವಾರಿಯರ್ಸ್‌ ಪರ ಹರ್ಲೀನ್ ಡಿಯೋಲ್ 38 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 47 ರನ್‌ ಗಳಿಸಿದರೆ, ಮೆಗ್ ಲ್ಯಾನಿಂಗ್ 38 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸ್‌ ಸಹಿತ 54 ರನ್‌ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಫೋಬೆ ಲಿಚ್‌ಫೀಲ್ಡ್‌ 20 ಎಸೆತಗಳಲ್ಲಿ 27 ರನ್‌, ಶ್ವೇತಾ ಸೆಹ್ರಾವತ್‌ 12 ಎಸೆತಗಳಲ್ಲಿ 11 ರನ್‌ ಗಳಿಸಿದರು.

ಡೆಲ್ಲಿ ಪರ ಬೌಲಿಂಗ್‌ನಲ್ಲಿ ಮರಿಜಾನ್ನೆ ಕಪ್ಪ್ ಹಾಗೂ ಶಫಾಲಿ ವರ್ಮಾ ತಲಾ 2 ವಿಕೆಟ್‌ ಕಿತ್ತರು. ನಂದಿನಿ ಶರ್ಮಾ, ಸ್ನೇಹ್‌ ರಾಣಾ ಮತ್ತು ಶ್ರೀ ಚರಣಿ ತಲಾ 1 ವಿಕೆಟ್‌ ಪಡೆದುಕೊಂಡರು.

BBK12: ಮಿಡ್ ವೀಕ್ ಎಲಿಮಿನೇಷನ್; ರಾತ್ರೋರಾತ್ರಿ ʻಬಿಗ್‌ ಬಾಸ್‌ʼ ಮನೆಯಿಂದ ಧ್ರುವಂತ್‌ ಔಟ್!

0

ʻಬಿಗ್ ಬಾಸ್ʼ ಮನೆಗೆ ಒಂಟಿಯಾಗಿ ಎಂಟ್ರಿ ಕೊಟ್ಟ ಧ್ರುವಂತ್‌, ತಮ್ಮದೇ ವಿಭಿನ್ನ ಸ್ಟೈಲ್‌ನಿಂದ ವೀಕ್ಷಕರನ್ನು ಸಿಕ್ಕಾಪಟ್ಟೆ ಎಂಟರ್‌ಟೈನ್‌ ಮಾಡಿದ್ದರು.

ವಾರದಷ್ಟೇ ಅಲ್ಲ, ಇಡೀ ಸೀಸನ್‌ನಲ್ಲೇ ʻಕಿಚ್ಚನ ಚಪ್ಪಾಳೆʼ ಪಡೆದುಕೊಂಡ ಸ್ಪರ್ಧಿಯಾಗಿದ್ದ ಧ್ರುವಂತ್‌, ಕಿಚ್ಚ ಸುದೀಪ್ ಅವರ ಮೆಚ್ಚುಗೆಗೂ ಪಾತ್ರರಾಗಿದ್ದರು. ಈ ಚಪ್ಪಾಳೆಯ ಬಳಿಕ ಧ್ರುವಂತ್ ಅವರ ಆತ್ಮವಿಶ್ವಾಸವೂ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗಿತ್ತು.

ಆದರೆ ʻಒನ್ ಮ್ಯಾನ್ ಆರ್ಮಿʼ ಆಗಿ ಆಟ ಆಡುತ್ತಿದ್ದೇನೆ ಎಂದುಕೊಂಡಿದ್ದ ಧ್ರುವಂತ್‌ಗೆ ಮಿಡ್‌ವೀಕ್ ಎಲಿಮಿನೇಷನ್‌ನಲ್ಲಿ ಭಾರೀ ಶಾಕ್ ಎದುರಾಗಿದೆ. 100ಕ್ಕೂ ಹೆಚ್ಚು ದಿನಗಳ ಕಾಲ ʻಬಿಗ್ ಬಾಸ್ʼ ಮನೆಯಲ್ಲಿ ಉಳಿದಿದ್ದ ಅವರು, ಕೊನೆಯ ಕ್ಷಣದಲ್ಲಿ ಶೋನಿಂದ ಹೊರಬಿದ್ದಿದ್ದಾರೆ.
ಶೋಗೆ ಎಂಟ್ರಿ ಕೊಟ್ಟ ಕೆಲವೇ ವಾರಗಳಲ್ಲಿ ʻಈ ಶೋ ನನಗಲ್ಲ, ಇಲ್ಲಿರೋದಕ್ಕೆ ಇಷ್ಟ ಇಲ್ಲ, ನಾನು ಹೊರಗೆ ಹೋಗಬೇಕುʼ ಎಂದು ಪದೇಪದೇ ಹೇಳುತ್ತಿದ್ದ ಧ್ರುವಂತ್‌, ವೀಕೆಂಡ್ ಎಪಿಸೋಡ್‌ನಲ್ಲೇ ಕಿಚ್ಚ ಸುದೀಪ್ ಅವರ ಎದುರು ʻನಾನು ಮನೆಗೆ ಹೋಗ್ತೀನಿʼ ಎಂದು ಹೇಳಿದ್ದರು. ಆದರೆ ಸೀಕ್ರೆಟ್ ರೂಮ್‌ಗೆ ಹೋಗಿ ಬಂದ ನಂತರ ಅವರ ಆಟದಲ್ಲೇ ದೊಡ್ಡ ಬದಲಾವಣೆ ಕಂಡುಬಂದಿತ್ತು.

ಸೀಕ್ರೆಟ್ ರೂಮ್‌ನ ಅನುಭವದ ಬಳಿಕ ಧ್ರುವಂತ್ ಅವರ ಆತ್ಮವಿಶ್ವಾಸ ದ್ವಿಗುಣಗೊಂಡಿದ್ದು, ಟಾಸ್ಕ್‌ಗಳಲ್ಲೂ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದರು. ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಧ್ರುವಂತ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಿಗೆ ದೊಡ್ಡ ನಿರಾಸೆ ತಂದಿದೆ.

ಧ್ರುವಂತ್ ಹೊರಬಿದ್ದ ಬಳಿಕ ಇದೀಗ ಅಶ್ವಿನಿ ಗೌಡ, ಧನುಷ್, ಗಿಲ್ಲಿ ನಟ, ಕಾವ್ಯ ಶೈವ, ರಘು ಹಾಗೂ ರಕ್ಷಿತಾ ಶೆಟ್ಟಿ ಫಿನಾಲೆಗೆ ಪ್ರವೇಶ ಪಡೆದ ಸ್ಪರ್ಧಿಗಳಾಗಿ ಉಳಿದಿದ್ದಾರೆ.

error: Content is protected !!