Home Blog Page 18

ವೇಶ್ಯಾವಾಟಿಕೆ ಮಾಡುವಂತೆ ಅತ್ತೆಯ ಕಿರುಕುಳ; ಮನನೊಂದ ಗೃಹಿಣಿ ಸೂಸೈಡ್!

0

ಬೀದರ್:- ವೇಶ್ಯಾವಾಟಿಕೆ ಮಾಡುವಂತೆ ಕಿರುಕುಳ ಕೊಡುತ್ತಿದ್ದ ಅತ್ತೆಯಿಂದ ಮಾನಸಿಕವಾಗಿ ನೊಂದಿದ್ದ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಬಸವಕವಲ್ಯಾಣ ನಗರದ ಓಂ ನಗರದಲ್ಲಿ ನಡೆದಿದೆ.

22 ವರ್ಷದ ಅಂಜನಾಬಾಯಿ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದು ಮೃತಪಟ್ಟಿದ್ದಾರೆ. ಗಂಡ ಶೇಖರ್, ಅತ್ತೆ ಅರುಣಾಬಾಯಿ, ಮಾವ ಚಂದ್ರಕಾಂತ ಅವರ ಕಿರುಕುಳದಿಂದ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಂದೆ ವಿಜಯ್‌ ಕುಮಾರ್‌ ಬಸವಕಲ್ಯಾಣ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ಅತ್ತೆ ಅರುಣಾಬಾಯಿ ತನ್ನ ಮಗಳಿಗೆ ವೇಶ್ಯವಾಟಿಕೆ ಮಾಡುವಂತೆ ಮಾನಸಿಕ ಕಿರುಕುಳ ನೀಡುತ್ತಿದ್ದಳು ಎಂದು ವಿಜಯ್‌ ಕುಮಾರ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರಿನ ಅನ್ವಯ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Gold Rate Today: ಗೋಲ್ಡ್ ಪ್ರಿಯರಿಗೆ ಬಿಗ್ ಶಾಕ್; ಚಿನ್ನ, ಬೆಳ್ಳಿ ಬೆಲೆ ಏರಿಕೆ; ಇಲ್ಲಿದೆ ದರಪಟ್ಟಿ

0

ಗೋಲ್ಡ್ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಚಿನ್ನ, ಬೆಳ್ಳಿ ಬೆಲೆ ಮತ್ತೆ ಏರಿಕೆ ಆಗಿದೆ.

ಚಿನ್ನದ ಬೆಲೆ ಗ್ರಾಮ್​ಗೆ ಮುನ್ನೂರಕ್ಕೂ ಹೆಚ್ಚು ರೂಗಳಷ್ಟು ಏರಿಕೆ ಕಂಡಿದ್ದು, ಆಭರಣ ಚಿನ್ನದ ಬೆಲೆ ಮತ್ತೆ 14,000 ರೂ ಗಡಿ ದಾಟಿ ಹೋಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,43,550 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,56,600 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,43,550 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 28,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 28,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಫೆಬ್ರವರಿ 8ಕ್ಕೆ):-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,660 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,355 ರೂ.

18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,745 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,660 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,355 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ.

ಗದಗ | ಬೆಳ್ಳಂಬೆಳಿಗ್ಗೆ ಸ್ಕೂಟಿಗೆ ಬೆಂಕಿ – ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ ವಾಹನ!

0

ಗದಗ: ನಗರದ ಜುಮ್ಮಾ ಮಸೀದಿ ಸಮೀಪ ಇಂದು ಬೆಳ್ಳಂಬೆಳಿಗ್ಗೆ ಸ್ಕೂಟಿಗೆ ಅಚಾನಕ್ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ನೋಡ ನೋಡುತ್ತಿದ್ದಂತೆ ಸ್ಕೂಟಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿ ಹೋಗಿದೆ.

ಬೆಂಕಿಗೀಡಾದ ಸ್ಕೂಟಿ ಚಿನ್ನದ ಅಂಗಡಿ ಮಾಲೀಕರೊಬ್ಬರಿಗೆ ಸೇರಿದ್ದಾಗಿ ತಿಳಿದು ಬಂದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಘಟನೆ ನಡೆದ ಸ್ಥಳ ಟೌನ್ ಪೊಲೀಸ್ ಠಾಣೆಯ ವ್ಯಾಪ್ತಿಗೆ ಸೇರಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಆನೇಕಲ್| ಕಾಡಾನೆ ದಾಳಿಗೆ ರೈತ ಸಾವು, ಮಗ ಗಂಭೀರ!

0

ಆನೇಕಲ್:- ತಮಿಳುನಾಡು – ಕರ್ನಾಟಕ ಗಡಿ ಭಾಗದ ಬ್ಯಾಲದ ಕೆರೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ರೈತರೊಬ್ಬರು ಸಾವನ್ನಪ್ಪಿದ ಘಟನೆ ಜರುಗಿದೆ.

ಮೃತ ರೈತನನ್ನು ವೆಂಕಟೇಶ್ ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಬೈಕ್‌ನಲ್ಲಿ ಮಗನೊಂದಿಗೆ ತೆರಳುತ್ತಿದ್ದ ವೆಂಕಟೇಶ್‌ ಅವರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದಾಳಿಯಲ್ಲಿ ಅವರ ಮಗ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆನೆಯನ್ನು ಕಾಡಿಗೆ ಓಡಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಗಂಗನಹಳ್ಳಿ ಬಳಿ ರೈತನ ಮೃತದೇಹವನ್ನು ಮುಖ್ಯರಸ್ತೆಯಲ್ಲಿ ಇಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಪ್ರಸಂಗವೂ ಜರುಗಿದೆ.

ಕಂಠ ಪೂರ್ತಿ ಕುಡಿದು ಸಿಕ್ಕ ಸಿಕ್ಕ ವಾಹನಗಳಿಗೆ ಡಿಕ್ಕಿ; ಪ್ರಶ್ನಿಸಿದ ಕ್ಯಾಬ್ ಚಾಲಕನಿಗೆ ಮದ್ಯದ ಬೆರಳು ತೋರಿಸಿದ ಯುವತಿಯರು!

0

ಬೆಂಗಳೂರು:- ಬನ್ನೇರುಘಟ್ಟ ರಸ್ತೆ ಹುಳಿಮಾವು ಬಳಿ ಕಂಠಪೂರ್ತಿ ಮದ್ಯ ಸೇವಿಸಿ ಹಾದಿ ಬೀದಿಯಲ್ಲಿ ಇಬ್ಬರು ಯುವತಿಯರು ರಂಪಾಟ ನಡೆಸಿದ ಘಟನೆ ಜರುಗಿದೆ.

ದ್ವಿಚಕ್ರ ವಾಹನದಲ್ಲಿದ್ದ ಕಂಠ ಪೂರ್ತಿ ಕುಡಿದ್ದಿದ್ದ ಯುವತಿಯರು, ಸಿಕ್ಕ ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಕ್ಯಾಬ್‌ ಚಾಲಕನಿಗೆ ಡಿಕ್ಕಿ ಹೊಡೆದು ಜಗಳ ಮಾಡಿದ್ದಾರೆ.

ಕ್ಯಾಬ್‌ ಚಾಲಕ ನಿಮ್ಮದೇ ತಪ್ಪು ಎಂದಿದ್ದಕ್ಕೆ ಮದ್ಯದ ಬೆರಳು ತೋರಿಸಿ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಕೆಲ ಕ್ಷಣ ಟ್ರಾಫಿಕ್‌ ಜಾಮ್‌ ಆಗಿ ಜನರು ಸೇರಿದ್ದಾರೆ.

ಜನ ಸೇರುತ್ತಿದ್ದಂತೆ ಸ್ಥಳದಿಂದ ಇಬ್ಬರೂ ಪರಾರಿಯಾಗಲು ಯತ್ನಿಸಿದ್ದಾರೆ. ಪರಾರಿಯಾಗುತ್ತಿದ್ದಂತೆ ಸ್ಥಳೀಯರು ಬೆನ್ನಟ್ಟಿ ಯುವತಿಯರನ್ನು ಹಿಡಿದಿದ್ದಾರೆ. ನಂತರ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರ ಮೇಲೂ ಯುವತಿಯರು ಅಸಭ್ಯ ವರ್ತನೆ ತೋರಿದ್ದಾರೆ. ಮದ್ಯದ ನಶೆಯಲ್ಲಿ ತೇಲಾಡುತ್ತಿದ್ದ ಇಬ್ಬರನ್ನು ಪೋಲೀಸರು ಠಾಣೆಗೆ ಕರೆದೊಯ್ದು ಬುದ್ದಿ ಹೇಳಿ ಕಳುಹಿಸಿದ್ದಾರೆ.

ಕೈಕೊಟ್ಟ ಪ್ರಿಯತಮೆ; ಡೆತ್ ನೋಟ್ ಬರೆದಿಟ್ಟು ಬಾಡಿ ಬಿಲ್ಡರ್ ಸೂಸೈಡ್!

0

ಬೆಂಗಳೂರು:- ಮಹಾಲಕ್ಷ್ಮಿ ಲೇಔಟ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರೀತಿಸಿದ ಯುವತಿ ಕೈ ಕೊಟ್ಟ ಹಿನ್ನೆಲೆ ಮನನೊಂದು ಬಾಡಿ ಬಿಲ್ಡರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.

26 ವರ್ಷದ ಕಿರಣ್ ಮೃತ ಬಾಡಿ ಬಿಲ್ಡರ್. ಮೃತ ಕಿರಣ್ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಯುವತಿ ಬೇರೆ ಯುವಕನೊಂದಿಗೆ ತನ್ನ ಮದುವೆ ನಿಶ್ಚಯವಾಗಿದೆ ಎಂದು ಮದುವೆಯ ಆಮಂತ್ರಣ ಪತ್ರಿಕೆ ಹಾಗೂ ಹೊಸ ಸೀರೆಯನ್ನು ತೋರಿಸಿದ್ದಳು. ಇದರಿಂದ ಮನನೊಂದ ಕಿರಣ್ ಮನೆಗೆ ಬಂದು ರೂಂನ ಬಾಗಿಲು ಲಾಕ್ ಮಾಡಿಕೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯ ಡೋರ್ ಓಪನ್ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಯುವತಿಗೆ ಮದುವೆಯ ನಿಶ್ಚಯವಾಗಿರುವ ವಿಷಯ ತಿಳಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿರುವ ಕಿರಣ್, ಆತ್ಮಹತ್ಯೆಗೆ ಪ್ರೇಯಸಿ ಹಾಗೂ ಆಕೆಯ ತಾಯಿಯೇ ಕಾರಣ ಅಂತಾ ಬರೆದಿದ್ದು, ತನ್ನ ಮೊಬೈಲ್ ಪಾಸ್‌ವರ್ಡ್ ಅನ್ನು ಕೂಡ ಪತ್ರದಲ್ಲಿ ಉಲ್ಲೇಖಿಸಿ ಬಳಿಕ ನೇಣಿಗೆ ಶರಣಾಗಿದ್ದಾನೆ.

ರೋಟರಿ ಸಂಸ್ಥೆ ಗದಗ-ಬೆಟಗೇರಿಗೆ `ರೋಟರಿ ಜಿಲ್ಲಾ ಪ್ರಶಸ್ತಿ’

0

ವಿಜಯಸಾಕ್ಷಿ ಸುದ್ದಿ, ಗದಗ: 2024-25ನೇ ಸಾಲಿನಲ್ಲಿ ಗದಗ-ಬೆಟಗೇರಿ ರೋಟರಿ ಸಂಸ್ಥೆಯು ಕೈಗೊಂಡ ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ಗುರುತಿಸಿ ರೋಟರಿ ಜಿಲ್ಲೆ 3170 ಅನೇಕ ಪ್ರಶಸ್ತಿ ಹಾಗೂ ಮನ್ನಣೆ ನೀಡಿದೆ.

ಕೊಲ್ಹಾಪೂರದಲ್ಲಿ ನಡೆದ 67ನೇ ಜಿಲ್ಲಾ ಸಮ್ಮೇಳನದಲ್ಲಿ ಜಿಲ್ಲಾ ಮಾಜಿ ಗವರ್ನರ್ ರೊ. ಶರದ ಪೈಯವರು ಸಂಸ್ಥೆಗೆ ಉತ್ತಮ ಸದಸ್ಯರ ಸಂಯೋಜಕ ಸಂಸ್ಥೆ ಹಾಗೂ ಉತ್ತಮ ಸಾಮಾಜಿಕ ಸೇವೆ ಸಂಸ್ಥೆಯೆಂದು ಪ್ರಶಸ್ತಿ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಮಾಜಿ ಅಸಿಸ್ಟಂಟ್ ಗವರ್ನರ್ ರೊ. ಶಿವಾಚಾರ್ಯ ಎಸ್.ಹೊಸಳ್ಳಿಮಠರಿಗೆ ರೋಟರಿ ಕ್ಲಬ್ ಗದಗ -ಬೆಟಗೇರಿ, ರೋಟರಿ ಕ್ಲಬ್ ಗಜೇಂದ್ರಗಡ ಹಾಗೂ ಗದಗ ರೋಟರಿ ಸೆಂಟ್ರಲ್ ಸಂಸ್ಥೆಗಳಿಗೆ ಉತ್ತಮ ಮಾರ್ಗದರ್ಶನ ಹಾಗೂ ಸಲಹೆ ನೀಡಿದನ್ನು ಪರಿಗಣಿಸಿ ಉತ್ತಮ ಅಸಿಸ್ಟಂಟ್ ಗವರ್ನರ್ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಮಾಜಿ ಅಧ್ಯಕ್ಷರಾದ ರೊ. ಡಾ. ಆರ್.ಬಿ. ಉಪ್ಪಿನ, ಕಾರ್ಯದರ್ಶಿಗಳಾದ ರೊ. ಸಂತೋಷ ಅಕ್ಕಿ, ರೊ. ಶಿವಾಚಾರ್ಯ ಹೊಸಳ್ಳಿಮಠ, ಅಧ್ಯಕ್ಷರಾದ ರೊ. ಡಾ. ಆರ್.ಕೆ. ಗಚ್ಛಿನಮಠ, ರೊ. ಬಾಲಕೃಷ್ಣ ಕಾಮತ್, ರೊ. ಶ್ರೀಧರ ಸುಲ್ತಾನಪೂರ ಸಮ್ಮೇಳನದಲ್ಲಿ ಭಾಗವಹಿಸಿದ್ದರು. 2024-25 ನೇ ಸಾಲಿನ ಅಧ್ಯಕ್ಷರಾದ ರೊ. ಡಾ. ಆರ್.ಬಿ. ಉಪ್ಪಿನ ಎಲ್ಲ ಸದಸ್ಯರನ್ನು ಅಭಿನಂದಿಸಿದರು.

ಬಲ್ದೋಟ ವಿರೋಧಿ ಹೋರಾಟಕ್ಕೆ ಶತದಿನ ಪೂರ್ಣ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಚುನಾವಣೆ ಬಂದಾಗ ಇಡೀ ಕೊಪ್ಪಳ ಜನ ಚುನಾವಣೆ ಬಹಿಷ್ಕಾರದ ಘೋಷಣೆ ಮಾಡಬೇಕು, ಮತ ಹಾಕಲ್ಲ ಎಂದು ನಿರ್ಣಯಿಸಿ ಹೋರಾಡಬೇಕು ಎಂದು ಪೂಜ್ಯ ಶ್ರೀ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಕರೆ ನೀಡಿದರು.

ಅವರು ನಗರಸಭೆ ಹತ್ತಿರದ ಹೋರಾಟದ ವೇದಿಕೆಯ ಹಿಂದುಗಡೆ ನಿರ್ಮಿಸಿದ ಬೃಹತ್ ವೇದಿಕೆಯಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ನಡೆದ ಬಲ್ದೋಟ ಕಾರ್ಖಾನೆಗಳ ವಿರೋಧಿ ಧರಣಿ ಸತ್ಯಾಗ್ರಹದ 100ನೇ ದಿನದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಹಳ್ಳಿಗಳಿಗೆ ಭೇಟಿ ನೀಡಿದಾಗ ನಮಗೆ ಅಲ್ಲಿನ ನರಕ ಪರಿಚಯ ಆಯಿತು. ಮಹಾತ್ಮ ಗಾಂಧಿ ಅವರ ಸರ್ವೋದಯ ಪರಿಕಲ್ಪನೆಯಲ್ಲಿ ಪರಿಸರ, ಕೃಷಿ, ಆರೋಗ್ಯ, ಶಿಕ್ಷಣ ಮತ್ತು ಆಡಳಿತ ಸುಧಾರಣೆ ಆದರೆ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಎನ್ನಬಹುದು. ದುರಾದೃಷ್ಟವಶಾತ್ ಇಲ್ಲಿ ಇವುಗಳ ಸ್ಥಿತಿ ಏನಾಗಿದೆ ಎಂದು ಪ್ರಶ್ನಿಸಿದರು.

ಈ ಹೋರಾಟ ಯಶಸ್ವಿಯಾಗಬೇಕು ಅಂದರೆ ಜನ ಸಂಘಟನೆ ಆಗಬೇಕಿದೆ. ಆಗ ಮಾತ್ರ ಅದು ಸಾಧ್ಯ. ಗೆಲ್ಲಬೇಕು ಎಂದರೆ ನಡೆ-ನುಡಿ ಶುದ್ಧವಾಗಿರಬೇಕು. ಕಾರ್ಖಾನೆ ವಿಸ್ತರಣೆ ಮಾಡಬಾರದು, ಎಚ್ಚರಿಕೆ ಕೊಡಬೇಕು ಅಲ್ಲದೇ ನಿಗಾ ವಹಿಸಬೇಕು. ಫೆ. 24ರ ಹೋರಾಟಕ್ಕೆ ಎಲ್ಲಾ ಜನಪ್ರತಿನಿಧಿಗಳು ಬರಲಿ, ನಾವೂ ಬರುತ್ತೇವೆ. ಮುಖ್ಯಮಂತ್ರಿ ಅವರನ್ನು ಭೇಟಿ ಮಾಡೋಣ, ಹೋರಾಟ ನಿಲ್ಲಿಸಬೇಕಾದರೆ ಕಾರ್ಖಾನೆ ನಿಲ್ಲಿಸಬೇಕು ಎಂದರು.

ಕಾರ್ಖಾನೆಗಳ ವಿಸ್ತರಣೆ ಮತ್ತು ಹೊಸ ಕಾರ್ಖಾನೆಗಳ ಸ್ಥಾಪನೆ ವಿರೋಧಿಸಿ ನಡೆದ ಸುದೀರ್ಘ ಹೋರಾಟದ ಭಾಗವಾಗಿ 2025ರ ಫೆ. 24ರಂದು ಗವಿಸಿದ್ಧೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಬಂದ್ ಮಾಡಿ ಹೋರಾಟ ಮಾಡಲಾದ ನೆನಪು ಹಾಗೂ ಹೋರಾಟ ತೀವ್ರಗೊಳಿಸುವ ನಿಟ್ಟಿನಲ್ಲಿ ಮತ್ತೊಮ್ಮೆ ಬೃಹತ್ ಹೋರಾಟ ಹಾಗೂ ಬಂದ್ ಕರೆ ಕೊಡಲಾಗಿದೆ. ಗವಿಮಠದಿಂದ ತಾಲೂಕು ಕ್ರೀಡಾಂಗಣದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಸುಮಾರು 10 ಸಾವಿರಕ್ಕೂ ಅಧಿಕ ಜನರು, ವಿದ್ಯಾರ್ಥಿಗಳು, ಮಹಿಳೆಯರು ಸೇರಿಸುವ ಗುರಿ ಇಡಲಾಗಿದೆ.

ಮುಖ್ಯ ಅತಿಥಿಗಳಾಗಿ ಧಾರವಾಡ ಸಾಹಿತಿ, ಚಿಂತಕ ರಂಜಾನ್ ದರ್ಗಾ, ನಗರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಲೂರು, ರಂಗಕರ್ಮಿ, ಕವಿ, ಸಾಹಿತಿ ಸೂರ್ಯಕಾಂತ ಗುಣಕಿಮಠ, ಧಾರವಾಡ ಸಾಹಿತಿ ಅಸ್ಲಂ ದರ್ಗಾ, ಮಹಿಳಾ ಧುರೀಣೆ ಜ್ಯೋತಿ ಎಂ.ಗೊಂಡಬಾಳ, ಸುಜಾತಾ ಗುರುರಾಜ ಹಲಗೇರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ಆರೋಗ್ಯದ ಕುರಿತು ಮಾತನಾಡಿದರು. ಇದೇ ಸಮಯದಲ್ಲಿ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಡಾ. ಮಂಜುನಾಥ ಸಜ್ಜನ್ ನೇತೃತ್ವದಲ್ಲಿ ನಡೆಸಿದರು.

ಹೋರಾಟದಲ್ಲಿ ಡಿ.ಎಸ್. ಕೌಜಲಗಿ, ಎಚ್.ಎಸ್. ಪಾಟೀಲ್, ಎ.ಎಂ. ಮದರಿ, ಡಿ.ಎಂ. ಬಡಿಗೇರ, ಬಿ.ಜಿ. ಕರಿಗಾರ, ದಾನಪ್ಪ ಕವಲೂರು ಭಾಗ್ಯನಗರ, ಎಸ್.ಬಿ. ರಾಜೂರು, ಜಿ.ಬಿ. ಪಾಟೀಲ್, ಕಾವ್ಯಾ ಪ್ರಸನ್ನ ಗಡಾದ್, ಶಂಭುಲಿಂಗಪ್ಪ ಹಲಗೇರಿ, ಬಸವರಾಜ ಬಳ್ಳೊಳ್ಳಿ, ಪ್ರಭು ಹೆಬ್ಬಾಳ ವೇದಿಕೆಯಲ್ಲಿದ್ದರು.

ಮಂಜುನಾಥ ಜಿ.ಗೊಂಡಬಾಳ ಸ್ವಾಗತಿಸಿ, ಮಾತನಾಡಿದರು. ಪ್ರಾಸ್ತಾವಿಕವಾಗಿ ಶಿವಕುಮಾರ ಕುಕನೂರು, ಹೋರಾಟದ ಅನುಭವದ ನುಡಿಯನ್ನು ಡಿ.ಎಚ್. ಪೂಜಾರ ನುಡಿದರು.

ತುಂಗಭದ್ರಾ ವಿಷಗೊಳಿಸುವ ಕಾರ್ಖಾನೆಗಳನ್ನು ಮುಚ್ಚಿಸಬೇಕು, ಅಲ್ಲಿಯವರೆಗೆ ಶುದ್ಧ ಸಂಸ್ಕರಿಸಿದ ನೀರನ್ನು ಜನ-ಜಾನುವಾರುಗಳಿಗೆ ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳಬೇಕು. ಬಸಾಪುರ ಸಾರ್ವಜನಿಕ ಕೆರೆಯನ್ನು ಕೂಡಲೇ ಮರಳಿ ಜನರಿಗೆ ಬಿಟ್ಟು ಕೊಡಬೇಕು. ಭದ್ರಶ್ರೀ ಕಾರ್ಖಾನೆ ವಿಸ್ತರಣೆಗೆ ವಿರೋಧಿಸಿ ಹೋರಾಟ ತೀವ್ರಗೊಳಿಸುವುದು ಸೇರಿ ಇತರೆ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಜಿ.ಎಸ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಡಂಬಳ: ನಮ್ಮ ದೇಶ ಸಾವಿರಾರು ದೇವರನ್ನು ಪೂಜಿಸುವ, ಆರಾಧಿಸುವ ಸಂಸ್ಕೃತಿ, ಪರಂಪರೆ, ಶ್ರೇಷ್ಠತೆಯ ಪ್ರತೀಕವಾಗಿದೆ. ಆ ಹಿನ್ನೆಲೆಯಲ್ಲಿ ಅಭಿವೃದ್ಧಿ ಜೊತೆಗೆ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಡಂಬಳ ಹೋಬಳಿಯ ಶಿವಾಜಿನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಂಡೂರ ಗ್ರಾಮದಲ್ಲಿ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಯೋಜನೆಯಡಿಯಲ್ಲಿ ಲೋಕಾಮಸಂದ ದೇವಸ್ಥಾನದ ಕಾಮಗಾರಿ, ಶ್ರೀ ಸೇವಾಲಾಲ ಸಮುದಾಯ ಭವನ ಕಟ್ಟಡ ನಿರ್ಮಾಣ ಕಾಮಗಾರಿ, ಗುರೇಶ ಲಕ್ಕವ್ವ ದೇವಸ್ಥಾನದ ಜೀರ್ಣೋದ್ಧಾರ, ಗಿರೀಶ್ ಸೋಮಲಪ್ಪ ನಾಯಕ ಇವರ ಮನೆಯಿಂದ ಚಂದ್ರು ಲಾಲಪ್ಪ ನಾಯಕ ಇವರ ಮನೆಯವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಸರ್ಕಾರದ ಅಭಿವೃದ್ಧಿ ಕೆಲಸಗಳು ಉಳಿಯುತ್ತವೆ. ಟೀಕೆಗಳು ಸಾಯುತ್ತವೆ. ಆದ್ದರಿಂದ ಯಾವುದೇ ಟೀಕೆಗೆ ಎದೆಗುಂದದೆ ಸರ್ಕಾರದ ಗ್ಯಾರಂಟಿ ಕಾರ್ಯಕ್ರಮಗಳು ಜನರನ್ನು ತಲುಪುತ್ತಿವೆ. ಚುನಾವಣಾ ಸಂದರ್ಭದಲ್ಲಿ ರಾಜ್ಯದ ಜನರಿಗೆ ಭರವಸೆ ನೀಡಿದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ರಾಜ್ಯದ ಎಲ್ಲಾ ಜನರಿಗೆ ಒಂದಲ್ಲ ಒಂದು ಸೌಲಭ್ಯಗಳು ತಲುಪುವಂತೆ ಮಾಡುವಲ್ಲಿ ಸರ್ಕಾರ ಶ್ರಮಿಸುತ್ತಿದೆ. ರಾಜ್ಯದಲ್ಲಿ 56 ಸಾವಿರ ಕೋಟಿ ರೂ.ಗಳನ್ನು ವಾರ್ಷಿಕವಾಗಿ ಗ್ಯಾರಂಟಿ ಯೋಜನೆಗೆ ಬಳಸಲಾಗುತ್ತಿದೆ. ಶಕ್ತಿ ಯೋಜನೆಯಡಿ ರಾಜ್ಯದಲ್ಲಿ 600 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ.

ಮುಂದೆ ಬರುವ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಶಕ್ತಿಯನ್ನು ನೀಡಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕಾ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ. ಮೋರನಾಳ, ಉಪಾಧ್ಯಕ್ಷ ಕುಮಾರಸ್ವಾಮಿ ಹಿರೇಮಠ, ಈಶಪ್ಪ ಓಲಿ, ಮುಖಂಡರಾದ ಮಹೇಶ ಗಡಗಿ, ಕುಬೇರ ನಾಯಕ, ಬಸವರಡ್ಡಿ ಬಂಡಿಹಾಳ, ಗೋಪಾಲ ಲಮಾಣಿ, ಬಾಬುಸಾಬ ಮೂಲಿಮನಿ, ಮಲ್ಲಿಕಾರ್ಜುನ ಪ್ಯಾಟಿ, ತೇಜಪ್ಪ ರಾಮಚಂದ್ರಪ್ಪ, ಗೋವಿಂದ ಲಮಾಣಿ, ನಾಗರಾಜ ಸಜ್ಜನ, ಶರಣಪ್ಪ ಚೆನ್ನಳ್ಳಿ, ಆನಂದ ಲಮಾಣಿ, ಕುಬೇರ ಲಮಾಣಿ, ಶಿವಪ್ಪ ನಾಯಕ, ಮಲ್ಲೇಶ ಲಮಾಣಿ, ಸಂತೋಷ ಲಮಾಣಿ, ಠಾಕೋರ ಲಮಾಣಿ, ಶಂಕ್ರಪ್ಪ ಲಮಾಣಿ, ಗಂಗಪ್ಪ ಲಮಾಣಿ, ಸೋಮು ನಾಯಕ ತಹಸೀಲ್ದಾರ ಯರಿಸ್ವಾಮಿ, ಸಿಪಿಐ ಯಶವಂತ ಬಿಸನಳ್ಳಿ, ಜಿ.ಪಂ ಕಾರ್ಯನಿರ್ವಾಹಕ ಅಭಿಯಂತರ ನರಲೇಕರ, ಆರ್‌ಡಬ್ಲುಎಸ್ ಮಂಜುನಾಥ ಕಲಬುರ್ಗಿ, ಕಂದಾಯ ಅಧಿಕಾರಿ ಪ್ರಭು ಬಾಗಲಿ ಸೇರಿದಂತೆ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಇದ್ದರು.

ಸರ್ಕಾರಿ ಬಸ್‌ನಲ್ಲಿ ಮಹಿಳೆಯರು ರಾಜ್ಯಾದ್ಯಂತ ಉಚಿತವಾಗಿ ಓಡಾಡಬಹುದಾಗಿದೆ. 200 ಯೂನಿಟ್‌ವರೆಗೆ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆಯಡಿ 2 ಸಾವಿರ ರೂ. ಕಲ್ಪಿಸಲಾಗುತ್ತದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ರ ನೇತೃತ್ವದ ಸರ್ಕಾರ ಯಾವುದೇ ಧರ್ಮ, ಜಾತಿ ನೋಡಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಸರ್ಕಾರದ ಗ್ಯಾರಂಟಿ ಯೋಜನೆಗಳು ಎಲ್ಲಾ ಜನರಿಗೂ ತಲುಪುತ್ತಿದ್ದು, ನುಡಿದಂತೆ ನಡೆಯುತ್ತಿರುವ ಸರ್ಕಾರ ನಮ್ಮದಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಶಿವಮೊಗ್ಗ| ಖಾಸಗಿ ಆಸ್ಪತ್ರೆಯಲ್ಲಿ ಮೃಗಾಲಯದ 15 ವರ್ಷದ ಗಂಡು ಚಿರತೆಗೆ ಸ್ಕ್ಯಾನಿಂಗ್!

0

ಶಿವಮೊಗ್ಗ:- ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯದಲ್ಲಿ ಅನಾರೋಗ್ಯಕ್ಕೀಡಾದ 15 ವರ್ಷದ ಗಂಡು ಚಿರತೆಯನ್ನು ತುರ್ತಾಗಿ ನಂಜಪ್ಪ ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಮಾಡಲಾಯಿತು.

ಕಳೆದ ಎರಡು ದಿನದಿಂದ ಚಿರತೆ ನಿತ್ರಾಣಗೊಂಡಿದ್ದದರಿಂದ, ಮೃಗಾಲಯದ ವೈದ್ಯರು ತುರ್ತಾಗಿ ಸ್ಕ್ಯಾನಿಂಗ್‌ ಅಗತ್ಯವಿದೆ ಎಂದು ಸೂಚಿಸಿದ್ದರು. ಶಿವಮೊಗ್ಗ ಮೃಗಾಲಯದಲ್ಲಿ ಹಾಗೂ ಪಶುವೈದ್ಯಕೀಯ ಕಾಲೇಜಿನಲ್ಲಿ ಎಂಆರ್‌ಐ ಸೌಲಭ್ಯದ ಕೊರತೆ ಇದ್ದುದರಿಂದ, ಚಿರತೆಯನ್ನು ಮಂಪರು ಇಂಜೆಕ್ಷನ್ ನೀಡಿ ಮೃಗಾಲಯದ ವಾಹನದಲ್ಲಿ ನಂಜಪ್ಪ ಆಸ್ಪತ್ರೆಗೆ ಕರೆತಂದು, ಬೆಳಗಿನ ಹೊತ್ತಿನಲ್ಲಿ ಜನ ಹೆಚ್ಚಿರುವ ಹಿನ್ನೆಲೆಯಲ್ಲಿ ಮಧ್ಯರಾತ್ರಿಯಲ್ಲಿಯೇ ಸ್ಕ್ಯಾನಿಂಗ್‌ ಮಾಡಲಾಯಿತು.

ಸ್ಕ್ಯಾನಿಂಗ್ ಪ್ರಕ್ರಿಯೆ ಸುಮಾರು ಅರ್ಧ ಗಂಟೆ ನಡೆಯಿತು.

error: Content is protected !!